ವಿವಾದಗಳಿಗೆ ಕೇರಾಫ್ ಅಡ್ರೆಸ್ ಆಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಎಪಿ ಸರ್ಕಾರ ಶಾಕ್ ನೀಡಿದೆ. ಟಾಲಿವುಡ್ ಸೆನ್ಸೇಷನಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿದೆ. ರಾಮ್ ಗೋಪಾಲ್ ವರ್ಮಾ ವಿರುದ್ಧ ದೂರು ಕೊಟ್ಟವರು ಯಾರು? ಅಸಲಿಗೆ ಏನಿದು ಕೇಸ್ ಗೊತ್ತಾ?
ರಾಮ್ ಗೋಪಲ್ ವರ್ಮಾ ವಿರುದ್ಧ ಕೇಸ್!
ರಾಮ್ ಗೋಪಾಲ್ ವರ್ಮಾ ವಿರುದ್ಧ ಟಿಡಿಪಿ ಮಂಡಲದ ಪ್ರಧಾನ ಕಾರ್ಯದರ್ಶಿ ರಾಮಲಿಂಗಂ ನೀಡಿ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಿತ್ರವೊಂದರ ಪ್ರಚಾರದ ಭಾಗವಾಗಿ ರಾಮ್ಗೋಪಾಲ್ ವರ್ಮಾ ಅವರು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಲೋಕೇಶ್ ಮತ್ತು ನಾರಾ ಬ್ರಾಹ್ಮಣಿ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳನ್ನು ಶೇರ್ ಮಾಡಿದ್ದರು ಎನ್ನಲಾಗ್ತಿದೆ.
ಇದನ್ನು ಓದಿ:ನನ್ನನ್ನು ಇನ್ಮುಂದೆ ಈ ರೀತಿ ಕರೀಬೇಡಿ: ಕಮಲ್ ಹಾಸನ್!
ಚಂದ್ರಬಾಬು ಕುರಿತು ನೆಗೆಟಿವ್ ಪೋಸ್ಟ್
ವೈಎಸ್ಪಿ ಸರ್ಕಾರಕ್ಕೆ ವೈಎಸ್ ಜಗನ್ಮೋಹನ್ ರೆಡ್ಡಿ ಬೆಂಬಲಕ್ಕಾಗಿ ಈ ಹಿಂದೆ ರಾಮ್ ಗೋಪಾಲ್ ವರ್ಮಾ ಪದೇ ಪದೇ ಚಂದ್ರಬಾಬು ಅವರನ್ನು ಗುರಿಯಾಗಿಸಿಕೊಂಡು ಪೋಸ್ಟ್ ಮಾಡಿದ್ದಾರೆ. ಅದೇ ವೇಳೆ ಆರ್ಜಿವಿ ಸಿನಿಮಾದಲ್ಲಿ ಚಂದ್ರಬಾಬು ಕುರಿತು ನೆಗೆಟಿವ್ ಆಗಿ ತೋರಿಸಲಾಯಿತು ಮತ್ತು ವ್ಯಕ್ತಿತ್ವ ನಿಂದನೆ ಮಾಡಿದ್ರು ಎಂದು ಟಿಡಿಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಆರೋಪ ಮಾಡಿದ್ರು.
ಸೋಷಿಯಲ್ ಮೀಡಿಯಾದಲ್ಲಿ ಆರ್ಜಿವಿ ಅವರು ಚಂದ್ರಬಾಬು ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ಗಳನ್ನು ಮಾಡಿದ್ದಾರೆ. ಇದೇ ವೇಳೆ ಚಂದ್ರಬಾಬು, ಪವನ್, ಲೋಕೇಶ್ ಅವರ ಮೇಲೆ ಅನುಚಿತವಾಗಿ ಪೋಸ್ಟ್ ಮಾಡಿದ ವೈಸಿಪಿ ಕಾರ್ಯಕರ್ತರನ್ನು ಈಗಾಗಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರಿಂದ ತನಿಖೆ
ಟಿಡಿಪಿ ಮುಖಂಡರ ದೂರಿನನ್ವಯ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು , ಮಡ್ಡಿಪಾಡು ತಾ.ಪಂ.ಮಂಡಳದ ಪ್ರಧಾನ ಕಾರ್ಯದರ್ಶಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ರಾಮ್ ಗೋಪಾಲ್ ವರ್ಮಾ ಟಾಲಿವುಡ್ನ ಖ್ಯಾತ ನಿರ್ದೇಶಕರಾಗಿದ್ದಾರೆ. ಸೆನ್ಸೇಷನಲ್ ಸಿನಿಮಾ ಮಾಡುವಾಗ ಆರ್ ಜಿವಿ ಸದಾ ವಿವಾದಗಳಿಂದ ಸದ್ದು ಮಾಡ್ತಾರೆ. ಅಲ್ಲದೇ ರಾಜಕೀಯ ಹಿನ್ನೆಲೆಯುಳ್ಳ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಎಪಿ ಚುನಾವಣೆ ಸಂದರ್ಭದಲ್ಲಿ ಆರ್ ಜಿವಿ ವ್ಯೂಹ ಎಂಬ ಸಿನಿಮಾ ಕೂಡ