ತಾಯ್ತನ ಎನ್ನುವುದು ಜಗತ್ತಿನಲ್ಲಿ ಅತ್ಯಂತ ಸುಂದರವಾದ ಭಾವನೆ. ಪ್ರತಿಯೊಬ್ಬ ಮಹಿಳೆಯು ತಾಯ್ತನಕ್ಕಾಗಿ ಹಂಬಲಿಸುತ್ತಾಳೆ. ತಾಯಿಯಾದ ನಂತರ ಮಹಿಳೆಯ ಜೀವನವು ಸಂಪೂರ್ಣವಾಗುತ್ತದೆ ಎಂದು ಹೇಳಲಾಗುತ್ತದೆ ಈ ವಿಷ್ಯದಲ್ಲಿ ಸೆಲೆಬ್ರಿಟಿಗಳದ್ದೂ ಅದೇ ನಿಲುವು. ಅನೇಕ ಸೆಲೆಬ್ರಿಟಿಗಳು ತಾಯ್ತನದ ಸುಖವನ್ನು ಅನುಭವಿಸುತ್ತಿದ್ದಾರೆ. ಅದರಲ್ಲೂ ನಾರ್ಮಲ್ ಡೆಲಿವರಿ ಮೂಲಕ ಮಗುವಿಗೆ ಜನ್ಮ ನೀಡಿರುವಂತಹ ಹಲವಾರು ಸೆಲೆಬ್ರಿಟಿಗಳೂ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ವೈದ್ಯರು ಹೆಚ್ಚಾಗಿ ಸಿಸೇರಿಯನ್ ಹೆರಿಗೆಯನ್ನು ಸೂಚಿಸುತ್ತಾರೆ.
ಇದನ್ನು ಓದಿ: ಮಹಾರಾಷ್ಟ್ರ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಅಮಿತ್ ಶಾ!
ಮಹಿಳೆ ತಾಯಿಯಾಗಲು ಹೆರಿಗೆ ನೋವನ್ನು ಸಹಿಸಿಕೊಳ್ಳಬೇಕು. ಈ ನೋವು ತುಂಬಾ ನೋವಿನಿಂದ ಕೂಡಿರುತ್ತದೆ. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಸಿಸೇರಿಯನ್ ಆಪರೇಷನ್ ಆಯ್ಕೆ ಮಾಡಲು ಪ್ರಾರಂಭಿಸಿದ್ದಾರೆ. ಆದರೆ ಹೆರಿಗೆ ನೋವನ್ನು ಅನುಭವಿಸಿ ನಾರ್ಮಲ್ ಡೆಲಿವರಿ ಮೂಲಕ ಮಗುವಿಗೆ ಜನ್ಮ ನೀಡಿರರುವ ಹಲವಾರು ಬಾಲಿವುಡ್ ನಟಿಯರು ಇದ್ದಾರೆ.
ಐಶ್ವರ್ಯಾ ರೈ ಬಚ್ಚನ್:
ಐಶ್ವರ್ಯಾ ರೈ ಎಷ್ಟು ಚೆನ್ನಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಐಶ್ವರ್ಯಾ ರೈ ತನನ 38 ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಸಾಮಾನ್ಯವಾಗಿ ವಯಸ್ಸು ಹೆಚ್ಚಾದಂತೆ ಗರ್ಭ ಧರಿಸುವುದು ಕಷ್ಟ. ಹಾಗೋಂದು ವೇಳೆ ಗರ್ಭಧರಿಸಿದರೂ ನಾರ್ಮಲ್ ಡೆಲಿವರಿಯಾಗುವುದು ಕಷ್ಟ ಎನ್ನಲಾಗುತ್ತದೆ. ಹೀಗಿರುವಾಗ ಐಶ್ವರ್ಯ ನಾರ್ಮಲ್ ಡೆಲಿವರಿ ಆಗುವಂತೆ ವೈದ್ಯರಲ್ಲಿ ಐಶ್ವರ್ಯಾ ಕೇಳಿಕೊಂಡಿದ್ದು, ಸಾಕಷ್ಟು ನೋವನ್ನು ಸಹಿಸಿಕೊಂಡಿದ್ದಾರೆ ಎಂದು ಸ್ವತಃ ಅಮಿತಾಭ್ ಹೇಳಿದ್ದರು.
ರವೀನಾ ಟಂಡನ್:
ರವೀನಾ ಟಂಡನ್ ತನ್ನ 20 ರ ಹರೆಯದಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದರು. 2007 ರಲ್ಲಿ, ರವೀನಾ ನಾರ್ಮಲ್ ಹೆರಿಗೆಯ ಮೂಲಕ ತನ್ನ ಮೊದಲ ಮಗುವಿಗೆ ಜನ್ಮ ನೀಡಿದ್ದರು. ರವೀನಾ ತನ್ನ ಸ್ವಂತದವರಿಗೆ ಮಾತ್ರವಲ್ಲದೆ ತನ್ನ ದತ್ತು ಪುತ್ರಿಯರಿಗೂ ಸಾಕಷ್ಟು ಪ್ರೀತಿಯನ್ನು ನೀಡಿ ಉತ್ತಮ ತಾಯಿ ಎನಿಸಿಕೊಂಡಿದ್ದಾರೆ.
ಟ್ವಿಂಕಲ್ ಖನ್ನಾ:
ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಟ್ವಿಂಕಲ್ ತನ್ನ ಅಂಕಣಗಳು ಮತ್ತು ಪುಸ್ತಕಗಳ ಮೂಲಕ ಸಾಮಾನ್ಯ ಜನರ ಹೋರಾಟಗಳ ಬಗ್ಗೆ ಮಾತನಾಡುತ್ತಲೇ ಇರುತ್ತಾಳೆ. ಟ್ವಿಂಕಲ್ 2012 ರಲ್ಲಿ ಸಾಮಾನ್ಯ ಹೆರಿಗೆಯ ಮೂಲಕ ಎರಡನೇ ಮಗುವಿಗೆ ಜನ್ಮ ನೀಡಿದರು. ಅವರ ಮೊದಲ ಮತ್ತು ಎರಡನೇ ಮಗುವಿನ ನಡುವೆ ಸಾಕಷ್ಟು ವ್ಯತ್ಯಾಸವಿದ್ದರೂ ಟ್ವಿಂಕಲ್ ಧೈರ್ಯ ತೆಗೆದುಕೊಂಡು ನಾರ್ಮಲ್ ಹೆರಿಗೆಯ ಮೂಲಕ ಎರಡನೇ ಮಗುವನ್ನು ಪಡೆದರು.
ಸುಸನ್ನೆ ಖಾನ್:
ಹೃತಿಕ್ ರೋಷನ್ ಪತ್ನಿ ಸುಸಾನೆ ಖಾನ್ ಇಬ್ಬರು ಗಂಡು ಮಕ್ಕಳ ತಾಯಿ. ಸುಸ್ಸಾನೆ ಮತ್ತು ಹೃತಿಕ್ 2006 ರಲ್ಲಿ ತಮ್ಮ ಮೊದಲ ಮಗುವನ್ನು ಹೊಂದಿದ್ದರು ಮತ್ತು ದಂಪತಿಗಳು ಸಾಮಾನ್ಯ ಹೆರಿಗೆಯ ಮೂಲಕವೇ ಮಗುವಿಗೆ ಜನ್ಮ ನೀಡಿದ್ದರು.