ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ಗೆ ಮತ್ತೊಂದು ಮೆಗಾ ಟ್ವಿಸ್ಟ್ ಸಿಕ್ಕಿದೆ. ಉಳಿದಿರೋ 12 ಮಂದಿಯಲ್ಲಿ ವಿನ್ನಿಂಗ್ ಕಪ್ ಗೆಲ್ಲೋಕೆ ಒಬ್ಬರಿಗೆ ಮಾತ್ರ ಸಾಧ್ಯ. ಇದೇ ಸತ್ಯವನ್ನ ಕಿಚ್ಚ ಸುದೀಪ್ ಅವರು ಮನೆಯ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ವಾರದ ಪಂಚಾಯ್ತಿಯಲ್ಲಿ ಕ್ಲಾರಿಟಿ ಸಿಕ್ಕ ಮೇಲೆ ಆಟದ ಕಿಚ್ಚು ಹೆಚ್ಚಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಯಾರು ಗೆಳೆಯರಲ್ಲ. ಯಾರೂ ಶಾಶ್ವತ ಗೆಳತಿಯರೂ ಇಲ್ಲ. ಮಂಜು ಹಾಗೂ ಗೌತಮಿ ಅವರು ಇಷ್ಟು ದಿನ ಗೆಳೆಯ, ಗೆಳತಿ ಅಂತ ಸಿಕ್ಕಾಪಟ್ಟೆ ಮಾತನಾಡುತ್ತಿದ್ದರು. ಮೋಕ್ಷಿತಾ, ಗೌತಮಿ ಅವರ ಗಲಾಟೆಯ ಮಧ್ಯೆ ಮಂಜು ಹಾಗೂ ಗೌತಮಿ ಒಟ್ಟಿಗೆ ಆಟದ ದಾಳ ಉರುಳಿಸುತ್ತಿದ್ದರು. ಆದ್ರೀಗ ಮಂಜು, ಗೌತಮಿ ಮಧ್ಯೆ ಕಾಂಪಿಟೇಷನ್ ಟಫ್ ಆಗಿದೆ.
ಸೂಪರ್ ಸಂಡೇ ವಿತ್ ಬಾದ್ ಷಾ ಎಪಿಸೋಡ್ನಲ್ಲಿ ಮಂಜು, ಗೌತಮಿ ಅವರ ಮತ್ತೊಂದು ಮುಖವಾಡ ಬಯಲಾಗಿದೆ. ಯಾರ ಕಡೆಯಿಂದ ಈ ಮನೆಗೆ ಜಾಸ್ತಿ ಕಾಂಟ್ರಿಬ್ಯುಷನ್ ಅನ್ನಿಸುತ್ತೋ ಅವರ ಫೋಟೋವನ್ನ ಇಳಿಮುಖವಾಗಿ ಜೋಡಿಸೋ ಟಾಸ್ಕ್ ನೀಡಲಾಗಿದೆ. ಈ ಆಟದಲ್ಲಿ ಮಂಜು ಅವರು ಗೌತಮಿ ಅವರ ವಿರುದ್ಧ ಮಾತನಾಡಿದ್ದು ಬಿಗ್ ಬಾಸ್ ಮನೆಯ ವಾತಾವರಣ ಮತ್ತೆ ಬದಲಾಗಿದೆ.
12 ಮಂದಿಯಲ್ಲಿ ಯಾರು ಟಿಆರ್ಪಿಯಲ್ಲಿ ಟಾಪ್ ಇದ್ದಾರೆ ಅನ್ನೋ ಲೆಕ್ಕಾಚಾರದಲ್ಲಿ ಮಂಜು ಅವರು ಗೌತಮಿಗೆ 5ನೇ ಸ್ಥಾನ ನೀಡಿದ್ದಾರೆ. ಮೋಕ್ಷಿತಾಗೆ 8 ಹಾಗೂ ಹನುಮಂತುಗೆ ಟಾಪ್ 12ನೇ ಸ್ಥಾನದಲ್ಲಿ ಇಡಲಾಗಿದೆ. ಗೌತಮಿ ಅವರದ್ದು ಸೌಂಡ್ ಮಾಡುವಂತದ್ದು ಏನು ಇಲ್ಲ ಈ ಮನೆಯಲ್ಲಿ ಅಂತ ಮಂಜು ಹೇಳಿದ್ದು ಗೌತಮಿಗೆ ಗೆಳಯನ ಮಾತು ಬಿಗ್ ಶಾಕ್ ಕೊಟ್ಟಿದೆ. ಗೆಳೆಯ, ಗೆಳತಿ ಅನ್ನೋ ಆಟ ಬಿಗ್ ಬಾಸ್ ಮನೆಯಲ್ಲಿ ನಡೆಯೋದಿಲ್ಲ ಅನ್ನೋದು ಬಿಗ್ ಬಾಸ್ ಮನೆಯಲ್ಲಿ ಮತ್ತೊಮ್ಮೆ ಪ್ರೂವ್ ಆಗಿದೆ.
ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಕಿಲಾಡಿ ಆಟ ಆಡೋದಕ್ಕೆ ಬಂದಿರೋದು. ಅದರಲ್ಲೂ ಹನುಮಂತು ಅವರದ್ದು ಪ್ರೊಫೆಷನಲ್ ಕಿಲಾಡಿ ಅಂತ ರಜತ್ ಅವರು ಹೇಳಿದ್ದಾರೆ. ಹನುಮಂತುಗೆ ಎಲ್ಲಾ ಗೊತ್ತು ಆದರೆ ಏನು ಗೊತ್ತಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಯಲ್ಲಿ ಮುಂದಿನ ವಾರಕ್ಕೆ ಮತ್ತಷ್ಟು ರೋಚಕ ಆಟಕ್ಕೆ ಈಗ ವೇದಿಕೆ ಸಜ್ಜುಗೊಳಿಸಲಾಗಿದೆ.