ಮದುವೆ ಅಂದರೆ ಅದೊಂದು ಸಂಭ್ರಮ..ಸಡಗರ..ಜೊತೆ ವಿವಿಧ ಶಾಸ್ತ್ರ..ಸಂಪ್ರದಾಯಗಳ ಸಮಾಗಮ. ಆದರೆ ಇದೇ ಶಾಸ್ತ್ರವೂ ಮದುವೆಯ ಬಂಧಕ್ಕೇ ಕಂಟಕವಾದ್ರೆ ಏನ್ಮಾಡೋದು.? ಹೌದು ಇಲ್ಲೊಬ್ಬ ಭೂಪ ಕನ್ಯಾದಾನ ಮಾಡಿಲ್ಲ ಅಂತ ಕೋರ್ಟ್ ಮೆಟ್ಟಿಲೇರಿದ್ದು, ಅಲಹಾಬಾದ್ ಹೈಕೋರ್ಟ್ಗೆ ದಾವೆ ಹೂಡಿರುವ ಘಟನೆಯೂ ನಡೆದಿದೆ. ಹೌದು ವಿವಾಹದ ವೇಳೆ ಅತ್ತೆ ಮಾವ ಕನ್ಯಾದಾನ ಶಾಸ್ತ್ರ ಮಾಡಿಲ್ಲ ಅಂತ ಅಳಿಯ ಇದೀಗ ಕೋರ್ಟ್ ಮೆಟ್ಟಿಲೇರಿರುವ ಪ್ರಸಂಗ ನಡೆದಿದೆ. ಹಿಂದೂ ಸಂಪ್ರದಾಯದಲ್ಲಿ ಮದುವೆಯನ್ನ ಭರ್ಜರಿಯಾಗಿ ಆಚರಿಸಲಾಗುತ್ತೆ. ನಿಶ್ಚಿತಾರ್ಥದಿಂದ ಹಿಡಿದು ಮದುವೆಯವರಿಗೂ ನಾನಾ ವಿಶೇಷ ಪದ್ಧತಿಯನ್ನ ಕೈಗೊಳ್ಳುತಾರೆ.
ಆದರೆ ಇಲ್ಲೊಂದು ಅಪರೂಪದ ಪ್ರಸಂಗ ನಡೆದಿದೆ. ಮದುವೆಯ ವೇಳೆ ಅತ್ತೆ ಮಾವ ಕನ್ಯಾದಾನ ಶಾಸ್ತ್ರ ಮಾಡಿಲ್ಲ, ಇನ್ನು ನಮ್ಮ ಸಂಪ್ರದಾಯದಂತೆ ಮಾಡುವೆ ಸಂಪೂರ್ಣವಾಗಿ ನೆರವೇರಿಸಿಲ್ಲ. ಹೀಗಾಗಿ ಅತ್ತೆ ಮಾವನನ್ನ ಕರೆಸಿ ವಿಚಾರಿಸಬೇಕೆಂದು ಅಳಿಯ ಅಶುತೋಷ್ ಯಾದವ್ ಕೋರ್ಟ್ ಮೊರೆ ಹೋಗಿದ್ದ. ಆದರೆ ಕೋರ್ಟ್ ಹಿಂದೂ ವಿವಾಹ ಕಾಯ್ದೆಯ ಅನುಸಾರ ಸಪ್ತಪದಿ ತುಳಿಯುವುದು ಕಡ್ಡಾಯ, ಆದರೆ ಕನ್ಯಾದಾನ ಶಾಸ್ತ್ರ ಮದುವೆಯನ್ನ ನಿರ್ಧರಿಸುವುದಿಲ್ಲ ಎಂದು ನ್ಯಾ.ಸುಭಾಷ್ ವಿದ್ಯಾರ್ಥಿ ನೇತೃತ್ವದ ಪೀಠ ಹೇಳಿದೆ. ಅಲ್ಲದೇ ಅಳಿಯ ಉಲ್ಲೇಖಿಸಿದ ಅರ್ಜಿಯಲ್ಲಿ ಅತ್ತೆ, ಮಾವರಿಗೆ ಸಮನ್ಸ್ ನೀಡಲು ಕೋರ್ಟ್ ನಿರಾಕರಿಸಿ, ಅರ್ಜಿ ವಜಾಗೊಳಿಸಿದೆ.