ವಿಮಾನ ಪ್ರಯಾಣದ ವೇಳೆ ಸಹ ಪ್ರಯಾಣಿಕರ ಜೊತೆ ಜಗಳ ಆಡೋದು, ಗಗನ ಸಖಿಯರ ಜೊತೆ ಕಿರಿಕ್ ಮಾಡೋದು ಸಾಮಾನ್ಯ. ಆದರೆ ಇಲ್ಲೊಂದು ಜೋಡಿ ಫ್ಲೈಟ್ ನಲ್ಲಿದ್ದ ಪ್ರಯಾಣಿಕರೆಲ್ಲ ಕಣ್ಣು ಮುಚ್ಚಿಕೊಳ್ಳುವ ಹಾಗೆ ಮಾಡಿದ್ದಾರೆ. ಜೋಡಿ ಹಕ್ಕಿಗಳಿಗೆ ಪೊದೆ ಸಿಕ್ಕರೂ ಬಿಡಲ್ಲ ಅನ್ನೋ ಮಾತಿದೆ. ಆದರೆ ಇಲ್ಲಿ ಹೈಟೆಕ್ ಫ್ಲೈಟ್ ನಲ್ಲೇ ಚಕ್ಕಂದ ಆಡಿ ಸುದ್ದಿಯಾಗಿದ್ದಾರೆ. ಈ ಜೋಡಿಗೆ ಅನಿಮಲ್ ಸಿನಿಮಾ ಪ್ರೇರಣೆ ಆಯ್ತೋ..ಏನೋ ಗೊತ್ತಿಲ್ಲ. ವಿಮಾನದಲ್ಲೇ ಸೆ**** ಶುರುವಿಟ್ಟುಕೊಂಡಿದ್ದಾರೆ.
ಈ ಬಹಿರಂಗ ತುಂಟಾಟ ನೋಡಿ ಸಹ ಪ್ರಯಾಣಿಕರೆಲ್ಲ ಛೀ..ಥೂ..ಅಂತಂದ್ರೂ..ಕೇಳಲಿಲ್ಲ. ಬರೋಬರೀ 4 ಗಂಟೆಗಳ ಪ್ರಯಾಣದ ವೇಳೆ ಹೀಗೆಯೇ ಸಲ್ಲಾಪದಲ್ಲಿ ತೊಡಗಿದ್ರಂತೆ. ವಿಮಾನದಲ್ಲಿ ಅಶ್ಲೀಲ ಕೃತ್ಯಗಳನ್ನು ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ವಿಮಾನಯಾನ ಮಾರ್ಗಸೂಚಿಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇದನ್ನು ಉಲ್ಲಂಘಿಸುವ ಪ್ರಯಾಣಿಕರನ್ನು ವಿಮಾನ ಪ್ರಯಾಣದಿಂದ ನಿಷೇಧಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.