ಸಾವು-ಬದುಕಿನ ಮಧ್ಯೆ ಹೋರಾಟ ನಡೆಸ್ತಿರೋ ಎರಡು ವರ್ಷದ ಪುಟ್ಟ ಕಂದಮ್ಮ ಕೀರ್ತನಾ ಚಿಕಿತ್ಸೆಗೆ ಬರೋಬ್ಬರಿ 16 ಕೋಟಿ ಬೇಕಿದೆ. ಅದಕ್ಕಾಗಿ ನಮ್ಮ ಗ್ಯಾರಂಟಿ ನ್ಯೂಸ್ ನಡೆಸಿದ ಸೇವ್ ಕೀರ್ತನಾ ಅಭಿಯಾನಕ್ಕೆ ಕನ್ನಡಿಗರ ಹೃದಯ ಮಿಡಿದಿದೆ. ಸ್ಯಾಂಡಲ್ ವುಡ್ ತಾರೆಯರು ಕೂಡ ಕೈ ಜೋಡಿಸಿದ್ದು, ಅಭಿಯಾನ ಆರಂಭಿಸಿದ ಗ್ಯಾರಂಟಿ ಮ್ಯಾನ್ಮೇಜ್ಮೆಂಟ್ ಕೂಡ ಸಾಥ್ ನೀಡಿತು.
ನಿಷ್ಕಲ್ಮಶವಾಗಿ ನಗ್ತಿರೋ ಈ ಎರಡು ವರ್ಷದ ಪುಟ್ಟ ಕಂದಮ್ಮನ ಹೆಸ್ರು ಕೀರ್ತನಾ. ಮೈಸೂರು ಮೂಲದ ಈಕೆ SMA ಅನ್ನೋ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾಳೆ. 16 ಕೋಟಿ ವೆಚ್ಚದ ದುಬಾರಿ ಇಂಜೆಕ್ಷನ್ ಕೊಟ್ರೆ ಕೀರ್ತನಾ ಉಳಿಯುತ್ತಾಳೆ. ಇಲ್ಲ ಅಂದ್ರೆ ಇಂಜೆಕ್ಷನ್ ಕೊಡಿಸೋವರೆಗೂ ಕನಿಷ್ಟ ಸಿರಪ್ ಆದ್ರೂ ಕೊಡ್ತಿರಬೇಕು. ತಿಂಗಳಿಗೆ ಎರಡು ಸಿರಪ್ ಬಾಟಲ್ ಬೇಕಾಗುತ್ತೆ. ಆ ಸಿರಪ್‌ಗಳ ಬೆಲೆ ಬರೋಬ್ಬರಿ 12 ಲಕ್ಷ ಪ್ಲಸ್ ಒಂದೂಕಾಲು ಲಕ್ಷ GST.
ನಿರ್ಮಾಪಕ ಸಂದೇಶ್ ಎನ್ ಮೂಲಕ ಕಿಚ್ಚ ಸುದೀಪ್, ಅನಿಲ್ ಕುಂಬ್ಳೆ ಈ ಕೀರ್ತನಾಗಾಗಿ ವಿಡಿಯೋಗಳನ್ನ ಮಾಡಿದ್ರು. ತಾವೂ ಆರ್ಥಿಕ ನೆರವು ನೀಡಿ, ಕನ್ನಡಿಗರ ಬಳಿ ಕೈಲಾದಷ್ಟು ಸಹಾಯ ಮಾಡಲು ಮನವಿ ಮಾಡಿದ್ರು. ಇದೀಗ ಕೀರ್ತನಾಗಾಗಿ ನಮ್ಮ ಗ್ಯಾರಂಟಿ ನ್ಯೂಸ್ ಕೂಡ ಅಭಿಯಾನ ಶುರು ಮಾಡಿತು. ನಮ್ಮ ಸ್ಟುಡಿಯೋಗೆ ಬಂದ ಕೀರ್ತನಾ ಹಾಗೂ ಆ ಕಂದಮ್ಮನ ತಂದೆ-ತಾಯಿಯರೊಂದಿಗೆ ಸೇವ್ ಕೀರ್ತನಾ ಕಾರ್ಯಕ್ರಮ ನಡೆಸಿಕೊಟ್ಟಿತು. ಅಲ್ಲದೆ, ಮಗಳನ್ನು ಉಳಿಸಿಕೊಳ್ಳಲು ಒದ್ದಾಡ್ತಿರೋ ಪೋಷಕರಿಗೆ ಧೈರ್ಯ ತುಂಬೋ ಕಾರ್ಯ ಮಾಡಿತು.
ಹಿರಿಯನಟಿ ಡಾ. ತಾರಾ, ನಟ ಶರಣ್, ಜಿಮ್ ರವಿ, ನಿರ್ಮಾಪಕ ಸಂದೇಶ್ ಎನ್ ಸೇರಿದಂತೆ ಸಾಕಷ್ಟು ಮಂದಿ ಕನ್ನಡಿಗರು ರಾಜ್ಯದ ಮೂಲೆ ಮೂಲೆಗಳಿಂದ ಕರೆ ಮಾಡಿದ್ರು. ಕೀರ್ತನಾಗಾಗಿ ಮಿಡಿದರು. ಕೈಲಾದ ಸಹಾಯ ಮಾಡುವ ಭರವಸೆ ನೀಡಿದ್ರು. ಹೆತ್ತ ತಾಯಿಗೆ ಆತ್ಮಸ್ಥೈರ್ಯ ತುಂಬಿದರು. ಸೇವ್ ಕೀರ್ತನಾ ಅಭಿಯಾನಕ್ಕೆ ಸಾಕಷ್ಟು ಮಂದಿ ಕೈ ಜೋಡಿಸ್ತಿದ್ದು, ಕೀರ್ತನಾ ಹೆಸರಿನಲ್ಲೇ ಇರೋ ಅಕೌಂಟ್ ಡಿಟೇಲ್ಸ್ ಹಾಗೂ QR ಕೋಡ್ ಮೂಲಕ ಕೈಲಾದ ಸಹಾಯ ಮಾಡ್ತಿದ್ದಾರೆ. ಅದ್ರಲ್ಲೂ ಬಸವೇಶ್ವರನಗರದ ಕೌನ್ಸೆಲರ್ ಎಸ್.ಹೆಚ್. ಪದ್ಮರಾಜ್ ಅವರು ಗ್ಯಾರಂಟಿ ಕಚೇರಿಗೇ ಬಂದು ನಗದು ನೀಡಿದರು.
ಅಂದಹಾಗೆ ನಾವು ಬರೀ ಅಭಿಯಾನ ಅಷ್ಟೇ ಮಾಡಿ, ಕೈ ತೊಳೆದುಕೊಂಡಿಲ್ಲ. ಕೀರ್ತನಾ ತಾಯಿಗೆ ನಮ್ಮ ಗ್ಯಾರಂಟಿ ನ್ಯೂಸ್ ಮ್ಯಾನೇಜ್ಮೆಂಟ್ ಕೂಡ ಚೆಕ್ ವಿತರಿಸೋ ಮೂಲಕ ನಮ್ಮ ಬದ್ಧತೆ ಮರೆದಿದ್ದೇವೆ. ಗ್ಯಾರಂಟಿ ಪ್ರಧಾನ ಸಂಪಾದಕಿ ರಾಧಾ ಹಿರೇಗೌಡರ್ ಹಾಗೂ ಚಾನೆಲ್ ನಿರ್ದೇಶಕಿ ನಮ್ರತಾ ಶಿವಸ್ವಾಮಿಯಿಂದ ಚೆಕ್ ವಿತರಿಸಲಾಯಿತು.
ಇನ್ನು ನಮ್ಮ ಎಂಡಿ ಶಿವಸ್ವಾಮಿ ಅವರ ಸ್ನೇಹಿತರಾದ ಸಹನಾ ಅನಿಲ್ ಹಾಗೂ ಅನಿಲ್ ಅವರಿಂದ ಲಕ್ಷಾಂತರ ರೂಪಾಯಿ ಮಗುವಿನ ಅಕೌಂಟ್‌ಗೆ ಟ್ರಾನ್ಸ್ ಫರ್ ಮಾಡಲಾಗಿದೆ. ನಾವು ನುಡಿದಂತೆ ನಡೆಯುತ್ತಿದ್ದೇವೆ. ಗ್ಯಾರಂಟಿ ನ್ಯೂಸ್ ಸದಾ ಜನಪರ. ಸದ್ಯ ಕೀರ್ತನಾಗೆ ಸಕಾಲಕ್ಕೆ ಇಂಜೆಕ್ಷನ್ ಸಿಕ್ಕರೆ ಇದಕ್ಕಿಂತ ಸಾರ್ಥಕ ಕ್ಷಣ ಮತ್ತೇನು ಬೇಕಿದೆ ಅಲ್ಲವೇ..? ಸೋ.. ಕೈಲಾದಷ್ಟು ಸಹಾಯ ಮಾಡಿ. ಮಾನವೀಯತೆ ಮೆರೆಯಿರಿ ಅಂತ ಗ್ಯಾರಂಟಿ ನ್ಯೂಸ್ ನಿಮ್ಮಲ್ಲಿ ಕಳಕಳಿಯಾಗಿ ವಿನಂತಿಸುತ್ತಿದೆ.