ಪ್ರಧಾನಿ ಮೋದಿಯವರ ಕನಸನ್ನ ನಾವು ಈಡೇರಿಸಬೇಕಿದೆ ಅಂತ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ. ಮೈಸೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ದೇವೇಗೌಡರು, ಪ್ರಧಾನಿ ಮೋದಿಯವರು ಈ ಬಾರಿ 400 ಸ್ಥಾನಗಳನ್ನ ಗೆಲ್ಲಬೇಕೆಂಬ ಗುರಿ ಇಟ್ಟುಕೊಂಡಿದ್ದಾರೆ. ಈ ಗುರಿಯನ್ನ ನಾವು ಈಡೇರಿಸಿ, ಮೋದಿಯವರನ್ನ 3ನೇ ಬಾರಿಗೆ ಪ್ರಧಾನಿ ಆಗಿ ಮಾಡಬೇಕಿದೆ. ಇದಕ್ಕೆ ಕರ್ನಾಟಕದಿಂದ ನಾವು ಕನಿಷ್ಠ 24 ಸ್ಥಾನಗಳಲ್ಲಿ ಆದ್ರೂ ಗೆಲ್ಲಬೇಕಿದೆ ಎಂದು ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ. ಮೋದಿ 10 ವರ್ಷ ಯಶಸ್ವಿ ಆಗಿ ಆಡಳಿತ ನಡೆಸಿದ್ದಾರೆ. ಈ ದೇಶ ಉಳಿಯಬೇಕು ಎಂದರೆ ಮೋದಿ ಮತ್ತೆ ಪ್ರಧಾನಿ ಆಗಬೇಕು. ಬನ್ನಿ ದೇಶ ಉಳಿಸುವ ಕೆಲಸ ಮಾಡೋಣ ಅಂತ ಕರೆ ನೀಡಿದ್ರು. ಅಲ್ಲದೇ ಕಾಂಗ್ರೆಸ್ ಗ್ಯಾರಂಟಿ ಟೀಕಿಸಿದ ಮೋದಿ, ಇಂಡಿಯಾ ಮೈತ್ರಿ ಕೂಟದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ರು.