ಬಿಗ್ ಬಾಸ್ ಸ್ಪರ್ಧಿ ಶೋಭಾ ಶೆಟ್ಟಿ ಮನೆಯಿಂದ ಹೋಗಿ ಆಗಿದೆ. ಈ ಮನೆಯಿಂದ ತಾವೇ ಹೋಗಿರೋದನ್ನ ಕ್ಯಾಮರಾ ಮುಂದೆ ಹೇಳಿಕೊಂಡಿದ್ದಾರೆ. ಶೊಭಾ ಶೆಟ್ಟಿ ಅವರ ಈ ಒಂದು ನಿರ್ಧಾರಕ್ಕೆ ಕಿಚ್ಚ ಸುದೀಪ್ ರಿಸ್ಪೆಕ್ಟ್ ಕೊಟ್ಟಿದ್ದಾರೆ. ಬಿಗ್ ಬಾಸ್ ಕೂಡ ಇದನ್ನ ಪರಿಗಣಿಸಿದ್ದಾರೆ. ನಿನ್ನೆವರೆಗೂ ಶೋಭಾ ಶೆಟ್ಟಿ ಮನೆಯಲ್ಲಿಯೇ ಇರ್ತಾರಾ? ಇರಲ್ವಾ? ಅನ್ನೋ ಡೌಟ್ ಕೂಡ ಇತ್ತು. ಆದರೆ, ನಿನ್ನೆಯ ದಿನದ ಎಪಿಸೋಡ್ ನೋಡಿದ್ಮೇಲೆ ಒಂದು ಅರ್ಥ ಆಗಿದೆ. ಶೋಭಾ ಶೆಟ್ಟಿ ಮನೆಯಿಂದ ಹೋಗಿದ್ದಾರೆ ಅನ್ನೋದು ತಿಳಿದಿದೆ. ಇದೀಗ ಇದೇ ಶೋಭಾ ಶೆಟ್ಟಿ ಒಂದು ಕೆಲಸ ಮಾಡಿದ್ದಾರೆ. ಹೊರಗೆ ಹೋದ್ಮೇಲೆ ಒಂದು ಲೆಟರ್ ಬರೆದಿದ್ದಾರೆ.
‘ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್ ಬಾಸ್ ಪಯಣ ಮುಗಿದಿದೆ. ಆಟದ ಮೇಲೆ ಗಮನ ಕೊಡಲು ಆರೋಗ್ಯ ಸಹಕರಿಸುತ್ತಿಲ್ಲ. ಮುನ್ನಡೆಯುವ ಇಚ್ಛೆಯಿದ್ದರೂ ದೇಹ ಮುಂದುವರಿಯಲು ಬಿಡುತ್ತಿಲ್ಲ. ಯಾರನ್ನೂ ಯಾವುದನ್ನೂ ನಾನು ಹಗುರವಾಗಿ ತೆಗೆದುಕೊಂಡಿಲ್ಲ. ಜೀವನದ ಜವಬ್ದಾರಿಗಳಿಗೆ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನಾನು ಈ ನಿರ್ಧಾರ ಮಾಡಿರುವೆ’ ಎಂದು ಪತ್ರ ಆರಂಭಿಸಿದ್ದಾರೆ ಶೋಭಾ ಶೆಟ್ಟಿ.
‘ಇದೆಲ್ಲದರ ಮಧ್ಯೆ ನೀವು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ. ತಿಳಿದೋ ತಿಳಿಯದೆಯೋ ನನ್ನಿಂದ ಯಾರಿಗಾದರೂ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ. ನನ್ನ ಜನರಿಗೆ, ಕಲರ್ಸ್ ಕನ್ನಡ ತಂಡಕ್ಕೆ ಹಾಗು ನಿನ್ನ ಪ್ರೀತಿಯ ಕಿಚ್ಚ ಸುದೀಪ್ ಸರ್ ನಿಮಗೆ ಧನ್ಯವಾದಗಳು’ ಎಂದಿದ್ದಾರೆ ಅವರು.
‘ಹೊಸ ಹುರುಪಿನೊಂದಿಗೆ ನಿಮ್ಮನ್ನು ರಂಜಿಸಲು, ನಿಮ್ಮ ಪ್ರೀತಿಯನ್ನು ಮತ್ತೆ ಪಡೆಯಲು ಮತ್ತೊಂದು ರೂಪದಲ್ಲಿ ಮತ್ತೆ ನಿಮ್ಮ ಮುಂದೆ ಖಂಡಿತಾ ನಾನು ಬರುವೆ’ ಎಂದು ಶೋಭಾ ಅವರು ಭರವಸೆ ನೀಡಿದ್ದಾರೆ. ಈ ಪೋಸ್ಟ್ಗೆ ‘ಪ್ರಯಾಣವು ಅನಿರೀಕ್ಷಿತ ತಿರುವು ಪಡೆಯಿತು. ಆದರೆ ಎಲ್ಲದಕ್ಕೂ ಒಂದು ಕಾರಣವಿದೆ’ ಎಂದು ಬರೆದುಕೊಂಡಿದ್ದಾರೆ. ಇವರ ಈ ಒಂದು ಲೆಟರ್ ವೈರಲ್ ಆಗಿದೆ. ಎಲ್ಲರ ಗಮನ ಸೆಳೆದಿದೆ.
ಈ ಪೋಸ್ಟ್ಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ನಿಮಗೋಸ್ಕರ ಕನ್ನಡ ಬಿಗ್ ಬಾಸ್ ನೋಡುತ್ತಾ ಇದ್ದೆ ಶೋಭಾ ಅವರೇ. ಆರೋಗ್ಯದ ಬಗ್ಗೆ ಎಚ್ಚರಿಕೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ಆಟಕ್ಕಿಂತ ಆರೋಗ್ಯ ಮುಖ್ಯ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಒಟ್ಟಾರೆ, ಶೋಭಾ ಶೆಟ್ಟಿ ಲೆಟರ್ ಮೂಲಕ ಎಲ್ಲರಿಗೂ ಕ್ಷಮೆ ಕೇಳಿದ್ದಾರೆ. ಸಪೋರ್ಟ್ ಮಾಡಿದವರಿಗೆ ಥ್ಯಾಂಕ್ಸ್ ಹೇಳಿದ್ದಾರೆ ಅಂತಲೇ ಹೇಳಬಹುದು.