ಹೊಸದಿಲ್ಲಿ: ದೇಶದ ಭದ್ರತೆಯಲ್ಲಿ ಗೇಮ್ ಚೇಂಜರ್ ಎನಿಸಲಿರುವ ದೂರಗಾಮಿ ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗದಲ್ಲಿ ಭಾರತ ಯಶಸ್ವಿಯಾಗಿದ್ದು,ರಕ್ಷಣಾ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಲಿದೆ.
ಶಬ್ದದ ವೇಗಕ್ಕಿಂತಲೂ ಐದು ಪಟ್ಟು ವೇಗದಲ್ಲಿ ಮುನ್ನುಗ್ಗುವ ಈ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗದ ಮೂಲಕ ಇಂಥ ಸಂಕೀರ್ಣ ಸೇನಾ ತಂತ್ರಜ್ಞಾನವುಳ್ಳ ಅಮೆರಿಕ, ರಷ್ಯಾ, ಚೀನಾದಂಥ ಎಲೈಟ್ ದೇಶಗಳ ಗ್ರೂಪ್ಗೆ ಭಾರತ ಸೇರ್ಪಡೆಯಾಗಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ದೇಶೀಯವಾಗಿ ನಿರ್ಮಿಸಿದ 1500 ಕಿ.ಮೀ ಗುರಿ ಬೇದಿಸಬಲ್ಲ ಹೈಪರ್ಸಾನಿಕ್ ಕ್ಷೀಪಣಿಯನ್ನು ಒಡಿಶಾದ ಅಬ್ದುಲ್ ಕಲಾಂ ದ್ವೀಪದಲ್ಲಿ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಡಿಆರ್ ಡಿಬಿ ವಿಜ್ಞಾನಿಗಳು ಹಾಗೂ ಸೇನಾಧಿಕಾರಿಗಳುಸಾಕ್ಷಿಯಾಗಿದ್ದರು. ಈ ಪ್ರಯೋಗವು ನೆರೆಯ ಚೀನಾ ಹಾಗೂ ಪಾಕಿಸ್ತಾನದಲ್ಲಿ ನಡುಕ ಹುಟ್ಟಿಸಿದೆ. ಪೈಪರ್ಸಾನಿಕ್ ಕ್ಷಿಪಣಿ ಪರೀಕ್ಷೆಯು ಭಾರತದ ಸುಧಾರಿತ ಸೇನಾ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದ್ದು, ಮುಂದಿನ ದಿನಗಳಲ್ಲಿ ಸೇನಾ ಬತ್ತಳಿಕೆಗೆ ಹೊಸ ಅಸ್ತ್ರ ಸೇರ್ಪಡೆಯಾಗಲಿದೆ. . ಡಿಆರ್ಡಿಒ, ಇತರ ಕೈಗಾರಿಕಾ ಪಾಲುದಾರರ ಸಂಸ್ಥೆಗಳ ಜತೆಗೂಡಿ ಹೈದರಾಬಾದ್ ನಲ್ಲಿರುವ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಮಿಸೈಲ್ ಕಾಂಪ್ಲೆಕ್ಸ್ನಲ್ಲಿ ಇದನ್ನು ಅಭಿವೃದ್ಧಿಪಡಿಸಿದೆ.
ಏನಿದು ಹೈಪರ್ಸಾನಿಕ್ ಮಿಸೈಲ್?
ಶಬ್ದದ ವೇಗಕ್ಕಿಂತಲೂ ಐದು ಪಟ್ಟು ವೇಗವಾಗಿ ಮುನ್ನುಗ್ಗುವ (ಮ್ಯಾಚ್ -5 ಅಂತಲೂ ಕರೆಯಲಾಗುತ್ತದೆ) ಕ್ಷಿಪಣಿಗೆ ಹೈಪರ್ ಸಾನಿಕ್ ಎಂದು ಕರೆಯಲಾಗು ತ್ತದೆ. ಪ್ರತಿ ಸೆಕೆಂಡ್ ಮೈಲು ದೂರ ಕ್ರಮಿಸುವಷ್ಟು ಶಕ್ತಿಶಾಲಿಯಾಗಿರುತ್ತದೆ. ಸಾಮಾನ್ಯವಾಗಿ ಇದನ್ನು ರಾಕೆಟ್ ಬಳಸಿ ಉಡಾವಣೆಗೊಳಿಸಲಾಗುತ್ತದೆ. ನಿರ್ದಿಷ್ಟ ಗುರಿ ತಲುಪಿದ ನಂತರ, ಮುಂದಿನ ಚಲನೆಯಲ್ಲಿ ಶಬ್ದಕ್ಕಿಂತಲೂ ವೇಗದಲ್ಲಿ ಸಾಗುತ್ತದೆ. ಒಡಿಶಾ ಕರಾವಳಿಯಲ್ಲಿ ಡಿಆರ್ ಡಿಒ ಕ್ಷಿಪಣಿಯನ್ನು ಪ್ರಯೋಗಿಸಿದ ಬಳಿಕ ವಿವಿಧ ಕಡೆಗಳಲ್ಲಿ ನಿಯೋಜಿಸಲಾಗಿದ್ದ ಸಿಸ್ಟಮ್ ಗಳಿಂದ ಅದನ್ನು ಟ್ಯಾಕ್ ಮಾಡಲಾಗಿದೆ. ಹಾರಾಟದ ದತ್ತಾಂಶಗಳನ್ನು ಡೌನ್ ರೇಂಜ್ ಶಿಪ್ ಸ್ಟೇಷನ್ ಗಳ ಮೂಲಕ ಪೂರ್ವಯೋಜನೆಯಂತೆಯೇ ವಿವಿಧ ಸಂಗ್ರಹಿಸಲಾಗಿದ್ದು, ನಿಖರತೆ ಮತ್ತು ಚಲನೆಗಳು ಯಶಸ್ವಿಯಾಗಿವೆ.