‘ನನ್ನ ಅಳಿಯ ಎಂಬ ಕಾರಣಕ್ಕೆ ಡಾ. ಸಿಎನ್ ಮಂಜುನಾಥ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಅಂತ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿದ ದೇವೇಗೌಡರು, ಆ ಕನಕಪುರದ ಅಣ್ಣ ತಮ್ಮ ದೌರ್ಜನ್ಯ ನಿಲ್ಲಿಸಲೇಬೇಕು ಎಂದು ಮಂಜುನಾಥ್ರನ್ನು ಕಣಕ್ಕಿಳಿಸಿದ್ದೇವೆ, ಅರ್ಥ ಮಾಡಿಕೊಳ್ಳಿ’ ಎಂದು ಸೂಕ್ಷ್ಮವಾಗಿ ತಿಳಿಸಿದ ಅವರು, ಡಿಕೆ ಸಹೋದರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.