ಬಿಗ್ ಬಾಸ್ ಕನ್ನಡ ಸೀಸನ್ 11’ ತನ್ನ ಥ್ರಿಲ್ ಮತ್ತು ಡ್ರಾಮಾದಿಂದ ಪ್ರೇಕ್ಷಕರನ್ನು ಮನರಂಜಿಸುತ್ತಾ 70 ದಿನಗಳನ್ನು ದಾಟಿದ್ದು, ಈಗ ಉಳಿದಿರುವ ಕೆಲವೇ ವಾರಗಳಲ್ಲಿ ಸ್ಪರ್ಧಿಗಳ ನಡುವೆ ಕಠಿಣ ಸ್ಪರ್ಧೆ ಇನ್ನೂ ಹೆಚ್ಚಾಗಿದೆ. ಇತ್ತೀಚೆಗಿನ ಟಾಸ್ಕ್ನಲ್ಲಿ ತ್ರಿವಿಕ್ರಮ್, ಐಶ್ವರ್ಯಾ, ಮತ್ತು ಭವ್ಯಾ ನಡುವೆ ನಡೆದ ಘಟನೆ ಮನೆಯಲ್ಲಿ ಮಾತ್ರವಲ್ಲ, ಪ್ರೇಕ್ಷಕರ ನಡುವೆ ಸಹ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಜಿಮ್ನಲ್ಲಿ ತ್ರಿವಿಕ್ರಮ್ ವರ್ಕೌಟ್ ಮಾಡುತ್ತಿದ್ದರು. ಆಗ ಭವ್ಯಾ ಅವರು ಎಣ್ಣೆ ಸವರೋಕೆ ಬಂದರು. ತ್ರಿವಿಕ್ರಮ್ ಬೆನ್ನಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಐಶ್ವರ್ಯಾ ಅವರು ಸ್ವಿಮ್ಮಿಂಗ್ಫೂಲ್ಗೆ ಬಿದ್ದಿದ್ದಾರೆ. ಹಿಂದೆ ಮುಂದೆ ನೋಡದೆ ತ್ರಿವಿಕ್ರಮ್ ಅವರು ಹೋಗಿ ಐಶ್ವರ್ಯಾ ಅವರನ್ನ ರಕ್ಷಣೆ ಮಾಡಿದ್ದಾರೆ. ಇದು ಭವ್ಯಾ ಕೋಪಕ್ಕೆ ಕಾರಣವಾಗಿದೆ.
ಅಂದಹಾಗೆ, ಇದು ನಿಜವಾಗಿಯೂ ನಡೆದಿದ್ದಲ್ಲ ಪಕ್ಕಾ ಸ್ಕ್ರಿಪ್ಟೆಡ್. ಬಿಗ್ ಬಾಸ್ ಒಂದು ದಿನಸಿ ಟಾಸ್ಕ್ ನೀಡಿದ್ದರು. ಈ ಟಾಸ್ಕ್ನಲ್ಲಿ ಗೆಲ್ಲಬೇಕು ಎಂದರೆ ಬಿಗ್ ಬಾಸ್ ಹೇಳಿದ ರೀತಿಯೇ ನಡೆದುಕೊಳ್ಳಬೇಕಿತ್ತು ಮತ್ತು ಅದು ನಿಜ ಎಂಬ ರೀತಿಯಲ್ಲಿ ಕಾಣಿಸಬೇಕಿತ್ತು. ಈ ಕಾರಣಕ್ಕೆ ತ್ರಿವಿಕ್ರಮ್ ಹಾಗೂ ಭವ್ಯಾ ಅವರು ಹಾಗೇ ನಟನೆ ಮಾಡಿದ್ದಾರೆ. ಬಳಿಕ ಎಲ್ಲರೂ ಸಹಜ ಸ್ಥಿತಿಗೆ ಬಂದಿದ್ದಾರೆ.ಸ್ಪರ್ಧಿಗಳು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಸೂರೆಗೊಂಡರೂ, ಈ ರೀತಿಯ ಸಂದರ್ಭಗಳು ಮನೆಯಲ್ಲಿ ಮೂಡಿಸುತ್ತಿರುವ ಡ್ರಾಮಾ ಮತ್ತು ನಿರೀಕ್ಷೆ ಬಿಗ್ ಬಾಸ್ ಶೋಗೆ ಹೊಸ ತಿರುವನ್ನು ನೀಡುತ್ತಿದೆ.