ಈಗಿರುವ ಶಾಖವನ್ನೇ ತಾಳಲಾರದೆ ಜನರು ಬಳಲಿ ಬೆಂಡಾಗಿದ್ದಾರೆ. ಈ ಮಧ್ಯೆ ಹವಾಮಾನ ಇಲಾಖೆ ಜನರಿಗೆ ಮತ್ತೊಂದು ಶಾಖದ ಶಾಕ್ ನೀಡಿದೆ. ಭಾರತೀಯ ಹವಾಮಾನ ಇಲಾಖೆ ಹೀಟ್ ವೇವ್/ಉಷ್ಣಾ ಹವೆಸಂಬಂಧ ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಅಲರ್ಟ್ ಘೋಷಿಸಿದೆ.ಭಾರತದ ಪೂರ್ವ ಹಾಗೂ ದಕ್ಷಿಣ ಭಾಗಗಳಲ್ಲಿಹೀಟ್ ವೇವ್ಇನ್ನೂ ಹೆಚ್ಚಾಗಲಿದೆ ಎಂದು ಐಎಂಡಿ ಹೇಳಿದೆ. ಮುಂದಿನ 5 ದಿನ ಇದೇ ಪರಿಸ್ಥಿತಿ ಮುಂದುವರೆಯಲಿದ್ದು, ಕರಾವಳಿ ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ, ಕರ್ನಾಟಕ, ಗೋವಾ, ಕೇರಳ, ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಬಿಹಾರ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ, ಹೆಚ್ಚಿನ ಹ್ಯುಮಿಡಿಟಿ ಮಟ್ಟಗಳು ಹೆಚ್ಚಾಗಲಿದೆ ಎಂದು ಐಎಂಡಿ ಹೇಳಿದೆ.
ಹವಾಮಾನ ಕೇಂದ್ರದಲ್ಲಿ ತಾಪಮಾನ 40 ಡಿಗ್ರಿ ಸೆಲ್ಷಿಯಸ್ ತಲುಪಿದಾಗ ಆಗ ಅಧಿಕೃತವಾಗಿ ಹೀಟ್ ವೇವ್ಎಂದು ಪರಿಗಣಿಸಲಾಗುತ್ತದೆ. ಕರಾವಳಿ ಪ್ರದೇಶಗಳಲ್ಲಿ 37 ಡಿಗ್ರಿ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ 30 ಡಿಗ್ರಿ ಸೆಲ್ಷಿಯಸ್ ತಲುಪಿದರೆ ಹೀಟ್ ವೇವ್ಎಂದು ಪರಿಗಣಿಸಲಾಗತ್ತೆ.ಸಾಮಾನ್ಯವಾಗಿ ದಾಖಲಾಗುವುದಕ್ಕಿಂತ 4.5 notches ಹೆಚ್ಚಳವಾದರೆ ಹೀಟ್ ವೇವ್ಎಂದೂ 6.4 notches ಹೆಚ್ಚಳವಾದರೆ ಅದನ್ನು ತೀವ್ರ ಉಷ್ಣಹವೆ ಎಂದು ಪರಿಗಣಿಸಲಾಗುತ್ತದೆ.