ಲೋಕಸಭಾ ಚುಣಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರು ಮತಗಳನ್ನು ಸೆಳೆಯಲು ನಾನಾ ರೀತಿಯ ತಂತ್ರ ಮಾಡೋದು ಹೊಸದೆನಲ್ಲ. ಆದರೆ ಚುನಾವಣೆ ಸಮಯದಲ್ಲಿ ಚುನಾವಣೆ ನೀತಿ ಸಂಹಿತೆ ಇದೆ ಅನ್ನೋದನ್ನ ಮರೆಯಬಾರದಲ್ವಾ.? ಆದರೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒಕ್ಕಲಿಗ ಮತ ಸೆಳೆಯುವ ಪ್ಲಾನ್ ಮಾಡಿದ್ದಾರೆ ಅನ್ನಿಸುತ್ತೆ. ಆದರೆ ಅನುಮತಿ ಪಡೆಯದೆ ಅವರ ತೋಟದ ಮನೆಯಲ್ಲಿ ಬಾಡೂಟ ಆಯೋಜನೆ ಮಾಡಿದ್ದಾರೆ. ಹೊಸತೊಡಕು,ನೆಪದಲ್ಲಿ ರಾಮನಗರದ ಬಿಡದಿ ಮನೆಯಲ್ಲಿ ಬಾಡೂಟ ಆಯೋಜನೆ ಮಾಡಿ, ದೋಸ್ತಿ ನಾಯಕರಿಗೆ ಆಹ್ವಾನ ನೀಡಿದ್ರಂತೆ.
ವಿಚಾರ ತಿಳಿದ ಚುಣಾವಣಾ ಅಧಿಕಾರಿಗಳು ಹೆಚ್ ಡಿಕೆ ತೋಟದ ಮನೆಗೆ ದೌಡಾಯಿಸಿದ್ದಾರೆ. ಅಲ್ಲದೇ ಸ್ಥಳದಲ್ಲಿದ್ದ ಎಲ್ಲವನ್ನೂ ಜಪ್ತಿ ಮಾಡಲು ಪರಿಶೀಲನೆ ಮಾಡಿ ಮುಂದಾದಾಗ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕುಮಾರಸ್ವಾಮಿ ಹೊಸತೊಡಕು ಪಾಲಿಟಿಕ್ಸ್ಗೆ ವಿರೋಧ ವ್ಯಕ್ತಪಡಿಸಿಸುವ ಸ್ಥಳೀಯ ಕಾಂಗ್ರೆಸ್ ನಾಯಕರು,ಇದು ನೀತಿ ಸಂಹಿತೆ ಉಲ್ಲಂಘನೆ, ಹೆಚ್ ಡಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯಿಸಿದ್ದಾರೆ. ಸೋಲಿನ ಭಯದಲ್ಲಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮದ್ಯ, ಮಾಂಸದ ರುಚಿ ತೋರಿಸಿ ಮತ ಕೇಳಲು ಮುಂದಾಗಿವೆಯೇ? ಅಂತ ಪ್ರಶ್ನೆ ಮಾಡಿದೆ.