ಕನ್ನಡದ ಬಿಗ್ಬಾಸ್ 89ನೇ ದಿನಕ್ಕೆ ಕಾಲಿಟ್ಟು ಮುನ್ನುಗ್ಗುತ್ತಿದೆ. ಇದೇ ಹೊತ್ತಲ್ಲಿ ಬಿಗ್ಬಾಸ್ ಐದು ಸ್ಪರ್ಧಿಗಳಿಗೆ ಕ್ಯಾಪ್ಟನ್ಸಿ ಟಾಸ್ಕ್ ಕೊಟ್ಟಿದ್ದಾರೆ. ಇದೇ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭವ್ಯಾ ಗೌಡ ಮೋಸ ಮಾಡಿ ಜಯಶಾಲಿಯಾಗಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಮೂರನೇ ಬಾರಿ ಕ್ಯಾಪ್ಟನ್ ಆಗಿದ್ದಾರೆ. ಆದರೆ, ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದೆ. ಭವ್ಯಾ ಅವರು ಬಾಲ್ ಅನ್ನು ಅನುಮತಿಯಿಲ್ಲದೆ ತೆಗೆದುಕೊಂಡರು ಎಂಬ ಆರೋಪವಿದೆ. ರಜತ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಹೌದು, ಕನ್ನಡದ ಬಿಗ್ಬಾಸ್ ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಇದೇ ಹೊತ್ತಲ್ಲಿ ಬಿಗ್ಬಾಸ್ ಮನೆ ಮಂದಿಗೆ ಕ್ಯಾಪ್ಟನ್ಸಿ ಟಾಸ್ಕ್ವೊಂದನ್ನು ನೀಡಿದ್ದಾರೆ. ಬಿಗ್ಬಾಸ್ ರೆಸಾರ್ಟ್ ಟಾಸ್ಕ್ನಲ್ಲಿ 29 ಸಾರ್ಸ್ಗಳನ್ನು ಪಡೆದುಕೊಂಡಿದ್ದ ಭವ್ಯಾ ಗೌಡ ಟೀಮ್ ಕ್ಯಾಪ್ಟನ್ಸಿ ಟಾಸ್ಕ್ ಆಯ್ಕೆಯಾಗಿತ್ತು.
ಹೀಗಾಗಿ ಅದೇ ತಂಡದ 5 ಸ್ಪರ್ಧಿಗಳಿಗೆ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಕೊಟ್ಟಿದ್ದರು ಬಿಗ್ಬಾಸ್. ಐದು ಸ್ಪರ್ಧಿಗಳು ಸಾಲಾಗಿ ನಿಂತುಕೊಂಡಿರಬೇಕು. ಆಗ ಬಿಗ್ಬಾಸ್ ಹೇಳುವ ನಂಬರ್ನಲ್ಲಿರೋ ಚೆಂಡುಗಳನ್ನು ಓಡಿಹೋಗಿ ಹಿಡಿದು ಬಾಸ್ಕೆಟ್ನಲ್ಲಿ ಹಾಕಬೇಕು. ಇದೇ ಟಾಸ್ಕ್ನಲ್ಲಿ ಬಿಗ್ಬಾಸ್ ಮೊದಲು 9 ನಂಬರಿನ ಗೊಂಚಲಿನಿಂದ ಚಂಡುಗಳನ್ನು ತೆಗೆದುಕೊಂಡು ಹೋಗಲು ಹೇಳುತ್ತಾರೆ. ಆಗ ಎಲ್ಲರೂ ಓಡಿ ಹೋಗಿ ಆ ಚೆಂಡನ್ನು ಹಿಡಿಯುತ್ತಾರೆ. ಆಗ ಇದೇ ವೇಲೆ 3ನೇ ಗೊಂಚಲಿನಿಂದ ಚಂಡೊಂದು ಬಿಳುತ್ತದೆ.
ಆದರೆ ಇದು ಉಸ್ತುವಾರಿಗಳು ಗಮನಕ್ಕೆ ಬರೋದಿಲ್ಲ. ಆ ಕೂಡಲೇ ಭವ್ಯಾ ಆ ಚೆಂಡನ್ನು ಎತ್ತಿಕೊಂಡು ಬುಟ್ಟಿಗೆ ಹಾಕುತ್ತಾರೆ. ಆಗ ಆ ಅದೇ ಬಾಲ್ ಬುಟ್ಟಿಗೆ ಬಿಳುತ್ತದೆ. ಇದರಿಂದ ಮೊದಲ ಹಂತದಲ್ಲಿ ಭವ್ಯಾ ಗೌಡ ಸೇಪ್ ಆಗುತ್ತಾರೆ. ಇದಾದ ಬಳಿಕ ಮತ್ತೆ ಇದೇ ಪ್ರಕ್ರಿಯೆಯಲ್ಲಿ ಚೆಂಡನ್ನು ಹಾಕಿ ಭವ್ಯಾ ಗೌಡ ಈ ವಾರದ ಕ್ಯಾಪ್ಟನ್ ಆಗುತ್ತಾರೆ.
ಆ ಬಳಿಕ ರಜತ್ ಮತ್ತೊಂದು ವಿಚಾರ ರಿವೀಲ್ ಮಾಡಿದರು. ‘ಅದು ಬಿಗ್ ಬಾಸ್ ಹೇಳಿದ ನಂಬರ್ನ ಗೊಂಚಲ ಬಾಲ್ ಅಲ್ಲವೇ ಅಲ್ಲ. ಬೇರೆಯ ಗೊಂಚಲಿಂದ ಬಿದ್ದ ಬಾಲ್ ಅದು. ನನಗೆ ಕಂಡಿದೆ. ಆದರೆ, ಅಲ್ಲಿ ಅರಚಾಡಿಕೊಂಡು ನನ್ನ ಆಟ ಹಾಳು ಮಾಡಲು ನನಗೆ ಇಷ್ಟ ಇರಲಿಲ್ಲ’ ಎಂದು ರಜತ್ ಹೇಳಿದ್ದಾರೆ. ಇದನ್ನು ಉಸ್ತುವಾರಿಗಳು ಸರಿಯಾಗಿ ನೋಡಿಕೊಂಡಿಲ್ಲ ಎಂದು ಆರೋಪಿಸಲಾಗುತ್ತಿದೆ.
ಭವ್ಯಾ ಅವರಿಗೆ ಈ ಬಾರಿ ಕ್ಯಾಪ್ಟನ್ ಆದರೂ ‘ಮೋಸಗಾರ್ತಿ’ ಎಂಬ ಪಟ್ಟ ಸಿಕ್ಕಿರುವುದರಿಂದ ಸಾಕಷ್ಟು ನೋವಿದೆ. ಒಂದೊಮ್ಮೆ ಮೋಸ ನಡೆದಿದ್ದರೆ ಉಸ್ತುವಾರಿಗಳು ಏಕೆ ಬಾಯ್ಮುಚ್ಚಿಕೊಂಡಿದ್ದರು ಎನ್ನುವ ಪ್ರಶ್ನೆಯೂ ಎದ್ದಿದೆ. ಭವ್ಯಾ ಗೌಡ ಮೋಸದ ಆಟದ ಬಗ್ಗೆ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಪ್ರಸ್ತಾಪ ಮಾಡುತ್ತಾರಾ ಅಂತ ನಾಳಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.