ಗೃಹ ಜ್ಯೋತಿ ಜಾರಿಯಾಗಿ ಹೆಚ್ಚೂ ಕಡಿಮೆ ವರ್ಷವಾಗುತ್ತಿದೆ. ಆದರೆ ಗೊಂದಲಗಳು ಬಗೆಹರಿದಿಲ್ಲ. ಎಷ್ಟೋ ಜನರಿಗೆ ಬಿಲ್ ಝೀರೋ ಬರ್ತಿಲ್ಲ. ಬಳಸುತ್ತಿರುವ ಯುನಿಟ್ 200 ಯುನಿಟ್ ಒಳಗೇ ಇದ್ದರೂ, ಪೂರ್ತಿ ಬಿಲ್ ಬರ್ತಿದೆ. ವಿದ್ಯುತ್ ಬಳಕೆ 150 ಯುನಿಟ್ ಒಳಗಿದ್ದರೂ, ಕೆಲವರಿಗೆ ಬಿಲ್ ಬರ್ತಿದೆ.. ಹೀಗೆ ಹಲವು ಗೊಂದಲಗಳಿವೆ. ಇವುಗಳಿಗೆಲ್ಲ ಉತ್ತರ ಇಲ್ಲಿದೆ.
200 ಯುನಿಟ್ಗಿಂತ ಸ್ವಲ್ಪ ಹೆಚ್ಚು ಬಂದಿದ್ದರೆ..
ಅಂದರೆ.. 00 ಯೂನಿಟ್ ನಂತರ 200.1, 200.2 ಬಂದರೂ ಕೂಡಾ ಪ್ಯೂಟರಿನಲ್ಲಿ ಆಟೋಮ್ಯಾಟಿಕ್ ಆಗಿ ಅದು 200 ಯೂನಿಟ್ ದಾಟಿದೆ ಎಂದೇ ಪರಿಗಣಿಸುತ್ತದೆ. ಹಾಗಾಗಿ, ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ವಿಚಾರವೇನೆಂದರೆ 200 ಯೂನಿಟ್ ಎಂದರೆ ಅದನ್ನು 199 ಯೂನಿಟ್ ಎಂದು ಅರ್ಥೈಸಿಕೊಂಡು, ಅಷ್ಟರೊಳಗೆ ಯೂನಿಟ್ ಗಳನ್ನು ಎಚ್ಚರಿಕೆಯಿಂದ ಬಳಸಬೇಕು.
ಸರಾಸರಿಗಿಂತ ಸ್ವಲ್ಪ ಹೆಚ್ಚು ಬಳಕೆಯಾಗಿದ್ದರೂ ಕೂಡಾ..
ಮನೆಗೆ ಹೊಸ ಫ್ರಿಡ್ಜ್ ಅಥವಾ ಟಿವಿ, ಮಿಕ್ಸರ್, ಗ್ರೈಂಡರ್ ಇತ್ಯಾದಿ ಬಂದರೆ ಸಹಜವಾಗಿ ವಿದ್ಯುತ್ ಬಳಕೆ ಏರಿಕೆಯಾಗುತ್ತದೆ. ಆಗಲೂ ಕೂಡಾ ಹೆಚ್ಚುವರಿ ವಿದ್ಯುತ್ ಬಿಲ್ ಕಟ್ಟಲೇಬೇಕು.ಸರಾಸರಿ ಎಂದು ಫಿಕ್ಸ್ ಆಗುವುದು ವರ್ಷಕ್ಕೆ. ಈಗ ಇರುವ ಸರಾಸರಿ ವಿದ್ಯುತ್ ಬಳಕೆ ಹಿಂದಿನ ವರ್ಷದ್ದು. ಸರಾಸರಿ ವಿದ್ಯುತ್ ಬಳಕೆ 150 ಯುನಿಟ್ ಎಂದು ಇದ್ದು, ನೀವು ಈಗ 160 ಯುನಿಟ್ ಬಳಸಿದರೆ, ಆಗಲೂ ಕೂಡಾ ಹೆಚ್ಚುವರಿ 10 ಯುನಿಟ್ ಬಿಲ್ ಕಟ್ಟಲೇಬೇಕು.
ಹೊಸ ಬಾಡಿಗೆದಾರರ ಸಮಸ್ಯೆ ಏನೆಂದರೆ..
ಈಗ ಹಳೆಯ ಬಾಡಿಗೆದಾರ ವಾರ್ಷಿಕ ಸರಾಸರಿ 220 ಯುನಿಟ್ ಬಳಸುತ್ತಿದ್ದಾನೆ ಎಂದಿಟ್ಟುಕೊಳ್ಳಿ. ಅದೇ ಮನೆಗೆ ಹೊಸದಾಗಿ ಬಂದಿರುವ ಬಾಡಿಗೆ ದಾರ 100-150 ಯುನಿಟ್ ಬಳಸಿದರೂ ಕೂಡಾ ಆತನಿಗೆ 200 ಯುನಿಟ್ ಮಿತಿ ಗೃಹಜ್ಯೋತಿ ಅನ್ವಯವಾಗುವುದಿಲ್ಲ. ಏಕೆಂದರೆ ಹಳೆಯ ಬಾಡಿಗೆದಾರನ ಆರ್.ಆರ್.ನಂಬರ್ನಲ್ಲಿ ಗೃಹಜ್ಯೋತಿ ಲಿಮಿಟ್ಗಿಂತ ಹೆಚ್ಚು ಬಳಸಿರುತ್ತಾರೆ. ಹಾಗಾಗಿ, ಹೊಸ ಬಾಡಿಗೆದಾರನಾದರೂ, ಆರ್. ಆರ್. ನಂಬರ್ ಸೇಮ್ ಇರುವ ಕಾರಣ, ಗೃಹಜ್ಯೋತಿ ಅನ್ವಯವಾಗುವುದಿಲ್ಲ. ಬದಲಿಗೆ ಹೊಸದಾಗಿ ಬಂದ ಬಾಡಿಗೆದಾರ ಒಂದು ವರ್ಷದ ಬಳಸಿದ ನಂತರ, ಆ ಮನೆಯ ವಿದ್ಯುತ್ ಬಳಕೆ ಸರಾಸರಿ 200 ಯುನಿಟ್ ಒಳಗೆ ಬಂದರೆ, ಆಗ ಗೃಹಜ್ಯೋತಿ ಅನ್ವಯವಾಗುತ್ತದೆ.
ಹೊಸ ಬಾಡಿಗೆದಾರರು ಏನು ಮಾಡಬೇಕು..?
ಬಾಡಿಗೆದಾರರು ಮನೆಯನ್ನು ಬಿಡುವಾಗ, ತಮ್ಮನ್ನು ಗೃಹ ಜ್ಯೋತಿ ಯೋಜನೆಯಿಂದ ಕೈಬಿಡಬೇಕು ಎಂದು ಬೆಸ್ಕಾಂಗೆ ಅರ್ಜಿ ಸಲ್ಲಿಸಬೇಕು. ಅದರಲ್ಲಿ ಗೃಹಜ್ಯೋತಿಯ ಲಾಭ ಪಡೆಯುತ್ತಿದ್ಧ ಮನೆಯ ಆರ್ ಆರ್ ನಂಬರ್, ಆಧಾರ್ ಸಂಖ್ಯೆ ಮತ್ತಿತರ ವಿವರಗಳನ್ನು ನೀಡಬೇಕು. ಆಗ, ಆ ಆರ್. ಆರ್. ನಂಬರಿಗೆ ಅವರ ಆಧಾರ್ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಅಂದರೆ ಡಿ-ಲಿಂಕ್ ಮಾಡುತ್ತಾರೆ.
ಇದನ್ನು ಓದಿ: ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ!
ಅವರು ಬೇರೆ ಮನೆಗೆ ಹೋದಾಗ ಅಲ್ಲಿನ ಆರ್ ಆರ್ ನಂಬರ್ ನಲ್ಲಿ ತಮಗೆ ಗೃಹ ಜ್ಯೋತಿ ಯೋಜನೆಗೆ ಪರಿಗಣಿಸಬೇಕೆಂದು ಅಲ್ಲಿನ ಬೆಸ್ಕಾಂ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಆಗ, ಹೊಸ ಆರ್. ಆರ್. ಸಂಖ್ಯೆಗೆ ನಿಮ್ಮನ್ನು ಪರಿಗಣಿಸಲಾಗುತ್ತದೆ. ಅದರ ಜೊತೆಯಲ್ಲೇ, ಆ ಆರ್ ಆರ್ ಸಂಖ್ಯೆಯಲ್ಲಿ ಮೊದಲು ಇದ್ದ ಬಾಡಿಗೆದಾರರು ತಮ್ಮ ಗೃಹ ಜ್ಯೋತಿ ಸೌಲಭ್ಯವನ್ನು ನಿಷ್ಟ್ರಿಯಗೊಳಿಸಿದ್ದನ್ನೂ ಸಹ ಖಾತ್ರಿ ಮಾಡಿಕೊಳ್ಳಬೇಕು. ಅಕಸ್ಮಾತ್ ಡಿ-ಲಿಂಕ್ ಆಗಿರದಿದ್ದರೆ, ಆಧಾರ್ ನಂಬರ್ ಇರುವ ಕಾರಣ ಗೃಹಜ್ಯೋತಿ ಸಿಕ್ಕುವುದಿಲ್ಲ. ಹೊಸ ಮನೆಯಲ್ಲಿ ಹಳೆಯ ಬಾಡಿಗೆದಾರರ ವಾರ್ಷಿಕ ಸರಾಸರಿ ಆಧರಿಸಿ ಗೃಹಜ್ಯೋತಿ ಯೋಜನೆಗೆ ಅನ್ವಯವಾಗುತ್ತದೆ.