ಸುನಿತಾ ವಿಲಿಯಮ್ಸ್ ಸೇಫ್ ಆಗಿ ಭೂಮಿಗೆ ಬಂದಿದ್ದಾರೆ. ಸುನಿತಾ ವಿಲಿಯಮ್ಸ್ ಅವರನ್ನ ಭೂಮಿಗೆ ಕರೆತಂದ ಪ್ರತಿ ಹೆಜ್ಜೆಯೂ ರೋಚಕವಾಗಿದೆ.
286 ದಿನಗಳ ಬಳಿಕ ಭೂಮಿಗೆ ವಾಪಸ್..!
ಸುನಿತಾ ಮತ್ತು ವಿಲ್ಮೋರ್ 286 ದಿನಗಳ ಬಳಿಕ ಭೂಮಿಗೆ ಬಂದಿದ್ದಾರೆ. ಸಹ ಗಗನಯಾತ್ರಿಗಳಾದ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಒಳಗೊಂಡಂತೆ ಒಟ್ಟು ನಾಲ್ವರನ್ನು ಹೊತ್ತ ‘ಸ್ಪೇಸೆಕ್ಸ್ ಕ್ರ್ಯೂ ಡ್ರ್ಯಾಗನ್’ ಗಗನನೌಕೆ ಸುರಕ್ಷಿತವಾಗಿ ಬುಧವಾರ ಬೆಳಗ್ಗೆ ಸರಿಯಾಗಿ 3.37ಕ್ಕೆ ಫ್ಲೋರಿಡಾ ಕರಾವಳಿಯಲ್ಲಿ ಇಳಿದಿದೆ.
ಸತತ 17 ಗಂಟೆಗಳ ಸುದೀರ್ಘ ಪ್ರಯಾಣ..!
ಸುನಿತಾ ವಿಲಿಯಮ್ಸ್ ಅಂತರಿಕ್ಷದಿಂದ ಭೂಮಿಗೆ ಪ್ರಯಾಣ ಬೆಳೆಸಿದ್ದು ಮಂಗಳವಾರ ಬೆಳಗ್ಗೆ 10.30ಕ್ಕೆ. ಭೂಮಿಗೆ ಬಂದಿದ್ದು ಬುಧವಾರ ಬೆಳಗ್ಗೆ 3 ಗಂಟೆ 37 ನಿಮಿಷಕ್ಕೆ. ಭೂಮಿಗೆ ಕಾಲಿಡುವ ಮುನ್ನ ಸತತ 17 ಗಂಟೆ ಕುಂತಲ್ಲೇ ಕೂತಿರಬೇಕು. ಕ್ಯಾಪ್ಸೂಲ್‌ನಲ್ಲಿಯೇ ಕುಳಿತಿರಬೇಕು. ಅಲುಗಾಡುವಂತೆಯೂ ಇಲ್ಲ.
ಕಾರಲ್ಲೋ.. ಬಸ್ಸಲ್ಲೋ.. ನೂರಿನ್ನೂರು ಕಿಲೋ ಮೀಟರ್ ಪ್ರಯಾಣ ಮಾಡ್ಬೇಕಾದ್ರೆ, ನಾವು ಕೂತಲ್ಲಿ ಕೂರೋಕಾಗ್ದೆ ಚಿತ್ರ ವಿಚಿತ್ರ ಭಂಗಿಯಲ್ಲಿ ಎದ್ದು, ಕೂತು ಮಾಡ್ತೇವೆ. ರೈಲಲ್ಲೋ.. ವಿಮಾನದಲ್ಲೋ ಆದ್ರೆ ಎದ್ದು ಓಡಾಡ್ತಾ ಇರ್ತೇವೆ. ಆದರೆ, ಸುನಿತಾ ಮತ್ತು ಬುಚ್ ವಿಲ್ಮೋರ್ ಸತತ 17 ಗಂಟೆಗಳ ಕಾಲ ಎದ್ದು ಓಡಾಡೋ ಹಾಗೂ ಇಲ್ಲ.
27,359 ಕಿ.ಮೀ. ವೇಗದಿಂದ 32 ಕಿ.ಮೀ. ವೇಗಕ್ಕೆ..!
ನೂರೋ.. ನೂರೈವತ್ತೋ ಕಿ.ಮೀ. ವೇಗದ ಕಾರನ್ನ ಸಡನ್ನಾಗಿ ಬ್ರೇಕ್ ಹಾಕ್ಬೇಕಂದ್ರೆ ಸ್ವಲ್ಪ ಸ್ವಲ್ಪಾನೇ ವೇಗ ತಗ್ಗಿಸ್ತೀವಲ್ಲ. ಈ ಸ್ಪೇಸ್ ಎಕ್ಸ್ ಗಗನ ನೌಕೆ ಕೂಡಾ ಹಾಗೇ. ಬಾಹ್ಯಾಕಾಶದಿಂದ ಸುನಿತಾ , ವಿಲ್ಮೋರ್ ಪ್ಲಸ್ ಇನ್ನಿಬ್ಬರು ಗಗನಯಾತ್ರಿಗಳನ್ನ ಹೊತ್ಕೊಂಡ ಗಗನ ನೌಕೆ ಹೊರಡ್ತಲ್ಲ, ಆಗ ಅದರ ವೇಗ ಇದ್ದದ್ದುಗಂಟೆಗೆ 27 ಸಾವರದ ಮುನ್ನೂರಾ 59 ಕಿ.ಮೀ. ಅದು ಫ್ಲೋರಿಡಾದ ಸಮುದ್ರದಲ್ಲಿ ಇಳೀತಲ್ಲ, ಆಗ ಅದೇ ಗಗನ ನೌಕೆಯ ವೇಗ ಗಂಟೆಗೆ 32 ಕಿ.ಮೀ. ಇದೆಲ್ಲ ಹೇಗೆ ಸಾಧ್ಯ..?
ವೇಗ ತಗ್ಗಿಸುವ ಕ್ಲಸ್ಟರ್ಸ್..!
ಸಾವಿರಾರು ಕಿ.ಮೀ. ವೇಗ ಹಂತ ಹಂತವಾಗಿ ತಗ್ಗಬೇಕು. ಅದಕ್ಕೆ ಸಹಾಯ ಮಾಡುವುದು ಗಗನನೌಕೆಯಲ್ಲಿರುವ ಕ್ಲಸ್ಟರ್‌ಗಳು. ಕ್ಯಾಪ್ಸೂಲ್ ಭೂಮಿಗೆ ಹತ್ತಿರ ಬಂದು ನೀರಿಗೆ ಬಿದ್ದಾಗ ಕ್ಯಾಪ್ಸೂಲ್‌ಗೆ ಅಳವಡಿಸಿರುವ ಪ್ಯಾರಾಚೂಟ್ ಓಪನ್ ಆಗುತ್ತದೆ. ಅಕಸ್ಮಾತ್ ಅದು ಓಪನ್ ಆಗದೇ ಇದ್ದರೆ ಕೂಡಾ ಅಪಾಯ. ಈ ಕ್ಲಸ್ಟರ್‌ಗಳು ವೇಗ ಮತ್ತು ದಿಕ್ಕನ್ನ ನಿರ್ಧಾರ ಮಾಡ್ತವೆ.
3800 ಡಿಗ್ರಿಯಿಂದ ನಾರ್ಮಲ್ ಶಾಖ ವಲಯಕ್ಕೆ..!
ಸುನಿತಾ ಅಂಡ್ ಟೀಂ ಇದ್ದ ಕ್ಯಾಪ್ಸೂಲ್ ಭೂಮಿಗೆ ಬರುತ್ತಲ್ಲ.. ಆ ಭೂಮಿಯ ವಾತಾವರಣಕ್ಕೆ ಪ್ರವೇಶಿಸುವಾಗ ಆ ಕ್ಯಾಪ್ಸೂಲ್‌ನ ಶಾಖ ಎಷ್ಟಿರುತ್ತೆ ಗೊತ್ತಾ.. 3800 ಡಿಗ್ರಿ. ಸಾಮಾನ್ಯ ವ್ಯಕ್ತಿಗಳು ಬಿಸಿಲು 40 ಡಿಗ್ರಿ ದಾಟಿದ್ರೆ ಉರಿಉರಿ ಅಂತಾರೆ. 60 ಡಿಗ್ರಿ ದಾಟಿದ್ರೆ ಆ ಶಾಖಕ್ಕೇ ಸತ್ತು ಹೋಗ್ತಾರೆ. ಹಾಗಾದ್ರೆ ಈ ಸುನಿತಾ & ಟೀಂ ಆ ಬಿಸಿಯನ್ನ ತಡ್ಕೊಂಡಿದ್ದು ಹೇಗೆ..? ಹೇಗೆ ಅಂದ್ರೆ ಆ ಕ್ಯಾಪ್ಸೂಲ್ ಇರುತ್ತಲ್ಲ, ಅದಕ್ಕೊಂದು ರಕ್ಷಾ ಕವಚ ಇರುತ್ತೆ. ಬಿಸಿಯನ್ನ ತಡೆಯುವುದು ಕ್ಯಾಪ್ಸೂಲ್‌ಗೆ ಅಳವಡಿಸಿರುವ ಕವಚ. ಇಲ್ಲದೇ ಇದ್ರೆ ಸುನಿತಾ ಅವರಿದ್ದ ಕ್ಯಾಪ್ಸೂಲ್ ಬೆಂಕಿ ಉಂಡೆ ಆಗ್ಬಿಡುತ್ತೆ.
ಕಲ್ಪನಾ ಚಾವ್ಲಾ ಅವರಿದ್ದ ನೌಕೆ ವಿಫಲವಾಗಿ, ಸುಟ್ಟು ಹೋಯ್ತಲ್ಲ.. ಆಗ ವಿಫಲವಾಗಿದ್ದದ್ದೇ ಈ ರಕ್ಷಾ ಕವಚ.
ಇಷ್ಟೆಲ್ಲ ಆಗಿ ಸುನಿತಾ ವಿಲಿಯಮ್ಸ್ ಅವರಿದ್ದ ನೌಕೆ, ಸಮುದ್ರಕ್ಕೇ ಏಕೆ ಬೀಳುತ್ತೆ ಅನ್ನೋದಕ್ಕೂ ಕೂಡಾ ಆ ಶಾಖವೇ ಕಾರಣ. ಭೂಮಿಗೆ ಇಳಿಸೋವಾಗ ಎಲ್ಲೋ ಒಂದು ಕಡೆ ಗಾಳಿ, ಭೂಮಿ ಘರ್ಷಣೆ ಆದ್ರೆ, ಸಣ್ಣದೊಂದು ಡಿಕ್ಕಿ ಆದ್ರೆ, ಎಲ್ಲ ವೇಸ್ಟ್ ಆಗ್ಬಿಡುತ್ತೆ. ಅಕಸ್ಮಾತ್ ಕಡೆಯ ಕ್ಷಣದಲ್ಲಿ ಎಡವಟ್ಟಾದ್ರೆ.. ಇನ್ನೊಂದು ಸೇಫ್ಟಿ ಇರಲಿ ಅಂತಾನೇ ಸಮುದ್ರಕ್ಕೆ ಇಳಿಸ್ತಾರೆ.
ಸುನಿತಾಗೆ ವೆಲ್ ಕಂ ಹೇಳಿದ ಡಾಲ್ಫಿನ್ಸ್..!
ಭೂಮಿಗೆ ಇಳಿದ ನೌಕೆಯ ಹತ್ತಿರ ತಕ್ಷಣ ಸಿಬ್ಬಂದಿ ಹೋಗಲಿಲ್ಲ. ಸುನಿತಾ ವಿಲಿಯಮ್ಸ್ ನೌಕೆ ಇಳಿಯೋ ಪ್ರದೇಶವನ್ನ ಕ್ಲಿಯರ್ ಮಾಡಲಾಗಿತ್ತು. ಆದರೆ ಎಲ್ಲವನ್ನೂ ಓವರ್ ಟೇಕ್ ಮಾಡಿ ಒಂದಿಷ್ಟು ಡಾಲ್ಫಿನ್ನುಗಳು ನೌಕೆಯ ಹತ್ತಿರ ಆಟವಾಡ್ತಾ ಇದ್ವು. ಅವುಗಳನ್ನೆಲ್ಲ ಕ್ಲಿಯರ್ ಮಾಡಿದ ನಂತರವೇ ನಾಸಾ ಸಿಬ್ಬಂದಿ ಗಗನ ಕ್ರ್ಯೂ ಡ್ರಾಗನ್ ಹತ್ತಿರ ಹೋಗಿದ್ದು.
ಇಷ್ಟೆಲ್ಲ ಆಗಿ ಈಗ ಸುನಿತಾ ವಿಲಿಯಮ್ಸ್ ಹ್ಯೂಸ್ಟನ್‌ನಲ್ಲಿರೋ ರಿ-ಹ್ಯಾಬಿಟೇಷನ್ ಸೆಂಟರಿಗೆ ಹೋಗಿದ್ದಾರೆ. ಇನ್ನು 45 ದಿನಗಳ ಕಾಲ ಅವರು ಕಠಿಣ ಕ್ವಾರಂಟೈನ್ ಮಾಡ್ಲೇಬೇಕು.