ಗದಗ : ಗದಗದಲ್ಲಿ ನಡೆದಿದ್ದ ಭೀಕರ ಹತ್ಯೆ ಪ್ರಕರಣದ ಜಾಡು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 8 ಮಂದಿ ಆರೋಪಿಗಳನ್ನೂ ಬಂಧಿಸಲಾಗಿದೆ. ಆದರೆ, ಈ ದುರಂತದಲ್ಲಿ ಹತ್ಯೆಯಾದವರೇ ಬೇರೆ, ಆಗಬೇಕಿದ್ದವರೇ ಬೇರೆ. ಹೌದು ವೀಕ್ಷಕರೇ ಕೋಣೆ ಬದಲಾಯಿಸಿ ಮಲಗಿದ್ದಕ್ಕೆ ದಂಪತಿ ಬಚಾವಾದರೆ, ಅವರ ಮಗ ಹಾಗೂ ಆತನ ಜತೆಗಿದ್ದ ಸಂಬಂಧಿಕರು ದಾರುಣವಾಗಿ ಹತ್ಯೆಯಾಗಿದ್ದಾರೆ. ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಕೊಲೆಯ ರಹಸ್ಯದ ರೋಚಕ ಸ್ಟೋರಿ ಇಲ್ಲಿದೆ.
ಮುದ್ರಣ ಕಾಶಿ ಎಂದೇ ಪ್ರಸಿದ್ದಿ ಹೊಂದಿರೋ ಗದಗ ಜಿಲ್ಲೆಯಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಮನೆಯಲ್ಲಿ ಮಲಗಿದ್ದಲ್ಲೇ ನಾಲ್ವರನ್ನು ಬೀಕರವಾಗಿ ಹತ್ಯೆ ಮಾಡಿದ್ದ ಕೇಸ್ ಗೆ ಇದೀಗ್ ಬಿಗ್ ಟ್ವಿಸ್ಟ್ ಸಿಕ್ಕಿದೆ… ಎಸ್ ಕೊಲೆ ನಡೆದ 72 ಗಂಟೆಗಳಲ್ಲಿಯೇ, ಪ್ರಕರಣವನ್ನು ಬೇಧಿಸಿದ ಪೊಲೀಸರು ಆರೋಪಿಗಳಿಗೆ ಖೆಡ್ಡಾ ತೋಡಿದ್ದಾರೆ.
ಅಷ್ಟಕ್ಕೂ ಈ ಕೊಲೆಗಳ ಮಾಸ್ಟರ್ ಮೈಂಡ್ ಯಾರು? ಈ ಕುಟುಂಬವನ್ನೇ ಟಾರ್ಗೆಟ್ ಮಾಡಿದ್ದು ಯಾಕೆ ? ಆತನಿಗೂ ಆ ಕುಟುಂಬಕ್ಕೂ ಇದ್ದ ದ್ವೇಷವಾದ್ರೂ ಎಂತದ್ದು? ಆತನ ಉದ್ದೇಶವಾದ್ರೂ ಏನಾಗಿತ್ತು ಅನ್ನೋದನ್ನ ನೀವು ಕೇಳಿದ್ರೆ ದಂಗಾಗಿ ಹೋಗ್ತೀರಿ…?
ಹೌದು! ಆ ನಾಲ್ವರ ಮಾರಣಹೋಮಕ್ಕೆ ಕಾರಣವಾದವನೂ ಬೇರೆ ಯಾರು ಅಲ್ಲ! ಈವನೇ ನೋಡಿ… ವಿನಾಯಕ್ ಬಾಕಳೆ… ಇತ ಬೇರೆ ಯಾರು ಅಲ್ಲ.. ಪ್ರಕಾಶ್ ಬಾಕಳೆಯ ಮೊದಲ ಮಗ. ಅರೇ ಈ ಪಾಪಿಗೆ ಹೆತ್ತ ತಂದೆಯನ್ನೇ ಕೊಲ್ಲಲು ಸ್ಕೇಚ್ ಹಾಕುವಂತಹದ್ದಾದರೂ ಅಂತಹದ್ದೇನಾಗಿತ್ತು ಅಂತೀರಾ.. ಅದಕ್ಕೆ ಕಾರಣ ಅವರ ತಂದಯೇ… ಎಸ್ ವಿನಾಯಕ್ ಪ್ರಕಾಶನ ಮೊದಲ ಹೆಂಡತಿಯ ಮಗ.. ಪಕ್ರಾಶನಿಗೆ ಇಬ್ಬರು ಹೆಂಡತಿಯರು. ಮೊದಲ ಹೆಂಡತಿಯನ್ನು ತೊರೆದ್ದಿದ್ದ ಪ್ರಕಾಶ ಎರಡನೇ ಹೆಂಡತಿಯ ಜೊತೆಗೆ ವಾಸವಿದ್ದ. ಅಪ್ಪ-ಮಕ್ಕಳಿಬ್ಬರು ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದರು. ಈ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದೆ ಈ ನಾಲ್ವರ ದಾರುಣ ಸಾವಿಗೆ ಕಾರಣವಾಗಿದೆ.. ಆದರೆ, ಈ ದುರಂತದಲ್ಲಿ ಹತ್ಯೆಯಾದವರೇ ಬೇರೆ, ಆಗಬೇಕಿದ್ದವರೇ ಬೇರೆ ರೂಮ್ ಬದಲಾಯಿಸಿ ಮಲಗಿದ್ದಕ್ಕೆ ದಂಪತಿ ಬಚಾವಾದರೆ, ಅವರ ಮಗ ಹಾಗೂ ಆತನ ಜತೆಗಿದ್ದ ಸಂಬಂಧಿಕರು ದಾರುಣವಾಗಿ ಹತ್ಯೆಯಾಗಿದ್ದಾರೆ.
ಗದಗ ನಗರದ ದಾಸರ ಓಣಿಯಲ್ಲಿ ನಗರಸಭೆ ಉಪಾಧ್ಯಕ್ಷೆ ಕಿರಿಯ ಮಗ ಕಾರ್ತಿಕ್ ಬಾಕಳೆ (28), ಪರಶುರಾಮ ಹಾದಿಮನಿ (55), ಪತ್ನಿ ಲಕ್ಷ್ಮೀ ಹಾದಿಮನಿ (45), ಪುತ್ರಿ ಆಕಾಂಕ್ಷಾ ಹಾದಿಮನಿ (16) ಕೊಲೆಯಾಗಿತ್ತು. ಇದೀಗ ಪ್ರಕಾಶ್ ಬಾಕಳೆ ಅವರ ಹಿರಿಯ ಮಗ ವಿನಾಯಕ್ ಬಾಕಳೆ ಕೊಲೆಗೆ ಸುಪಾರಿ ನೀಡಿದ್ದು ಬಹಿರಂಗವಾಗಿದೆ.
ಪ್ರಕಾಶ್ ಹಿರಿಯ ಮಗನ ಹೆಸರಿನಲ್ಲಿ ಸಾಕಷ್ಟು ಆಸ್ತಿ ಮಾಡಿದ್ದರು. ಆದರೆ, ಪ್ರಕಾಶ್ ಗಮನಕ್ಕೆ ತಾರದೇ ಮಗ ವಿನಾಯಕ್ ಕೆಲ ಆಸ್ತಿ ಮಾರಿದ್ದ. ಆತನ ವರ್ತನೆಗೆ ಬೇಸತ್ತು ಜಗಳವಾಡಿದ್ದ ಪ್ರಕಾಶ್ ಬಾಕಳೆ ಜಗಳವಾಡಿದ್ದರು. ಆಸ್ತಿ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರಕಾಶ್, ಪತ್ನಿ ಸುನಂದಾ, ಪುತ್ರ ಕಾರ್ತಿಕ್ ಹತ್ಯೆಗೆ ಆರೋಪಿ ವಿನಾಯಕ್ ಸಂಚು ಹೂಡಿದ್ದ.
ಬೇರೆ ಕೋಣೆಯಲ್ಲಿ ಮಲಗಿದ್ದರಿಂದ ಬಚಾವ್.!
ಘಟನೆ ದಿನ ಪ್ರಕಾಶ್ ಹಾಗೂ ಅವರ ಪತ್ನಿ ಸುನಂದಾ ಬೇರೆ ಕೋಣೆಯಲ್ಲಿ ಮಲಗಿದ್ದರು. ಹೀಗಾಗಿ ಅವರು ಸಾವಿನಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಮನೆಗೆ ನುಗ್ಗಿದ್ದ ಹಂತಕರು ಅವರ ಬದಲಿಗೆ ಕಾರ್ತಿಕ್ ಜೊತೆ ಇದ್ದ ಸಂಬಂಧಿಕರನ್ನು ಹತ್ಯೆ ಮಾಡಿದ್ದಾರೆ. ಪ್ರಕಾಶ್ ಹಾಗೂ ಸುನಂದಾ ಎಂದು ಭಾವಿಸಿ ಹಂತಕರು ಸುನಂದಾ ಬಾಕಳೆ ಪುತ್ರ ಕಾರ್ತಿಕ್ ಜತೆಗಿದ್ದ ಕೊಪ್ಪಳದ ಭಾಗ್ಯ ನಗರ ನಿವಾಸಿ, ಹೋಟೆಲ್ ಉದ್ಯಮಿ ಪರಶುರಾಮ (55), ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಇವರನ್ನು ಹತ್ಯೆ ಮಾಡಿದ್ದರು.
65 ಲಕ್ಷ ರೂಪಾಯಿಗೆ ನಡೆದಿತ್ತು ಡೀಲ್, ಸುಪಾರಿ ಕೊಟ್ಟಿದ್ದ ವಿನಾಯಕ್..!
ಪ್ರಕರಣದ ಮೊದಲ ಆರೋಪಿ ವಿನಾಯಕ್ ಬಾಕಳೆ (ಪ್ರಕಾಶ್ ಬಾಕಳೆಯ ಮೊದಲ ಪತ್ನಿಯ ಮಗ) ಮತ್ತೊಬ್ಬ ಆರೋಪಿ ಫೈರೋಜ್ಗೆ 65 ಲಕ್ಷ ರೂಪಾಯಿ ಹಣಕ್ಕೆ ಸುಪಾರಿ ಡೀಲ್ ಕೊಟ್ಟಿದ್ದ. ಮುಂಗಡವಾಗಿ 2 ಲಕ್ಷ ರೂಪಾಯಿ ಕೊಟ್ಟಿದ್ದ ವಿನಾಯಕ್ ಬಾಕಳೆ ತಂದೆ ಪ್ರಕಾಶ್ ಬಾಕಳೆ, ಅವರ ಪತ್ನಿ ಸುನಂದಾ ಹಾಗೂ ಪುತ್ರ ಕಾರ್ತಿಕ್ ಕೊಲೆಗೆ ಸಂಚು ಹೂಡಿದ್ದ. ತಂದೆ ಪ್ರಕಾಶ್ ಜೊತೆ ವ್ಯವಹಾರಿಕ ವೈಮನಸ್ಸಿನ ಕಾರಣ ಈ ಕೊಲೆಗೆ ಆತ ಸಂಚು ಹೂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಗದಗ ಕೊಲೆ (Gadag Murder Case) ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ಹತ್ಯೆಯ ರಹಸ್ಯ ಭೇದಿಸುವಲ್ಲಿ ಪೊಲೀಸರು (Gadag Police) ಕೊನೆಗೂ ಯಶಸ್ವಿಯಾಗಿದ್ದಾರೆ. ಘಟನೆ ಸಂಬಂಧ 8 ಮಂದಿ ಆರೋಪಿಗಳನ್ನು 48 ಗಂಟೆಗಳ ಒಳಗಾಗಿ ಬಂಧಿಸಿದ್ದೇವೆ ಎಂದು ಗದಗ ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ (Gadag IGP Vikas Kumar) ತಿಳಿಸಿದ್ದಾರೆ. ಗದಗ ಎಸ್ಪಿ ಬಿಎಸ್ ನೇಮಗೌಡ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.
ಘಟನೆ ಸಂಬಂಧ ಪ್ರಮುಖ ಆರೋಪಿ ವಿನಾಯಕ್ ಬಾಕಳೆ ಸೇರಿದಂತೆ, ಇತರ ಆರೋಪಿಗಳಾದ ಫೈರೋಜ್ ಖಾಜಿ, ಜಿಶಾನ್ ಖಾಜಿ, ಮೀರಜ್ ಮೂಲದ ಸಾಹಿಲ್, ಸೋಹೆಲ್ ಖಾಜಿ, ಸುಲ್ತಾನ್ ಶೇಖ್, ಮಹೇಶ್ ಸಾಳೋಂಕೆ, ವಾಹಿದ್ ಬೇಪಾರಿಯನ್ನು ಬಂಧಿಸಲಾಗಿದೆ. ಕೊಲೆ ಕೇಸ್ ಭೇದಿಸಿದ್ದಕ್ಕೆ ತನಿಖೆ ನಡೆಸಿದ್ದ ಸಿಬ್ಬಂದಿಯನ್ನು ಡಿಜಿ, ಐಜಿಪಿ ಅಲೋಕ್ ಕುಮಾರ್ ಶ್ಲಾಘಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ್ದ ಸಿಬ್ಬಂದಿಗೆ ತಲಾ 5 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ನೋಡಿ ಆಸ್ತಿಗಾಗಿ ದಾಯಾದಿಗಳಂತೆ ಕೀತ್ತಾಡೋರು ಏನು ಮಾಡೋದಕ್ಕೋ ಹೇಸಲ್ಲ ಅನ್ನೋದಕ್ಕೆ ಇದೇ ದೊಡ್ಡ ಎಕ್ಸಾಂಪಲ್..