ಬೆಳಗಾವಿಯಲ್ಲಿ ಲವ್ ಜಿಹಾದ್ನ ಮತ್ತೊಂದು ಕರಾಳ ಮುಖ ಅನಾವರಣ ಆಗಿದೆ.ಹಿಂದೂ ಯುವತಿಯರಷ್ಟೇ ಅಲ್ಲ ವಿವಾಹಿತೆಯರನ್ನೂ ಲವ್ ಜಿಹಾದ್ ಜಾಲಕ್ಕೆ ತಳ್ಳಲು ಯತ್ನಿಸಲಾಗಿದೆ. ಎರಡು ಮಕ್ಕಳ ತಾಯಿಯನ್ನೇ ಮತಾಂತರಕ್ಕೆ ಪೀಡಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ಪ್ರಕರಣ ನಡೆದಿದ್ದು, ಸಂತ್ರಸ್ತ ಮಹಿಳೆಯ ಪತಿ ಮುನವಳ್ಳಿ ಪಟ್ಟಣದಲ್ಲಿ ಕಿರಾಣಿ ಅಂಗಡಿ ಹೊಂದಿದ್ದರು. ಸಂತ್ರಸ್ತ ಮಹಿಳೆಯು ಪತಿ ಇಲ್ಲದಾಗ ಆಗಾಗ ಕಿರಾಣಿ ಅಂಗಡಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಹೀಗೆ ಅಂಗಡಿಯಲ್ಲಿ ಕುಳಿತಿದ್ದ ಮಹಿಳೆಯ ಸಂಪರ್ಕ ಸಾಧಿಸಲು ಯತ್ನಿಸಿದ್ದ ಆರೀಫ್ ಬೇಪಾರಿ ಎಂಬ ವ್ಯಕ್ತಿ. ಈತನ ಅಸಭ್ಯ ವರ್ತನೆ ತೋರುತ್ತಿದ್ದ ಆರೀಫ್ ಬೇಪಾರಿ ವಿರುದ್ಧ ಸಿಡಿಮಿಡಿಗೊಂಡಿದ್ದ ಮಹಿಳೆ. ಬಳಿಕ ಮಹಿಳೆಯ ಮೊಬೈಲ್ ನಂಬರ್ ಪಡೆದು ಇಲ್ಲಸಲ್ಲದ ಆಮೀಷ ಒಡ್ಡಿದ್ದ ಆರೀಫ್.
ನೆರೆಯವರೆಂದು ಪರಿಚಯ ಮಾಡಿಕೊಂಡು ಮಹಿಳೆಯೊಂದಿಗೆ ಸಲುಗೆ ಬೆಳಸಿಕೊಂಡಿದ್ದ. ಜಾಬ್ ಕೊಡಿಸುವುದಾಗಿ ನಂಬಿಸಿ ಮಹಿಳೆಯನ್ನು ಬೆಳಗಾವಿಗೂ ಕರೆತಂದು ನಿರಂತರ ಲೈಂಗಿಕ ದೌರ್ಜನ್ಯವನ್ನೂ ಎಸಗಿದ್ದ. ನಂತರ ಬೆಳಗಾವಿ ಬಂದ ಬಳಿಕ ಆರೀಫ್ಗೆ ಮತ್ತೇ ಐವರು ದುಷ್ಕರ್ಮಿಗಳು ಸಾಥ್ ನೀಡಿದ್ದಾರೆ.ಬಲೈಂಗಿಕ ದೌರ್ಜನ್ಯ ಫೋಟೋಗಳನ್ನು ಸೆರೆಹಿಡಿಟ್ಟುಕೊಂಡಿದ್ದ ಕಿಡಿಗೇಡಿಗಳು. ಲೈಂಗಿಕ ದೌರ್ಜನ್ಯದ ಜೊತೆಗೆ ಮಹಿಳೆಗೆ ಮತಾಂತರಗೊಳ್ಳಬೇಕೆಂದು ಮಹಿಳೆಗೆ ಪೀಡಿಸಿದ್ದಾರೆ. ಆಕೆಯ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ದುಷ್ಕರ್ಮಿಗಳಿಂದ ವಿವಾಹಿತೆಗೆ ನಿರಂತರವಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ.
ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಳ್ಳದಿದ್ದರೆ ಫೋಟೊ ವೈರಲ್ ಮಾಡುವ ಬೆದರಿಕೆ ಹಾಕಿದ್ದಾರೆ. ಹಣೆಗೆ ಕುಂಕುಮ ಹಚ್ಚುವುದನ್ನು ನಿಲ್ಲಿಸಬೇಕು, ಹಿಂದೂ ಸಂಪ್ರದಾಯ ಬಿಡಬೇಕು ಎಂದು ಬೆದರಿಕೆ ಹಾಕಿದ್ದು, ನಿತ್ಯ ಬುರ್ಖಾ ಧರಿಸುವ ಜೊತೆಗೆ ಐದು ಸಲ ನಮಾಜ್ ಮಾಡಬೇಕು ಅಂತಳು ತಾಕೀತು ಮಾಡಿದ್ದಾರೆ. ಅಲ್ಲದೇ ಒತ್ತಾಯಪೂರ್ವಕವಾಗಿ ಮಹಿಳೆಗೆ ಬುರ್ಖಾ ಧಾರಣೆ ಮಾಡಿರುವ ದುಷ್ಕರ್ಮಿಗಳು. ಈಗ ದುರುಳರ ಜಾಲದಿಂದ ತಪ್ಪಿಸಿಕೊಂಡಿರುವ ಮಹಿಳೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮತಾಂತರಕ್ಕೆ ಯತ್ನಿಸಿದ ಏಳು ಜನ ಆರೋಪಿಗಳ ವಿರುದ್ಧ ದೂರು ನೀಡಿದ್ದು, ಬೆಳಗಾವಿ ಜಿಲ್ಲೆಯ ಸವದತ್ತಿ ಪೊಲೀಸ್ ಠಾಣೆಯಲ್ಲಿ ಆರು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮುನವಳ್ಳಿ ಪಟ್ಟಣದ ಆರೀಫ್ ಬೇಪಾರಿ, ಆದೀಲ್, ಶೋಯಲ್, ಮುಕ್ತಮ್, ಉಮರ್ ಕರೆವ್ವ ಕಟ್ಟಿಮನಿ ಹಾಗೂ ಕೌಸರ್ ವಿರುದ್ಧ ದೂರು ದಾಖಲಾಗಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯ ಕೊಡಿಸುವಂತೆ ಸಂತ್ರಸ್ತ ಮಹಿಳೆ ಆಗ್ರಹಿಸಿದ್ದಾರೆ.