ಭಾರತದ ಜೊತೆ ಅತಿಹೆಚ್ಚು ವ್ಯಾಪಾರ ವಹಿವಾಟು ನಡೆಸುವ ದೇಶಗಳ ಪೈಕಿ ಚೀನಾ ಮೊದಲ ಸ್ಥಾನವನ್ನ ಅಲಂಕರಿಸಿದೆ. 2023-24ರ ಹಣಕಾಸು ವರ್ಷದಲ್ಲಿ ಭಾರತ ಮತ್ತು ಚೀನಾ ಮಧ್ಯೆ ದ್ವಿಪಕ್ಷೀಯ ವ್ಯಾಪಾರ ಪ್ರಮಾಣ 118.4 ಬಿಲಿಯನ್ ಡಾಲರ್ಗೆ ಏರಿದೆ.
ಈ ವೇಳೆ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಟ್ರೇಡಿಂಗ್ 118.3 ಬಿಲಿಯನ್ ಡಾಲರ್ಗೆ ಇಳಿದಿರುವುದು ಬೆಳಕಿಗೆ ಬಂದಿದೆ . ಇದಕ್ಕೂ ಹಿಂದಿನ ವರ್ಷಗಳಲ್ಲಿ, ಅಂದರೆ 2021-22 ಮತ್ತು 2022-23ರಲ್ಲಿ ಭಾರತಕ್ಕೆ ಅಮೆರಿಕವೇ ಅಗ್ರಮಾನ್ಯ ಟ್ರೇಡಿಂಗ್ ಪಾರ್ಟ್ನರ್ ಆಗಿತ್ತು.ಚೀನಾದಿಂದ ಭಾರತದ ರಫ್ತು ಗಣನೀಯವಾಗಿ ಹೆಚ್ಚಿದೆ, 2023-24ರ ಹಣಕಾಸು ವರ್ಷದಲ್ಲಿ ಭಾರತದಿಂದ ಚೀನಾದ ಆದ ರಫ್ತು ಶೇ. 8.7ರಷ್ಟು ಹೆಚ್ಚಾಗಿ 16.67 ಬಿಲಿಯನ್ ಡಾಲರ್ ತಲುಪಿದೆ. ಚೀನಾದಿಂದ ಭಾರತ ಮಾಡಿಕೊಂಡ ಆಮದು ಬರೋಬ್ಬರಿ 101.3 ಬಿಲಿಯನ್ ಡಾಲರ್ ತಲುಪಿದೆ.