ಹುಬ್ಬಳ್ಳಿಯ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಕೊಲೆಗಾರ ಫಯಾಜ್ಗೆ ಗಲ್ಲು ಶಿಕ್ಷೆ ನೀಡಬೇಕೆಂಬ ಒತ್ತಾಯದ ಮಧ್ಯೆ, ನಿತ್ಯವೂ ರಾಜ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈಗ ಕೊಲೆಯಾದ ನೇಹಾಳ ಪೋಸ್ಟ್ ಮಾರ್ಟಂ ರಿಪೋರ್ಟ್ ಬಿಡುಗಡೆ ಆಗಿದ್ದು, ವರದಿಯಲ್ಲಿ ಫಯಾಜ್ನ ರಾಕ್ಷಸಿ ಕೃತ್ಯ ಬಯಲಾಗಿದ್ದು, ಬೆಚ್ಚಿಬೀಳಿಸುವಂತಿದೆ. ಫಯಾಜ್, ನೇಹಾಳನ್ನು 11 ಅಲ್ಲ ಬದಲಾಗಿ 14 ಬಾರಿ ಚುಚ್ಚಿ ಕೊಂದಿದ್ದಾನೆ ಅಂತ ತಿಳಿದು ಬಂದಿದೆ.
ನೇಹಾ ಹಿರೇಮಠ ದೇಹದ ಮೇಲೆ 14 ಗಾಯಗಳ ಗುರುತು ಪತ್ತೆಯಾಗಿದ್ದು, ಹೃದಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಕುತ್ತಿಗೆಗೆ ಹಲವು ಬಾರಿ ಇರಿದ ಕಾರಣ ರಕ್ತನಾಳ ತುಂಡಾಗಿದೆ, ಹೀಗಾಗಿ ವಿಪರೀತ ರಕ್ತಸ್ರಾವವಾಗಿದೆ ಎಂದು ವರದಿಯಲ್ಲಿ ಉಲ್ಲೇಖ ಆಗಿದೆ. ಹೀಗಾಗಿ ರಕ್ತಸ್ರಾವದಿಂದಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ.