ಪ್ರಚಾರದಲ್ಲಿ ನರೇಂದ್ರ ಮೋದಿ ಫೋಟೋ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ನಾಯಕರ ವಿರುದ್ಧ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಮೋದಿ ಫೋಟೋ ಬಳಸದಂತೆ ನನ್ನನ್ನ ತಡೆಯಲು ಅವರು ಯಾರು..? ಪ್ರಧಾನಿ ನರೇಂದ್ರ ಮೋದಿ ಒಬ್ಬ ವಿಶ್ವನಾಯಕ. ಅವರನ್ನ ನಾನು ಹೃದಯದಲ್ಲಿಟ್ಟಿದ್ದೇನೆ.
ಈ ವಿಚಾರದಲ್ಲಿ ನನ್ನನ್ನು ಯಾರೂ ತಡೆಯಲು ಸಾಧ್ಯವಿಲ್ಲ ಅಂತ ಖಡಕ್ ಆಗಿ ಹೇಳಿದ್ದಾರೆ. ಯಡಿಯೂರಪ್ಪ ಅವರು ನರೇಂದ್ರ ಮೋದಿ ಫೋಟೋ ಬಳಸದೆ ಶಿವಮೊಗ್ಗದಲ್ಲಿ ತಮ್ಮ ಮಗ ರಾಘವೇಂದ್ರನನ್ನ ಗೆಲ್ಲಿಸುತ್ತಾರಾ.? ಎಡಭಾಗದಲ್ಲಿ ವಿಜಯೇಂದ್ರ, ಬಲಭಾಗದಲ್ಲಿ ರಾಘವೇಂದ್ರ, ಮಧ್ಯದಲ್ಲಿ ತಮ್ಮ ಫೋಟೋ ಬಳಸಿ ಎಲೆಕ್ಷನ್ ಪ್ರಚಾರ ನಡೆಸಲಿ ಅಂತ ಈಶ್ವರಪ್ಪ ಸವಾಲು ಎಸೆದಿದ್ದಾರೆ.