ಕಾಂಗ್ರೆಸ್ನ “ಚೊಂಬು” ಜಾಹೀರಾತಿನ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕಿಡಿಕಾರಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತ್ನಾಡಿದ ದೇವೇಗೌಡರು, ಕಾಂಗ್ರೆಸ್ ಸರ್ಕಾರ ಜನರಿಗೆ ಕೊಟ್ಟಿದ್ದೇ ಚೊಂಬು, ಮೋದಿಯದ್ದು ಅಕ್ಷಯ ಪಾತ್ರೆ ಅಂತ ತಿಳಿಸಿದರು. 2014ವರೆಗೂ ದೇಶದ ಸಂಪತ್ತನ್ನ ಲೂಟಿ ಮಾಡಿ, ನರೇಂದ್ರ ಮೋದಿ ಕೈಗೆ ಖಾಲಿ ಚೊಂಬು ಕೊಟ್ಟರು. ಆದರೆ ಆ ಖಾಲಿ ಚೊಂಬನ್ನೇ ಈಗ ಮೋದಿ ಅಕ್ಷಯ ಪಾತ್ರೆಯನ್ನಾಗಿ ಮಾಡಿದ್ದಾರೆ ಅಂತ ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ. ಯುಪಿಎ ಸರ್ಕಾರ ಲೂಟಿ ಮಾಡಿದ್ದಕ್ಕೆ ಚೊಂಬು ಖಾಲಿ ಆಗಿತ್ತು ಎಂದಿದ್ದಾರೆ.ಡಿಸಿಎಂ ಡಿ.ಕೆ.ಶಿವಕುಮಾರ್ ಈ ರಾಜ್ಯವನ್ನು ಲೂಟಿ ಮಾಡಿದ್ದಾರೆ. ಚೊಂಬು ಜಾಹೀರಾತು ಕೊಟ್ಟ ಸಿಎಂ ಸಿದ್ದರಾಮಯ್ಯಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ. ಈ ರಾಜ್ಯದಲ್ಲಿ 28 ಸ್ಥಾನಗಳಲ್ಲೂ ಎನ್ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ ಎಂದು ಹೇಳಿದ್ದಾರೆ.