ಬಿಗ್ ಬಾಸ್ ಮನೆಯಲ್ಲಿ ಮಹಾರಾಜ ಯುವರಾಣಿ ಆಟ ಮುಂದುವರೆದಿದೆ. ಎರಡು ಬಣಗಳಾಗಿ ಸ್ಪರ್ಧಿಗಳು ವಿಭಜನೆಗೊಂಡಿದ್ದಾರೆ. ವಾರದ ಟಾಸ್ಕ್ ಗಾಗಿ ಎರಡು ಬಣದ ನಡುವೆ ಕಿತ್ತಾಟ ನಡೆದಿದೆ.
ಮಂಜು – ಮೋಕ್ಷಿತಾ ಅವರ ಬಣಕ್ಕೆ ‘ಮಣ್ಣಿನ ಅಸ್ತ್ರ’ ಎನ್ನುವ ಟಾಸ್ಕ್ ನೀಡಲಾಗಿದೆ. ಈ ಟಾಸ್ಕ್ನಲ್ಲಿ ಮಂಜು – ರಜತ್ ನಡುವೆ ವಾಗ್ವಾದ ನಡೆದಿದೆ. ಯಾರಾದ್ರು ತಳ್ಳಿದರೆ ಸರಿಯಾಗಿ ತಳ್ಳುತ್ತೇನೆ. ಬುರುಡೆ ಹೊಡೆಯುತ್ತೇನೆ ಎಂದು ರಜತ್ ಹೇಳಿದ್ದಾರೆ. ಇದಕ್ಕೆ ಮಂಜು ನೀನ್ ದೊಡ್ಡ ರೌಡಿನಾ ಬುರುಡೆ ಹೊಡಿಯೋಕೆ ಎಂದು ಮಾತಿಗೆ ಮಾತು ಬೆಳೆಸಿ ಹಲ್ಲೆಗೆ ಬರುವಂತೆ ವಾಗ್ವಾದ ನಡೆಸಿದ್ದಾರೆ.
ಇನ್ನು ರಜತ್ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟ ದಿನದಿಂದಲೂ ಮಾತಿನ ಮೂಲಕ ಎಲ್ಲರನ್ನೂ ಕೆಣಕುತ್ತಿದ್ದಾರೆ. ಈಗ ಅವರಿಗೆ ಉಗ್ರಂ ಮಂಜು ಟಾರ್ಗೆಟ್ ಆಗಿದ್ದಾರೆ. ಮಂಜುಗೆ ರೋಗಿಷ್ಟ ಎಂದು ರಜತ್ ಹೇಳಿದ್ದಾರೆ. ಇಂದಿನ ಸಂಚಿಕೆಯಲ್ಲಿ ಈ ವಿಷಯ ಪ್ರಸಾರ ಆಗಲಿದೆ. ‘ಕಲರ್ಸ್ ಕನ್ನಡ’ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ರಜತ್ಗೆ ವಾರಾಂತ್ಯದಲ್ಲಿ ಸುದೀಪ್ ಕ್ಲಾಸ್ ತೆಗೆದುಕೊಳ್ಳಬಹುದು.