ಚಿಕ್ಕಬಳ್ಳಾಪುರ: ಪುಷ್ಪ 2: ದಿ ರೂಲ್’ ಸಿನಿಮಾ ವಿಶ್ವದಾದ್ಯಂತ ತೆರೆ ಕಂಡಿದೆ. ಆಘಾತಕಾರಿ ವಿಚಾರ ಏನೆಂದರೆ ಅಲ್ಲು ಅರ್ಜುನ್ ಅವರ ಸಿನಿಮಾ ವೀಕ್ಷಣೆ ಮಾಡಬೇಕು ಎಂಬ ಅವಸರದಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ಫ್ಯಾನ್ ಶೋ ಕಾರ್ಯಕ್ರಮದ ವೇಳೆ ಕಾಲ್ತುಳಿದ ಸಂಭವಿಸಿ 39 ವರ್ಷದ ರೇವತಿ ಅನ್ನೋರು ಜೀವ ಬಿಟ್ಟಿದ್ದಾರೆ. ಇದೇ ದುರ್ಘಟನೆಯಲ್ಲಿ ಆಕೆಯ 9 ವರ್ಷದ ಮಗ ತೇಜ್ ಹಾಗೂ 7 ವರ್ಷದ ಸಾನ್ವಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಇನ್ನೊಂದು ದುರ್ಘಟನೆ ಸಂಭವಿಸಿದೆ. ಪುಪ್ಪ 2 ಸಿನಿಮಾ ನೋಡುವ ಆತುರದಲ್ಲಿ ಯುವಕ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಗೂಡ್ಸ್ ಮತ್ತು ಗೋರಕ್ಪುರ ಏಕ್ಸಪ್ರೇಸ್ ರೈಲುಗಳ ನಡುವೆ ಸಿಲುಕಿ ಯುವಕ ಮೃತಪಟ್ಟಿದ್ದಾರೆ.
ಆಂಧ್ರದ ಶ್ರೀಕಾಕುಳಂ ಮೂಲದ ಪ್ರವೀಣ್ (19) ಮೃತಪಟ್ಟಿದ್ದಾರೆ. ಐಟಿಐ ಮುಗಿಸಿ ಕಳೆದ ಎರಡು ತಿಂಗಳಿಂದೆ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಯುವಕ ಸೇರಿಕೊಂಡಿದ್ದ ಎನ್ನಲಾಗಿದೆ. ಇಂದು ಬೆಳಗ್ಗೆ ಸ್ನೇಹಿತರ ಜತೆ ಪುಷ್ಪ 2 ಸಿನಿಮಾ ನೋಡಲು ಯುವಕ ಬರುತ್ತಿದ್ದ. ಸಿನಿಮಾ ನೋಡುವ ಭರದಲ್ಲಿ ಎರಡು ರೈಲು ಹಳಿಗಳ ನಡುವೆ ಸಿಲುಕಿ ಪ್ರವೀಣ್ ಮೃತಪಟ್ಟಿದ್ದಾರೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ರೈಲ್ವೆ ಹೊರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.