ಭಾರತ ಫುಟ್ ಬಾಲ್ ತಂಡದ ನಾಯರಾಗಿದ್ದ ಸುನೀಲ್ ಛೆಟ್ರಿ (೩೯) ಇಂಟರ್ ನ್ಯಾಷನಲ್ ತಂಡಕ್ಕೆ ವಿದಾಯ ಹೇಳಿದ್ದಾರೆ. ಕೊಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಕುವೈತ್ ವಿರುದ್ಧದ ಪಂದ್ಯದ ಮೂಲಕ ಅಂತರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಹೇಳುವುದಾಗಿ ಛೆಟ್ರಿ ತಿಳಿಸಿದ್ದಾರೆ.
ಸುನೀಲ್ ಛೆಟ್ರಿ ಈಗಾಗಲೇ ಭಾರತದ ಪರವಾಗಿ 150 ಪಂದ್ಯಗಳನ್ನಾಡಿದ್ದು, ೯೦ ಗೋಲುಗಳನ್ನು ಗಳಿಸಿದ್ದರು. ಆದರೆ ಇದೀಗ ಕುವೈತ್ ವಿರುದ್ಧದ ಪಂದ್ಯದ ಮೂಲಕ ಅಂತರಾಷ್ಟ್ರೀಯ ಫುಟ್ಬಾಲ್ಗೆ ಗುಡ್ ಬೈ ಹೇಳಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಭಾರತದಲ್ಲಿ ನನಗಿಂತ ಹೆಚ್ಚು ಪ್ರೀತಿ, ವಾತ್ಸಲ್ಯವನ್ನಾ ಅಭಿಮಾನಿಗಳಿಂದ ಪಡೆದ ಯಾವ ಆಟಗಾರನೂ ಇಲ್ಲ ಎಂಬುದೇ ನನ್ನ ಭಾವನೆ. ಅಷ್ಟೊಂದು ಪ್ರೀತಿ ಕೊಟ್ಟಿದ್ದಾರೆ. ಆದರೆ ಎಲ್ಲದಕ್ಕೂ ಅಂತ್ಯವಿದೆ. ಅದರಂತೆ ಇದೀಗ ನಾನು ಸಹ ವಿದಾಯ ಹೇಳುತ್ತಿರುವುದಾಗಿ ಸುನಿಲ್ ಛೆಟ್ರಿ ತಿಳಿಸಿದ್ದಾರೆ.