ಪಾಕಿಸ್ತಾನದಲ್ಲಿ ಪ್ರತ್ಯೇಕತಾವಾದಿಗಳ ಆರ್ಭಟ! ದೇಶವನ್ನೇ ಇಬ್ಬಾಗ ಮಾಡುತ್ತಾ ಬಲೂಚಿಸ್ತಾನ ಹೋರಾಟ?

ಆಂತರಿಕ ಅಸ್ಥಿರತೆಯಿಂದ ಕಂಗಾಲಾಗಿದೆ ಪಾಕಿಸ್ತಾನ.. ಬಲೂಚಿಸ್ತಾನ ಹೋರಾಟದ ಕಂಪ್ಲೀಟ್ ಡೀಟೇಲ್ಸ್..

Blochistan

ಪಾಕಿಸ್ತಾನದ ನೈಋತ್ಯ ಗಡಿಯಲ್ಲಿ ಇರೋ ಬಲೂಚಿಸ್ತಾನ ಪ್ರಾಂತ್ಯ, ಇದೀಗ ಟೈಂ ಬಾಂಬ್ ರೀತಿ ಪರಿವರ್ತನೆಯಾಗಿದೆ! ರೈಲನ್ನೇ ಹೈಜಾಕ್ ಮಾಡುವ ಮೂಲಕ ವಿಶ್ವದ ಗಮನ ಸೆಳೆದ ಈ ಹೋರಾಟಕ್ಕೆ ಸುದೀರ್ಘ ಇತಿಹಾಸವೇ ಇದೆ. ಕಳೆದ 7 ದಶಕಗಳಿಂದ ನಡೆಯುತ್ತಿರುವ ಹೋರಾಟ, ಇದೀಗ ನಿರ್ಣಯಕ ಘಟ್ಟವನ್ನೇ ತಲುಪಿದೆ. ಬಲೂಚಿಸ್ತಾನ ಪ್ರತ್ಯೇಕ ರಾಷ್ಟ್ರಕ್ಕಾಗಿ ನಡೆಯುತ್ತಿರೋ ಈ ಹೋರಾಟ, 2023ರಲ್ಲಿ ತಾರಕಕ್ಕೇರಿತು. ಪಾಕಿಸ್ತಾನ ಸೈನ್ಯದ ಕಾರ್ಯಾಚರಣೆಗಳಿಗೆ ಸಡ್ಡು ಹೊಡೆದ ಪ್ರತ್ಯೇಕತಾವಾದಿಗಳು, ಪಾಕ್ ಸರ್ಕಾರಕ್ಕೇ ಸವಾಲಾಗಿದ್ದಾರೆ. ಇತ್ತ ಬಲೂಚಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಳು ಹೆಚ್ಚಾಗಿವೆ ಅನ್ನೋ ಆರೋಪಗಳೂ ತೀವ್ರಗೊಂಡಿವೆ. ಬಲೂಚಿ ರಾಷ್ಟ್ರೀಯತಾವಾದಿಗಳಂತೂ ಪಾಕಿಸ್ತಾನ ಸರ್ಕಾರವು ತಮ್ಮ ವಿರುದ್ಧ ಸಾಂಸ್ಕೃತಿಕ ಹಾಗೂ ಆರ್ಥಿಕ ಶೋಷಣೆ ಮಾಡ್ತಿದೆ ಎಂದು ಬೊಬ್ಬೆ ಇಡುತ್ತಿದ್ದಾರೆ. ಬಲೂಚಿಸ್ತಾನದ ಸಂಪನ್ಮೂಲಗಳ ನಿಯಂತ್ರಣ, ರಾಜಕೀಯ ಹಾಗೂ ಆರ್ಥಿಕ ಹಕ್ಕುಗಳಿಗಾಗಿ ನಡೆಯುತ್ತಿರುವ ಈ ಹೋರಾಟದ ಸಮಗ್ರ ವಿವರ ಇಂತಿದೆ:

ಬಲೂಚಿಸ್ತಾನ ಹೋರಾಟದ ಹಿನ್ನೆಲೆ ಏನು?

ಬಲೂಚಿಸ್ತಾನ ಪ್ರಾಂತ್ಯ 1947ರಲ್ಲಿ ಪಾಕಿಸ್ತಾನದೊಂದಿಗೆ ಸ್ವಯಂ ಪ್ರೇರಿತವಾಗಿ ವಿಲೀನಗೊಂಡಿತು. ಆದರೆ, ಕರಾರು ಪ್ರಕಾರ ಪ್ರಾಂತ್ಯಕ್ಕೆ ಸ್ವಾಯತ್ತತೆ ನೀಡಬೇಕಿತ್ತು. ಇದನ್ನು ಪಾಕಿಸ್ತಾನ ಸರ್ಕಾರ ನಿರ್ಲಕ್ಷಿಸಿತು. ಹೀಗಾಗಿ, 1948ರಲ್ಲೇ ಮೊದಲ ಬಾರಿಗೆ ಸಶಸ್ತ್ರ ಹೋರಾಟ ನಡೆಯಿತು. 1958, 1962 ಹಾಗೂ 2004ರಲ್ಲಿ ಇದೇ ರೀತಿಯ ಸಂಘರ್ಷಗಳು ನಡೆದವು. 2004ರ ನಂತರ ಈ ಹೋರಾಟ ಇನ್ನಷ್ಟು ಸಂಘಟಿತವಾಯ್ತು. ಬಲೂಚಿ ಲಿಬರೇಷನ್ ಆರ್ಮಿ (BLA), ಬಲೂಚಿ ಲಿಬರೇಷನ್ ಫ್ರಂಟ್ (BLF) ನೇತೃತ್ವದಲ್ಲಿ ಇಂದಿಗೂ ಈ ಸಂಘರ್ಷ ಅತ್ಯಂತ ವ್ಯವಸ್ಥಿತವಾಗಿ ಹಾಗೂ ಭೀಕರ ಸ್ವರೂಪದಲ್ಲಿ ನಡೆಯುತ್ತಿದೆ.

ADVERTISEMENT
ADVERTISEMENT
ಬಲೂಚಿಸ್ತಾನ ಸಂಘರ್ಷಕ್ಕೆ ಮೂಲ ಕಾರಣಗಳೇನು?
  1. ಸಂಪನ್ಮೂಲಗಳ ದುರ್ಬಳಕೆ: ಬಲೂಚಿಸ್ತಾನ ಪ್ರಾಂತ್ಯ ಪಾಕಿಸ್ತಾನದ 40% ನೈಸರ್ಗಿಕ ಅನಿಲ, ಸುವರ್ಣ, ತಾಮ್ರದಂತಹ ಖನಿಜ ಸಂಪತ್ತನ್ನು ಹೊಂದಿದೆ. ಆದರೆ, ಸ್ಥಳೀಯರಿಗೆ ಉದ್ಯೋಗ ಅಥವಾ ಆದಾಯದ ಹಂಚಿಕೆ ಅತಿ ಕಡಿಮೆ.
  2. ರಾಜಕೀಯ ನಿರ್ಲಕ್ಷ್ಯ: ಬಲೂಚಿಸ್ತಾನ ಪ್ರಾಂತ್ಯದ ಪ್ರಾತಿನಿಧ್ಯ ಕೇಂದ್ರ ಸರ್ಕಾರದಲ್ಲಿ ನಗಣ್ಯ. 2018ರ ಚುನಾವಣೆಯಲ್ಲಿ ಬಲೂಚಿಸ್ತಾನದಲ್ಲಿ ಕೇವಲ 20 % ಮತದಾನ ನಡೆಯಿತು ಎಂದು ವರದಿಗಳು ಹೇಳುತ್ತಿವೆ.
  3. ಮಾನವ ಹಕ್ಕುಗಳ ಉಲ್ಲಂಘನೆ: ಪಾಕ್ ಸೇನೆ ನಡೆಸುವ ಕಾರ್ಯಾಚರಣೆಗಳಲ್ಲಿ ಬಲೂಚಿಸ್ತಾನದ ಲೆಕ್ಕವಿಲ್ಲದಷ್ಟು ಮಂದಿ ಕಣ್ಮರೆಯಾಗಿದ್ದಾರೆ. ಕಣ್ಮುಂದೆಯೇ ಇದ್ದವರು ಎಲ್ಲಿ ಹೋದರು? ಅವರ ಕಥೆ ಏನಾಯ್ತು? ಅವರ ಸ್ಥಿತಿ ಏನು ಅನ್ನೋದು ಯಾರಿಗೂ ಗೊತ್ತಿಲ್ಲ! ಪಾಕ್ ಸೇನೆಯ ಈ ಹಿಂಸಾತ್ಮಕ ಕೃತ್ಯಗಳನ್ನ ಖುದ್ದು ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳೇ ಟೀಕಿಸಿವೆ.
  4. ಸಾಂಸ್ಕೃತಿಕವಾಗಿ ಹತ್ತಿಕ್ಕುವ ಯತ್ನ: ಬಲೂಚಿ ಭಾಷೆ, ಸಂಸ್ಕೃತಿಯನ್ನು ಪಾಕ್ ಸರ್ಕಾರ ಹತ್ತಿಕ್ಕುವ ಯತ್ನ ನಡೆಯುತ್ತಿದೆ ಅನ್ನೋ ಆಕ್ರೋಶವೂ ಈ ಭಾಗದಲ್ಲಿದೆ..
ಬಲೂಚಿಸ್ತಾನದ ಇಂದಿನ ಪರಿಸ್ಥಿತಿ ಏನಾಗಿದೆ?
ಪಾಕ್ ಸರ್ಕಾರದ ಪ್ರತಿಯೊಂದು ನಡೆಯೂ ಸಂಶಯಾಸ್ಪದ!
ಪಾಕ್ V/S ಬಲೂಚ್.. ಯಾರಿಗೆ ಯಾರ ಬೆಂಬಲ?
ಹಾಗಾದ್ರೆ ಬಲೂಚಿಸ್ತಾನದ ಭವಿಷ್ಯವೇನು?
  1. CPEC ಮತ್ತು ಚೀನಾದ ಪಾತ್ರ: CPEC ಯೋಜನೆ ಬಲೂಚಿಸ್ತಾನ್‌ನ ಸಂಪತ್ತನ್ನು ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಲೂಟಿ ಮಾಡಬಹುದು.
  2. ಪಾಕ್ ಸೇನಾ ಪ್ರಾಬಲ್ಯ!: ಬಲೂಚಿಸ್ತಾನ ಪ್ರಾಂತ್ಯದಲ್ಲಿ ಪಾಕ್ ಸೇನೆಯ ಪ್ರಾಬಲ್ಯ ಹೆಚ್ಚಿದಷ್ಟೂ ಸಂಘರ್ಷ ಉಲ್ಬಣಿಸಬಹುದು.
  3. ಪಾಕ್ ಇಬ್ಬಾಗ?: ಬಲೂಚಿ ನಾಯಕರೊಂದಿಗೆ ಮಾತುಕತೆಗೆ ಸರ್ಕಾರ ಸಿದ್ಧವಿಲ್ಲ. ಹೀಗಾಗಿ, ಹೋರಾಟ ಉಲ್ಬಣಿಸಿದರೆ ದೇಶವೇ ಇಬ್ಬಾಗ ಆಗಬಹುದು!

ಒಟ್ಟಾರೆ ಹೇಳಬೇಕೆಂದರೆ, ಬಲೂಚಿಸ್ತಾನ್ ಸಮಸ್ಯೆ ಪಾಕಿಸ್ತಾನದ ಆಂತರಿಕ ಸ್ಥಿರತೆಗೆ ಗಂಭೀರ ಸವಾಲಾಗಿದೆ. ಸಂಪನ್ಮೂಲಗಳ ನ್ಯಾಯಯುತ ಹಂಚಿಕೆ, ರಾಜಕೀಯ ಪ್ರಾತಿನಿಧ್ಯ ಮತ್ತು ಮಾನವ ಹಕ್ಕುಗಳಿಗೆ ಗೌರವ ಕೊಡದೇ ಇದ್ದರೆ ಏನಾಗುತ್ತೆ ಅನ್ನೋದಕ್ಕೆ ಬಲೂಚಿಸ್ತಾನ ಸಂಘರ್ಷ ಅತ್ಯಂತ ಉತ್ತಮ ನಿದರ್ಶನವಾಗಿದೆ.

(ಮೂಲ: ಅಮ್ನೆಸ್ಟಿ ಇಂಟರ್‌ನ್ಯಾಷನಲ್ ವರದಿಗಳು, ಪಾಕಿಸ್ತಾನದ ಪತ್ರಿಕೆಗಳು, ಬಲೂಚಿ ಹೋರಾಟಗಾರರ ಹೇಳಿಕೆಗಳು)

Exit mobile version