ಅಬ್ಬಬ್ಬಾ..ಕಿಂಗ್‌ ಕಾಂಗ್‌ ಕೋಣ..! ಇದೇ ನೋಡಿ ವಿಶ್ವದಲ್ಲೇ ಎತ್ತರದ ಕೋಣ..!

Untitled design 2025 03 06t164644.239

ಥೈಲ್ಯಾಂಡ್ ದೇಶದಲ್ಲಿರೋ ದೈತ್ಯ ಆನೆಯಂತಿರೋ ಈ ಕೋಣ ವಿಶ್ವದ ಅತಿ ಎತ್ತರದ ಕೋಣ ಎಂದು ಗಿನ್ನೆಸ್ ದಾಖಲೆಯನ್ನು ಬರೆದಿದೆ. ಕಿಂಗ್‌ ಕಾನ್‌ ಎಂದೇ ಪ್ರಖ್ಯಾತಿ ಪಡೆದಿರೋ ಈ ಕೋಣ ಬರೋಬ್ಬರಿ 6 ಅಡಿ 8 ಇಂಚು ಎತ್ತರವಿದೆ. 2021 ಏಪ್ರಿಲ್ 1 ರಂದು ಜನಿಸಿದ ಕಿಂಗ್ ಕಾಂಗ್‌ ಕೋಣಕ್ಕೆ ಈಗ 4 ವರ್ಷದ ಪ್ರಾಯ. ಪ್ರತಿದಿನ 35 ಕೆಜಿಗೂ ಹೆಚ್ಚು ಆಹಾರ ತಿನ್ನುವ ಕಿಂಗ್ ಕಾನ್‌ನ ಫೇವ್‌ರೆಟ್‌ ಫುಡ್‌ ಅಂದ್ರೆ ಹುಲ್ಲು, ಜೋಳ, ಬಾಳೆಹಣ್ಣು. ಈ ದೈತ್ಯ ಗಾತ್ರದ ಕೋಣವನ್ನು ಸಾಕುತ್ತಿರುವ ಮಾಲೀಕರು ಈ ಕಿಂಗ್‌ ಕಾನ್‌ನನ್ನು ತಮ್ಮ ಮನೆಯ ಮಕ್ಕಳಿಗಿಂತ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.

ADVERTISEMENT
ADVERTISEMENT

ಥೈಲ್ಯಾಂಡ್‌ನ ನಖೋನ್ ರಾಟ್ಚಸಿಮಾದ ನಿನ್ಲಾನಿ ಫಾರ್ಮ್‌ ಮಾಲೀಕರ ಒಡೆತನದಲ್ಲಿರೋ ಈ ದೈತ್ಯ ಕೋಣ ಕಿಂಗ್‌ ಕಾಂಗ್‌, ಇತರ ವಯಸ್ಕ ಎಮ್ಮೆಗಳಿಗಿಂತ 20 ಇಂಚು ಎತ್ತರವಾಗಿದೆಯಂತೆ. ಈ ಕೋಣ ಹುಟ್ಟಿದಾಗಿನಿಂದಲೂ ಜನಿಸಿದ ಕ್ಷಣದಿಂದಲೂ ಕಿಂಗ್ ಕಾಂಗ್‌ನ ಎತ್ತರ ಎದ್ದು ಕಾಣುತ್ತಿತ್ತು ಎಂದು ಫಾರ್ಮ್ ಮಾಲೀಕ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಸದ್ಯ 185 ಸೆಂಟಿ ಮೀಟರ್‌ ಎತ್ತರದೊಂದಿಗೆ ವಿಶ್ವದಲ್ಲಿ ಅತಿ ಎತ್ತರದ ಕೋಣ ಎನಿಸಿಕೊಂಡಡು ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ಗೆ ಪಾತ್ರವಾಗಿದೆ ಕಿಂಗ್ ಕಾಂಗ್ ಕೋಣ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಕಿಂಗ್ ಕಾಂಗ್‌ ಕೋಣದ ದಿನಚರಿ ಶುರುವಾಗುತ್ತದೆ. ಎದ್ದ ತಕ್ಷಣ ದೀರ್ಘಕಾಲದವರೆಗೆ ಸ್ನಾನದ ಸೇವೆ ನಡೆಯುತ್ತದೆ. ಬಳಿಕ ನಂತರ ಅದಕ್ಕೆ ಇಷ್ಟವಾಗುವ ಆಹಾರಗಳನ್ನು ನೀಡಲಾಗುತ್ತದೆ ಎಂದು ಕಿಂಗ್ ಕಾಂಗ್ ಅನ್ನು ನೋಡಿಕೊಳ್ಳುವರು ಹೇಳಿದ್ದಾರೆ.

ನೋಡೋಕೆ ದೈತ್ಯ ಗಾತ್ರವಿದ್ದರೂ ಕಿಂಗ್ ಕಾಂಗ್ ಸೌಮ್ಯ ಸ್ವಭಾವದ್ದಾಗಿದೆಯಂತೆ. ಜೊತೆಗೆ ಎಲ್ಲರ ಜೊತೆಯೂ ಸ್ನೇಹಪರವಾಗಿ ವರ್ತಿಸುತ್ತದೆಯಂತೆ. ಫಾರ್ಮ್‌ನಲ್ಲಿ ಈ ಕೋಣವನ್ನು ಪ್ರೀತಿಯಿಂದ ಯೆನು ಎಂದು ಕರೆಯುತ್ತಾರೆ. ಯೆನು ಅಂದರೆ ದೊಡ್ಡ ಮರ್ಯಾದಸ್ಥ ಎಂದು ಅರ್ಥವಂತೆ. ಕಿಂಗ್‌ ಕಾಂಗ್‌ ಮಾಲೀಕರು ಹೇಳುವಂತೆ ಅವನು ಫಾರ್ಮ್‌ನ ಬಲಿಷ್ಠ ದೊಡ್ಡ ನಾಯಕನಂತೆ. ಕಿಂಗ್ ಕಾಂಗ್‌ ಕೋಣಕ್ಕೆ ಕಾಲುಗಳಿಂದ ಮಣ್ಣಿನಲ್ಲಿ ಗುಂಡಿ ತೋಡುವುದು ಮತ್ತು ಜನರೊಂದಿಗೆ ಓಡುವುದು ನೆಚ್ಚಿನ ಆಟಗಳು ಎಂದು ಹೆಮ್ಮೆಯಿಂದ ಹೇಳಿದ್ದಾರೆ ಫಾರ್ಮ್‌ ಮಾಲೀಕ.

Exit mobile version