ಮಧ್ಯಪ್ರದೇಶ : ಸ್ವಂತ ಅಜ್ಜಿಯೇ ತಮ್ಮ 4 ದಿನದ ಮೊಮ್ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿರು ಭಯಾನಕ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ. ಪ್ರೇಮಲತಾ ಎಂಬ ವೃದ್ಧೆ ಕೊಲೆ ಮಾಡಿದ್ದು, ಈ ಕಟುಕಿ ಅಜ್ಜಿ ಗಂಡು ಮಗು ಅಂದ್ರೆ ಮೊಮ್ಮಗನ ನಿರೀಕ್ಷೆಯಲ್ಲಿದ್ದಳಂತೆ, ಆದರೆ ಮೊಮ್ಮಗಳು ದೈಹಿಕ ಅಂಗವೈಕಲ್ಯದಿಂದ ಜನಿಸಿದ್ದರಿಂದ, ಕುಪಿತಗೊಂಡಿದ್ದಾಳೆ. ಹೀಗಾಗಿ ಆಸ್ಪತ್ರೆಯ ಬೆಡ್ ಮೇಲೆ ಮಗು ಮಲಗಿದ್ದಾಗ ಯಾರೂ ಇಲ್ಲದ ಸಮಯ ನೋಡಿಕೊಂಡು ಮೊಮ್ಮಗಳನ್ನು ಕತ್ತು ಹಿಸುಕಿ ಬರ್ಬರವಾಗಿ ಹತ್ಯೆಗೈದಿದ್ದಾಳೆ.
ಕೊಲೆ ಮಾಡಿದ ನಂತರ ಮಗು ಸಹಜವಾಗಿಯೇ ಸಾವನ್ನಪ್ಪಿದೆ ಎನ್ನುವಂತೆ ಬಿಂಬಿಸಲು ಪ್ರಯತ್ನ ಮಾಡಿದ್ದಾಳೆ ಈ ಖತರ್ನಾಕ್ ಅಜ್ಜಿ. ಇದಕ್ಕೆ ವೃದ್ಧೆಯ ಮಗನು ಕೂಡ ಸಹಾಯ ಮಾಡಿದ್ದ ಎಂಬ ಅನುಮಾನವೂ ಮೂಡಿದೆ. ಆದರೆ ಮಗು ಸಾವನ್ನಪ್ಪಿದ ಬಳಿಕ ತಾಯಿಯ ಒತ್ತಾಯದ ಮೇರೆಗೆ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯಕ್ಕೆ ಆರೋಪಿ ಅಜ್ಜಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ. ಇನ್ನು ಅತ್ತೆಗೆ ಕಠಿಣ ಶಿಕ್ಷೆ ನೀಡಬೇಕೆಂದು ಸೊಸೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.