ರಾಜ್ಯದಲ್ಲಿ ಚಹಾ ಪ್ರಿಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಚಹಾ ಕುಡಿಯದಿದ್ದರೆ ದಿನವೇ ಶುರುವಾಗದಂತೆ ಭಾಸವಾಗುವವರು ಲಕ್ಷಾಂತರ ಮಂದಿ ಇದ್ದಾರೆ. ಆದರೆ, ಒಂದು ತಿಂಗಳು ಚಹಾವನ್ನು ಸಂಪೂರ್ಣವಾಗಿ ತ್ಯಜಿಸಿದರೆ ನಮ್ಮ ದೇಹದ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ಗೊತ್ತಾ? ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಲು ಚಹಾ ಪ್ರಿಯರು ಈ ಲೇಖನವನ್ನು ಓದಲೇಬೇಕು.
ಚಹಾ:
ಭಾರತೀಯರಿಗೆ ಚಹಾ ಎಂದರೆ ಅಪಾರ ಪ್ರೀತಿ. ಬೆಳಗ್ಗೆ ಎದ್ದ ತಕ್ಷಣ ಹಲ್ಲುಜ್ಜಿದ ನಂತರ ಒಂದು ಕಪ್ ಚಹಾ ಕುಡಿಯುವುದು ಹಲವರ ದಿನಚರಿಯ ಭಾಗವಾಗಿದೆ. ಚಹಾ ಕುಡಿದ ಕೂಡಲೇ ಒಂದು ಹೊಸ ಶಕ್ತಿ ಸಿಗುವಂತೆ ಭಾಸವಾಗುತ್ತದೆ, ಇದರಿಂದ ಇಡೀ ದಿನ ಆ್ಯಕ್ಟಿವ್ ಆಗಿರಲು ಸಾಧ್ಯವಾಗುತ್ತದೆ. ಆದರೆ, ಹಾಲಿನ ಬೆಲೆ ದಿನೇ ದಿನೇ ಏರುತ್ತಿದ್ದರೂ ಚಹಾ ಕುಡಿಯುವ ಅಭ್ಯಾಸವನ್ನು ಬಿಡಲು ಜನರಿಗೆ ಸಾಧ್ಯವಾಗುತ್ತಿಲ್ಲ. ದಿನಕ್ಕೆ ಒಂದು ಅಥವಾ ಎರಡು ಕಪ್ ಚಹಾ ಕುಡಿಯುವುದರಲ್ಲಿ ತೊಂದರೆ ಇಲ್ಲವಾದರೂ, ಅತಿಯಾಗಿ ಕುಡಿಯುವುದು ದೇಹಕ್ಕೆ ಹಾನಿಕಾರಕವಾಗಬಹುದು.
ಒಂದು ತಿಂಗಳು ಚಹಾ ತ್ಯಜಿಸಿದರೆ ಏನಾಗುತ್ತದೆ?
ಚಹಾವನ್ನು ಸಂಪೂರ್ಣವಾಗಿ ಬಿಟ್ಟರೆ ದೇಹದ ಮೇಲೆ ಆಗುವ ಪರಿಣಾಮಗಳ ಬಗ್ಗೆ ತಿಳಿಯೋಣ:
- ಕೆಫೀನ್ ಕಡಿಮೆಯಾಗುತ್ತದೆ: ಚಹಾದಲ್ಲಿ ಇರುವ ಕೆಫೀನ್ ಸೇವನೆ ಕಡಿಮೆಯಾದಾಗ, ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ. ಇದರಿಂದ ಆಳವಾದ ಮತ್ತು ಗಾಢವಾದ ನಿದ್ರೆ ಸಿಗುತ್ತದೆ.
- ನಿರ್ಜಲೀಕರಣ ತಪ್ಪುತ್ತದೆ: ಚಹಾದ ಮೂತ್ರವರ್ಧಕ ಗುಣದಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಚಹಾ ಬಿಟ್ಟರೆ ನಿರ್ಜಲೀಕರಣದ ಸಮಸ್ಯೆಗಳು ಕಡಿಮೆಯಾಗುತ್ತವೆ.
- ಜೀರ್ಣಕ್ರಿಯೆ ಸುಧಾರಿಸುತ್ತದೆ: ಚಹಾವನ್ನು ತ್ಯಜಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳು ಕಡಿಮೆಯಾಗುತ್ತವೆ, ಜೊತೆಗೆ ಸ್ವತಂತ್ರ ರಾಡಿಕಲ್‌ಗಳಿಂದ ಜೀವಕೋಶಗಳಿಗೆ ಆಗುವ ಹಾನಿ ತಗ್ಗುತ್ತದೆ.
- ಕ್ಯಾನ್ಸರ್ ಅಪಾಯ ತಗ್ಗುತ್ತದೆ: ಚಹಾದ ಅತಿಯಾದ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಕಡಿಮೆಯಾಗಿ, ಕೆಲವು ರೀತಿಯ ಕ್ಯಾನ್ಸರ್‌ಗಳ ಅಪಾಯವೂ ತಗ್ಗುತ್ತದೆ.
- ಹೊಸ ಆರೋಗ್ಯ ಅಭ್ಯಾಸ: ಚಹಾ ಬಿಟ್ಟರೆ ದೇಹಕ್ಕೆ ಒಳ್ಳೆಯ ಶಕ್ತಿ ನೀಡುವ ಪರ್ಯಾಯ ಪಾನೀಯಗಳತ್ತ ಗಮನ ಹರಿಯುತ್ತದೆ.
ಚಹಾ ಬಿಡುವುದು ಒಳ್ಳೆಯದೇ?
ಚಹಾವನ್ನು ಸಂಪೂರ್ಣವಾಗಿ ತ್ಯಜಿಸುವುದು ಎಲ್ಲರಿಗೂ ಅಗತ್ಯವಿಲ್ಲ. ದಿನಕ್ಕೆ ಒಂದು ಅಥವಾ ಎರಡು ಕಫ್ ಚಹಾ ಕುಡಿಯುವುದರಿಂದ ದೊಡ್ಡ ಸಮಸ್ಯೆ ಇಲ್ಲ. ಆದರೆ, ಅತಿಯಾಗಿ ಕುಡಿಯುವ ಅಭ್ಯಾಸವಿದ್ದರೆ, ಒಂದು ತಿಂಗಳು ಚಹಾ ಬಿಟ್ಟು ಪರೀಕ್ಷಿಸಿ ನೋಡಿ. ಇದರಿಂದ ದೇಹದಲ್ಲಿ ಉಂಟಾಗುವ ಸಕಾರಾತ್ಮಕ ಬದಲಾವಣೆಗಳು ನಿಮಗೆ ಆಶ್ಚರ್ಯ ತರಬಹುದು. ಚಹಾ ಪ್ರಿಯರೇ, ಈ ಲೇಖನ ಓದಿದ ನಂತರ ನಿಮ್ಮ ಚಹಾ ಅಭ್ಯಾಸದ ಬಗ್ಗೆ ಒಮ್ಮೆ ಯೋಚಿಸಿ.