ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11, 12ನೇ ವಾರಕ್ಕೆ ಕಾಲಿಡಲು ಸಜ್ಜಾಗಿದೆ. ಇದೇ ಹೊತ್ತಲ್ಲಿ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. ಹೌದು, ಪ್ರತಿ ವಾರದಂತೆ ಈ ಬಾರಿಯೂ ಬಿಗ್ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ.
ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಈ ವಾರ ಪದೇ ಪದೇ ರಜತ್ ಹಾಗೂ ಧನರಾಜ್ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ರಜತ್ ಹಾಗೂ ಧನರಾಜ್ ಮಧ್ಯೆ ಮಾರಾಮಾರಿ ಸಹ ಆಗಿತ್ತು. ಮೊದಲು ರಜತ್ ಕೆನ್ನೆಗೆ ಧನರಾಜ್ ತಟ್ಟಿದ್ದರು. ಕಳಪೆ ಕೊಡುವಾಗ ಧನರಾಜ್ ಮೇಲೆ ಹಲ್ಲೆಗೆ ರಜತ್ ಯತ್ನಿಸಿದ್ದರು. ರಜತ್ನ ಧನರಾಜ್ ಕೆಣಕಿದ್ರೋ.. ಅಥವಾ ಧನರಾಜ್ಗೆ ರಜತ್ ಬೇಸರ ಮೂಡಿಸಿದ್ರೋ.. ಈ ಟಾಪಿಕ್ ಇಂದಿನ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಚರ್ಚೆ ಆಗೋದು ಪಕ್ಕಾ.
ಉಗ್ರಂ ಮಂಜು ಹಾಗೂ ಗೌತಮಿ ದೂರಾಗಿದ್ದಾರೆ. ಸುರೇಶ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ತ್ರಿವಿಕ್ರಮ್ ಮತ್ತು ಚೈತ್ರಾ ಜೈಲಿಗೆ ಹೋಗಿರುವುದು ಮಾತ್ರವೇ ಅಲ್ಲದೆ. ಜೈಲಿಂದ ತಪ್ಪಿಸಿಕೊಂಡು ನಿಯಮ ಮುರಿದಿದ್ದಾರೆ. ಒಟ್ಟಾರೆ ಈ ವಾರ ಸಾಕಷ್ಟು ಘಟನೆಗಳು ನಡೆದಿವೆ, ಸುದೀಪ್ಗೆ ತಿದ್ದಲು ಸಾಕಷ್ಟು ವಿಷಯಗಳು ಈ ವಾರ ಇವೆ. ಇದೀಗ ಬಿಡುಗಡೆ ಆಗಿರುವ ಪ್ರೋಮೋನಲ್ಲಿ ಸುದೀಪ್, ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ದಾರಿ ತೋರಿಸುವ ಕಾರ್ಯ ಮಾಡೋಣ ಎಂದಿದ್ದಾರೆ.
ಆದರೆ ಈ ಬಾರಿಯ ನಾಮಿನೇಷನ್ ಪ್ರಕ್ರಿಯೆಯೂ ಬಹಳ ವಿಭಿನ್ನವಾಗಿ ನಡೆದಿತ್ತು. ಇನ್ನೂ ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. ಅದರಲ್ಲಿ ಭವ್ಯಾ ಗೌಡ, ಶಿಶಿರ್, ತ್ರಿವಿಕ್ರಮ್, ರಜತ್, ಧನರಾಜ್ ಆಚಾರ್ಯ, ಹನುಮಂತ ಹಾಗೂ ಚೈತ್ರಾ ಕುಂದಾಪುರ ನಾಮಿನೇಟ್ ಆಗಿದ್ದಾರೆ. ಜೊತೆಗೆ ಕ್ಯಾಪ್ಟನ್ ಗೌತಮಿ ಜಾಧವ್ ನೇರವಾಗಿ ಮೋಕ್ಷಿತಾ ಪೈ ನಾಮಿನೇಟ್ ಆಗಿದ್ದಾರೆ. ಇನ್ನೂ ಈ 8 ಮಂದಿ ಪೈಕಿ ಈ ವಾರ ಬಿಗ್ಬಾಸ್ ಮನೆಯಿಂದ ಯಾವ ಸ್ಪರ್ಧಿ ಆಚೆ ಹೋಗಲಿದ್ದಾರೆ ಎಂದು ಕಾದು ನೋಡಬೇಕಿದೆ.