ನಟ ನಾಗ ಚೈತನ್ಯ ಜೊತೆ ನಟಿ ಶೋಭಿತಾ ಧೂಳಿಪಾಲ ಹೊಸ ಜೀವನ ಆರಂಭಿಸಿದ್ದಾರೆ. ಮದುವೆ ದಿನ ಶೋಭಿತಾ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಸೂಪರ್ ಹಿಟ್ ಹಾಡಿಗೆ ಸಖತ್ ಡ್ಯಾನ್ಸ್ ಮಾಡಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಡಿಸೆಂಬರ್ 4 ರಂದು ಅಕ್ಕಿನೇನಿ ನಾಗ ಚೈತನ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶೋಭಿತಾ ಮದುವೆಗೂ ಮುನ್ನ ಕುಣಿದು ಕುಪ್ಪಳಿಸಿದ್ದಾರೆ. ವಿಡಿಯೋ ತಡವಾಗಿ ಬೆಳಕಿಗೆ ವೈರಲ್ ಆಗ್ತಿದೆ.
ಎರಡು ವರ್ಷಗಳಿಂದ ಅಕ್ಕಿನೇನಿ ನಾಗ ಚೈತನ್ಯ ಜೊತೆ ಡೇಟಿಂಗ್ ಮಾಡ್ತಿದ್ದ ಶೋಭಿತಾ ಧೂಳಿಪಾಲ, ಹಿರಿಯರನ್ನು ಒಪ್ಪಿಸಿ ಅನ್ನಪೂರ್ಣ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಮದುವೆಯಾದರು. ಈ ಮದುವೆಗೆ ಟಾಲಿವುಡ್ನ ಗಣ್ಯರು ಆಗಮಿಸಿ ವಧುವರರನ್ನು ಆಶೀರ್ವದಿಸಿದರು. ಅಷ್ಟರ ಮಟ್ಟಿಗೆ ಶೋಭಿತಾ ಧೂಳಿಪಾಲ ಕೂಡ ಕೆಲ ಮದುವೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಶೋಭಿತಾ ಧೂಳಿಪಾಲ ಅವ್ರು ಮದುವೆಗೆ ಕೆಲವೇ ನಿಮಿಷಗಳಿರುವಾಗ ವಧುವಿನಂತೆ ತಯಾರಾಗಿ ಈ ಡ್ಯಾನ್ಸ್ ಮಾಡಿರುವುದು ವಿಡಿಯೋ ವೈರಲ್ ಆಗ್ತಿದೆ. ಶ್ರದ್ಧಾ, ಮೇರಿ ಶಾದಿ ಹೋ ರಹೀ ಹೈ! ಎಂದು ಶೋಭಿತಾ ಕೂಗಿ ಹೇಳುತ್ತಾ ಹಾಡುಗೆ ಡ್ಯಾನ್ಸ್ ಮಾಡಿದ್ರು. ಅಲ್ಲು ಅರ್ಜುನ್ ಅಭಿನಯದ ಸರೈನೋಡು ಚಿತ್ರದ ಬ್ಲಾಕ್ ಬಸ್ಟರ್ ಹಾಡಿಗೆ ಶೋಭಿತಾ ಡ್ಯಾನ್ಸ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗ್ತಿದೆ.