ಭಾರತೀಯರಿಗೆ ಹೂಸ ವರ್ಷಕ್ಕೆ ಕಾಲಿಡುತ್ತಲ್ಲೆ ಬಿಗ್ ಶಾಕ್ ಚಿನ್ನ – ಬೆಳ್ಳಿ ಬೆಲೆ ಗಗನಕ್ಕೆರುತ್ತಿದೆ .ಬಂಗಾರ ಎಂದರೆ ಹೆಣ್ಣು ಮಕ್ಕಳಿಗೆ ಪ್ರೀತಿ , ವ್ಯಾಮೋಹ.ಬಂಗಾರವು ಭವಿಷ್ಯದ ಹೂಡಿಕೆಯ ಸ್ವರೂಪವೂ ಆಗಿದೆ. ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರೋದು, ಇಳಿಯೋದು ಬಂಗಾರದ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಸಂಭ್ರಮ ಮತ್ತು ಚಿಂತೆ ಎರಡನ್ನೂ ಒಡ್ಡುತ್ತದೆ.
ಚಿನ್ನ ಖರೀದಿಗೆ ಒಳ್ಳೆಯ ದಿನ ಬೇಕಾಗಿಲ್ಲ ಏಕೆಂದರೆ ಬಂಗಾರ ಅಂತಹದ್ದಾಗಿದೆ . ಬಂಗಾರ ಕೊಳ್ಳುವವರು ಚಿನ್ನದ ಬೆಲೆ ಇಳಿದರೆ ಸಾಕು ಅಂತಾ ಕಾಯುತ್ತಿರುತ್ತಾರೆ. ಬಂಗಾರ ಇದ್ದರೆ ಆಪತ್ತಿಗೆ ಆದೀತು ಎಂದು ಜನರ ಯೋಚನೆ ಆಗಿರುತ್ತದೆ . ಬಂಗಾರವನ್ನು ಕಷ್ಟದ ಕಾಲದಲ್ಲಿ ಹಣ ಹೊಂದಿಸಲು ಸಾಧ್ಯವಾಗದಿದ್ದಾಗ ಹೀಗೆ ತುರ್ತುಪರಿಸ್ಥಿತಿಯಲ್ಲಿ ಚಿನ್ನಭಾರಣ ಕೈ ಹಿಡಿಯುತದ್ದೆ ಎನ್ನುವ ನಂಬಿಕೆ . ಬೆಳ್ಳಿ-ಬಂಗಾರ ವಿಚಾರಕ್ಕೆ ಬಂದರೆ ಭಾರತದಲ್ಲಿ ಬೇಡಿಕೆ ಹೆಚ್ಚು. ಇದನ್ನು ಕೊಳ್ಳುವವರು ಮತ್ತು ಧರಿಸುವವರ ಎರಡೂ ಸಂಖ್ಯೆಯೂ ಹೆಚ್ಚೇ ಇದೆ.
ನಗರಗಳಲ್ಲಿ ಚಿನ್ನದ ರೇಟ್ ಹೇಗಿದೆ?
ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಒಂದು ಗ್ರಾಂ) ರೂ. 7,150 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 7,150 , ರೂ. 7,150 , ರೂ. 7,150 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 7,165 ರೂ. ಆಗಿದೆ.
ಮಾರುಕಟ್ಟೆಯಲ್ಲಿ ಬಂಗಾರದ ದರ
ಇಂದು ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,850 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 7,150 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 7,800 ಆಗಿದೆ.
ಅದೇ ಎಂಟು ಗ್ರಾಂ (8GM) 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 46,800 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 57,200 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 62,400 ಆಗಿದೆ.
ಇನ್ನು ಹತ್ತು ಗ್ರಾಂ (10GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 58,500 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 71,500 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 78,000 ಆಗಿದೆ.
ನೂರು ಗ್ರಾಂ (100GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,85,000 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 7,15,000 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 7,80,000 ಆಗಿದೆ.
ಬೆಳ್ಳಿಯ ರೇಟ್
ಬೆಳ್ಳಿಯೂ ಕೂಡ ಭರ್ಜರಿಯಾಗಿಯೇ ದರ ಏರಿಸಿಕೊಂಡಿದ್ದು, ಚಿನ್ನದ ಹಿಂದೆಯೇ ಓಡುತ್ತಿದೆ. ಬೆಳ್ಳಿ ಪೂಜನಿಯ ವಸ್ತಗಳಾಗಿದ್ದು , ಬೆಳ್ಳಿಯ ಅನೇಕ ಪರಿಕರಗಳನ್ನು ದಿನಬಳಕೆಯಲ್ಲಿ ಬಳಸುತ್ತಿದ್ದಾರೆ.ಮದುವೆ ಸೀಸನ್ ಬಂತೆಂದರೆ ಬೆಳ್ಳಿಗೂ ಬಂಗಾರದ ಬೇಡಿಕೆ ಹೆಚ್ಚುತದ್ದೆ . ಬೆಳ್ಳಿ ಖರೀದಿಗೂ ಮುನ್ನ ಇಂದಿನ ಬೆಲೆಯನ್ನು ತಿಳಿದುಕೊಳ್ಳೋಣ.
ಇಂದು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿ ದರ ರೂ. 91,700 ಆಗಿದೆ. ಬೆಂಗಳೂರು ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 926, ರೂ. 9,260 ಹಾಗೂ ರೂ. 92,600 ಗಳಾಗಿವೆ.
ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 1,00,100 ಆಗಿದ್ದರೆ, ದೆಹಲಿಯಲ್ಲಿ ರೂ. 92,600, ಮುಂಬೈನಲ್ಲಿ ರೂ. 91,700 ಹಾಗೂ ಕೊಲ್ಕತ್ತದಲ್ಲೂ ರೂ. 92,600 ಗಳಾಗಿದೆ.
ಇಲ್ಲಿ ಕೊಡಲಾದ ಎಲ್ಲಾ ದರಗಳು ಮಾರುಕಟ್ಟೆಯ ಬೆಲೆಯನ್ನು ಪ್ರತಿನಿಧಿಸುತ್ತದೆ ಹಾಗೂ ,ಜಿಎಸ್ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.