ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನದಿಂದ ಮಾಲ್ಡೀವ್ಸ್ ಸಾಕಷ್ಟು ಆರ್ಥಿಕ ಬಿಕ್ಕಟನ್ನ ಅನುಭವಿಸಿತ್ತು , ಆದರೆ ಚೀನಾ ಯೋಜನೆ, ದುಡ್ಡಿನ ಮುಲಾಜಿನಿಂದಾಗಿ ಮಾಲ್ಡೀವ್ಸ್ನಲ್ಲಿರುವ ಭಾರತದ ಸೈನಿಕರನ್ನುಇತ್ತೀಚಿಗಷ್ಟೇ ವಾಪಸ್ ಕಳುಹಿಸಲಾಗಿದೆ. ಇದರ ಬೆನ್ನಲ್ಲೇ, “ಭಾರತವು ಮಾಲ್ಡೀವ್ಸ್ಗೆ ನೀಡಿರುವ ಮೂರು ಯುದ್ಧವಿಮಾನಗಳನ್ನು ನಿರ್ವಹಿಸುವ ಪೈಲಟ್ಗಳೇ ನಮ್ಮಲ್ಲಿಲ್ಲ” ಎಂಬುದಾಗಿ ಮಾಲ್ಡೀವ್ಸ್ ತಿಳಿಸಿದೆ. ಇದು ಮಾಲ್ಡೀವ್ಸ್ ಸೇನೆಯ ಅದಕ್ಷತೆಗೆ ನಿದರ್ಶನ ಎಂದು ಹೇಳಲಾಗುತ್ತಿದೆ.
ಮಾಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಘಸ್ಸನ್ ಮೌಮೂನ್, “ಭಾರತ ನೀಡಿದ ಮೂರು ವಿಮಾನಗಳನ್ನು ಹಾರಿಸುವ ಕೌಶಲವು ನಮ್ಮ ಪೈಲಟ್ಗಳಿಗೆ ಇಲ್ಲ. ಅಂತಹ ಪರವಾನಗಿ ಹೊಂದಿರುವ ಪೈಲಟ್ಗಳು ಮಾಲ್ಡೀವ್ಸ್ ಸೇನೆಯಲ್ಲಿ ಇಲ್ಲ” ಎಂದು ಹೇಳಿದ್ದಾರೆ. ಇದುವರೆಗೆ ಮಾಲ್ಡೀವ್ಸ್ನಲ್ಲಿದ್ದ ಭಾರತದ ಯೋಧರು ವಿಮಾನಗಳನ್ನು ನಿರ್ವಹಿಸುತ್ತಿದ್ದರು. ಭಾರತವು ಅವುಗಳನ್ನು ದೇಣಿಗೆ ನೀಡಿದ ಕಾರಣ ಯುದ್ಧವಿಮಾನಗಳನ್ನು ಅಲ್ಲಿಯೇ ಬಿಟ್ಟಿದ್ದಾರೆ. ಆದರೆ, ಇವುಗಳನ್ನು ನಿಭಾಯಿಸುವ ಕೌಶಲವೂ ಮಾಲ್ಡೀವ್ಸ್ ವಾಯುಪಡೆ ಪೈಲಟ್ಗಳಿಗೆ ಇಲ್ಲ ಎಂಬುದು ಬಯಲಾಗಿದೆ.