ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ ಸರ್ಕಾರ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಿದೆ. ಗೃಹಲಕ್ಷ್ಮೀ. ಗೃಹಜ್ಯೋತಿ. ಯುವನಿಧಿ. ಶಕ್ತಿ ಯೋಜನೆಯನ್ನ ಜಾರಿ ಮಾಡಿದೆ. ಗ್ಯಾರಂಟಿ ಯೋಜನೆಯಿಂದ ರಾಜ್ಯದಲ್ಲಿ ಲಕ್ಷಾಂತರ ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ. ಆದ್ರೆ ಗ್ಯಾರಂಟಿ ಯೋಜನೆ ಜಾರಿ ಮಾಡಲು ಗ್ರೀನ್ ಸಿಗ್ನಲ್ ಸಿಕ್ಕಿದ್ದು ಮಾತ್ರ ಮಧ್ಯರಾತ್ರಿ ಅನ್ನೋದು 2 ಗಂಟಗೆ ಅನ್ನೋ ಕುತೊಹಲಕಾರಿದೆ.
ರಾಜ್ಯದಲ್ಲಿ ಜಾರಿಯಾಗಿರುವ ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಪ್ರತಿ ನಿತ್ಯ ಕೆಸರೆರಚಾಟ ನಡೆಸುತ್ತಲೇ ಬಂದಿದೆ. ಗ್ಯಾರಂಟಿ ಯೋಜನೆಗಳಿಗೆ ಅನುದಾನ ಒದಗಿಸುವ ವಿಚಾರದಲ್ಲೂ ಆಡಳಿತ ಪಕ್ಷ – ವಿರೋಧ ಪಕ್ಷಗಳು ಆರೋಪ ಪ್ರತ್ಯಾರೋಪ ಮಾಡುತ್ತಲೇ ಬರುತ್ತಿವೆ. ಗ್ಯಾರಂಟಿ ಯೋಜನೆಗಳಿಂದ ನಾವೂ ಬಡವರನ್ನ ಮೇಲೆತ್ತಿದ್ದೇವೆ. ಗ್ಯಾರಂಟಿಯಿಂದ ಬಡ ಜನರಿಗೆ ಉಪಯೋಗ ಆಗಿದೆ, ಮದುವೆಗೆ, ಆಸ್ಪತ್ರೆ ಬಿಲ್ಲು, ಶಾಲೆಯ ಶುಲ್ಕಕ್ಕೆ ಉಪಯೋಗವಾಗುತ್ತಿದೆ. ಮಹಿಳೆಯರಿಗೆ ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ. ಗೃಹಲಕ್ಷ್ಮೀ ಯೋಜನೆ ಮೂಲಕ ಪ್ರತಿ ತಿಂಗಳು ೨ ಸಾವಿರ ಹಣ ನೀಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳು ದುರುಪಯೋಗ ಆಗಿಲ್ಲ, ನಾವು ಕಣ್ಣು ಮುಚ್ಚಿಕೊಂಡು ಗ್ಯಾರಂಟಿ ಯೋಜನೆ ಜಾರಿ ಮಾಡಿಲ್ಲ. ಹೀಗಾಗೇ ಶಕ್ತಿ ಯೋಜನೆ ಜಾರಿ ಮಾಡುವ ವಿಚಾರವನ್ನ ನಾವೂ ಮಧ್ಯರಾತ್ರಿ ೨ ಗಂಟಗೆ ಪೈನಲ್ ಮಾಡಿದ್ದು ಅನ್ನೋ ಕುತೊಹಲಕಾರಿ ಅಂಶವನ್ನ ಗೃಹ ಸಚಿವ ಜಿ ಪರಮೇಶ್ವರ ಹೇಳಿದ್ದಾರೆ.
ಶಕ್ತಿ ಯೋಜನೆ ಮೂಲಕ ರಾಜ್ಯದ ಮಹಿಳೆಯರು ಎಲ್ಲೆಡೆ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಲಕ್ಷಾಂತರ ಮಹಿಳೆಯರ ಪ್ರಯಾಣಕ್ಕೆ ಶಕ್ತಿ ಯೋಜನೆ ಶಕ್ತಿ ತಂದಿದೆ. ಆದ್ರೆ ಶಕ್ತಿ ಯೋಜನೆ ಜಾರಿ ಮಾಡುವ ವೇಳೆ ನಾವೂ ಸಾಕಷ್ಟು ಚರ್ಚೆ ಮಾಡಿದ್ವೀ. ಶಕ್ತಿ ಯೋಜನೆಗೆ ಗ್ರೀನ್ ಸಿಗ್ನಲ್ ನೀಡುವಂತೆ ಎಐಸಿಸಿ ನಾಯಕರಿಗೆ ಮನವಿ ಮಾಡಿದ ವೇಳೆ ಅವರು ಸಾಕಷ್ಟು ಯೋಚನೆ ಮಾಡಿ ಗ್ರೀನ್ ಸಿಗ್ನಲ್ ನೀಡಿದ್ರು. ಆದ್ರೆ ಶಕ್ತಿ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಮಾತ್ರ ಮಧ್ಯರಾತ್ರಿ ೨ ಗಂಟೆಗೆ ಅನ್ನೋದು ವಿಶೇಷವಾಗಿದೆ. ಈ ಮೂಲಕ ಕಾಂಗ್ರೇಸ ಪಕ್ಷ ಬಡವರ ಏಳ್ಗೆಗಾಗಿ ಹಗಲಿರುಳು ದುಡಿಯುತ್ತಿದೆ ಅಂತಾ ಗೃಹ ಸಚಿವ ಜಿ ಪರಮೇಶ್ವರ ಹೇಳಿದ್ದಾರೆ.
ಬಿಜೆಪಿ ನಾಯಕರಿಗೆ ವಿಶೇಷ ವಿಮಾನ ವ್ಯವಸ್ಥೆ ಮಾಡ್ತೇವೆ- ಗೃಹ ಸಚಿವ ಪರಮೇಶ್ವರ..!
ರಾಜ್ಯದಲ್ಲಿ ಜಾರಿಯಾಗಿರುವ ಗ್ಯಾರಂಟಿ ಯೋಜನೆಗಳ ವಿಚಾರವನ್ನ ಬಿಜೆಪಿ ಸಾಕಷ್ಟು ಟೀಕೆ ಮಾಡುತ್ತಲೇ ಬಂದಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನ ಘೋಷಣೆ ಮಾಡಿ ಜಾರಿ ಮಾಡಿಲ್ಲ ಅಂತಾರೆ. ಗ್ಯಾರಂಟಿ ಯೋಜನೆಗಳನ್ನ ಘೋಷಿಸಿ ಅಧಿಕಾರಕ್ಕೆ ಬಂದಿದ್ದೇವೆ ಅಂತಿದ್ದಾರೆ. ಹೀಗಾಗೇ ನಾವೂ ಬಿಜೆಪಿ ನಾಯಕರಿಗೆ ಬಹಿರಂಗವಾಗಿ ಆಹ್ವಾನ ನೀಡಿದ್ದೇವೆ. ರಾಜ್ಯದಲ್ಲಿ ಜಾರಿಯಾಗಿರುವ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಹೇಗೆ ಲಾಭವಾಗುತ್ತಿದೆ ಅನ್ನೋದನ್ನ ತೋರಿಸಲು ನಾವೂ ಬಿಜೆಪಿ ನಾಯಕರಿಗೆ ವಿಶೇಷ ವಿಮಾನ ವ್ಯವಸ್ಥೆ ಮಾಡುತ್ತೇವೆ ಅಂತಾ ಆಹ್ವಾನ ಮಾಡಿದ್ದೆ ಅನ್ನೋ ಆಶ್ಚರ್ಯಕರ ವಿಚಾರವನ್ನ ಗೃಹ ಸಚಿವ ಜಿ ಪರಮೇಶ್ವರ ಹೇಳಿದ್ದಾರೆ. ಮಹರಾಷ್ಟ್ರ ಚುನಾವಣೆಯ ಪ್ರಚಾರ ವೇಳೆ ಪ್ರಧಾನಿ ನರೇಂದ್ರ ಮೋದಿ ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡಿದ್ರು. ಹೀಗಾಗಿ ನಾನು ಪ್ರಚಾರಕ್ಕೆ ಹೋದ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರಿಗೆ ವಿಶೇಷ ವಿಮಾನ ವ್ಯವಸ್ಥೆ ಮಾಡ್ತೇವಿ. ನಮ್ಮ ರಾಜ್ಯಕ್ಕೆ ಬಂದೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ನೋಡಲಿ ಎಂದು ಆಹ್ವಾನ ಮಾಡಿದ್ದೆ ಅನ್ನೋ ವಿಚಾರವನ್ನ ಗೃಹ ಸಚಿವರು ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸ್ಮರಿಸಿಕೊಂಡಿದ್ದಾರೆ.