‘ಬಿಗ್ ಬಾಸ್ ಕನ್ನಡ ಸೀಸನ್ 11’ ರಲ್ಲಿ ಹನುಮಂತ ಅವರು ಉತ್ತಮ ಆಟಗಾರರಾಗಿದ್ದಾರೆ. ಆದರೆ, ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭವ್ಯಾ ಜೊತೆಗಿನ ವಾದದ ನಂತರ, ಅವರು ದೊಡ್ಮನೆಯಿಂದ ಹೊರಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ನೆನಪಿನ ಶಕ್ತಿ ಕಡಿಮೆ ಇರುವುದು ಮತ್ತು ಉದ್ದವಾಗಿ ಮಾತನಾಡಲು ಅಸಮರ್ಥತೆ ಇರುವುದು ಇದಕ್ಕೆ ಕಾರಣ ಎಂದು ಹೇಳಿದ್ದಾರೆ.
ಕನ್ನಡದ ಬಿಗ್ಬಾಸ್ ಸೀಸನ್ 11ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಸಖತ್ ಸದ್ದು ಮಾಡುತ್ತಿದ್ದಾರೆ. ತಮ್ಮ ಹಳ್ಳಿ ಸೊಗಡಿನ ರೀತಿಯಲ್ಲೇ ಹಾಡು ಹಾಡಿ ವೀಕ್ಷಕರಿಗೆ ಮನರಂಜನೆ ನೀಡುತ್ತಿರೋ ಹನುಮಂತ ಸಖತ್ ಶೈನ್ ಆಗಿದ್ದಾರೆ. ಆದರೆ ಇದರ ಮಧ್ಯೆ ಬಿಗ್ಬಾಸ್ ನಾನು ಆಚೆ ಹೋಗ್ತೀನಿ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ಬಾಸ್ ಮನೆಗೆ ಬಂದ ಹನುಮಂತ ಉತ್ತಮವಾಗಿ ಆಟ ಆಡುತ್ತಿದ್ದಾರೆ. ಹನುಮಂತನ ತುಂಟಾಟ, ಟಾಸ್ಕ್ ಆಡುವ ಶೈಲಿಗೆ ಎಲ್ಲರೂ ಫಿದಾ ಆಗಿದ್ದಾರೆ. ಆದ್ರೆ ಈ ಮಧ್ಯೆ ಹನುಮಂತ ಅವರು ದೊಡ್ಮನೆಯಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರ 12ನೇ ವಾರದಲ್ಲಿ ಕ್ಯಾಪ್ಟನ್ಸಿ ರೇಸ್ನಲ್ಲಿ ಆರು ಮಂದಿ ಇದ್ದರು. ಇದನ್ನು ಐದಕ್ಕೆ ಇಳಿಕೆ ಮಾಡಲು ಒಂದು ಟಾಸ್ಕ್ ನೀಡಲಾಗಿತ್ತು. ಪಕ್ಷಪಾತಿ, ಜನ ನಿರ್ವಹಣೆಯಲ್ಲಿ ಅಶಕ್ತ ಈ ರೀತಿಯ ನಾಲ್ಕು ಆಯ್ಕೆ ನೀಡಲಾಗಿತ್ತು. ಕ್ಯಾಪ್ಟನ್ಸಿ ರೇಸ್ನಲ್ಲಿ ಇರುವ ಆರು ಮಂದಿಯ ಪೈಕಿ ಒಬ್ಬರ ಗುಣ ಯಾವುದಕ್ಕೆ ಹೊಂದಿಕೆ ಆಗುತ್ತದೆ ಎಂಬುದನ್ನು ಹೇಳಿ ಆ ಬಳಿಕ ಅವರನ್ನು ಸ್ವಿಮ್ಮಿಂಗ್ಪೂಲ್ಗೆ ತಳ್ಳಬೇಕು.
‘ಜನ ನಿರ್ವಹಣೆಯಲ್ಲಿ ಅಶಕ್ತ’ ಮತ್ತಿತ್ಯಾದಿ ಆಯ್ಕೆಯಲ್ಲಿ ಹನುಮಂತ ಅವರು ಭವ್ಯಾ ಹೆಸರನ್ನು ತೆಗೆದುಕೊಂಡರು. ಆದರೆ, ಇದನ್ನು ಭವ್ಯಾ ಅವರು ಒಪ್ಪಿಕೊಳ್ಳಲೇ ಇಲ್ಲ. ಬದಲಿಗೆ ಹನುಮಂತ ಬಳಿ ವಾದಕ್ಕೆ ಇಳಿದರು. ಈ ವಾದವನ್ನು ಮುಂದುವರಿಸಲು ಹನುಮಂತಗೆ ಯಾವುದೇ ಆಸಕ್ತಿ ಇರಲಿಲ್ಲ. ಹೀಗಾಗಿ, ಅವರು ಸುಮ್ಮನಾದರು. ಆದರೆ, ಭವ್ಯಾ ಮಾತ್ರ ಏನೇನೋ ಮಾತನಾಡುತ್ತಲೇ ಇದ್ದರು. ಈ ವಿಚಾರ ಭವ್ಯಾಗೆ ಬೇಸರ ಮೂಡಿಸಿದೆ.
ಇದರಿಂದ ಬೇಸರಗೊಂಡ ಹನುಮಂತ ದೋಸ್ತಾ ಬಸ್ ಬುಕ್ ಮಾಡು, ನಾನು ಊರಿಗೆ ಹೋಗ್ತೀನಿ ಎಂದು ಹನುಮಂತ ಹೇಳಿದರು. ಇದನ್ನು ಕೇಳಿ ಧನರಾಜ್ಗೆ ಶಾಕ್ ಆಗಿದೆ. ಆಗ ಹನುಮಂತ ಅವರನ್ನು ಧನರಾಜ್ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಇದಕ್ಕೆ ಒಪ್ಪಿಕೊಳ್ಳದ ಹನುಮಂತ ಇಲ್ಲಿ ನೆನಪು ಇಟ್ಟುಕೊಂಡು ಮಾತನಾಡುವವರು ಬೇಕು. ನನಗೆ ಯಾವುದೂ ನೆನಪಿನಲ್ಲಿ ಇರಲ್ಲ. ಅಷ್ಟುದ್ದ ಮಾತನಾಡೋಕೆ ಬರಲ್ಲ. ನನಗೆ ನೆನಪಿನ ಶಕ್ತಿ ಕಡಿಮೆ ಇದೆ ಎಂದು ಬೇಸರ ಹೊರ ಹಾಕಿದ್ದಾರೆ.