ಚಂಢೀಗಢ: ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಹಂತಕನ ಪುತ್ರ ಈಗ ಲೋಕಸಭಾ ಅಖಾಡಕ್ಕೆ ಧುಮುಕ್ಕಿದ್ದಾನೆ. ಪಂಜಾಬ್ನ ಫರೀಧ್ಕೋಟ್ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸರಬ್ಜಿತ್ ಸಿಂಗ್ ಖಾಲ್ಸಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ ವ್ಯಕ್ತಿ. ಇಂದಿರಾ ಹಂತಕರಲ್ಲಿ ಒಬ್ಬನಾದ ಬಿಯಾತ್ ಸಿಂಗ್ ಪುತ್ರ ಸರಬ್ಜಿತ್ ಸಿಂಗ್ ಖಾಲ್ಸಾ.
ಫತೆಘರ್ ಸಾಹಿಬ್ ಮತ್ತು ಬಟಿಂಡಾ ಕ್ಷೇತ್ರಗಳಿಂದ ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಸೋಲು ಕಂಡಿದ್ದರು. 2019ರಲ್ಲಿ ಬಿಎಸ್ಪಿ ಪಕ್ಷದಿಂದ ಬಟಿಂಡಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಪರಾಭವಗೊಂಡಿದರು. ಇಂದಿರಾ ಗಾಂಧಿ ಅವರ ನಿವಾಸದಲ್ಲಿ ಅಂಗರಕ್ಷಕರಾಗಿದ್ದ ಬಿಯಾತ್ ಮತ್ತು ಸ್ವತಂತ್ ಸಿಂಗ್, 1984ರಲ್ಲಿ ಅಕ್ಟೋಬರ್ 15ರಂದು ಇಂದಿರಾ ಗಾಂಧಿಯನ್ನ ಗುಂಡಿಕ್ಕಿ ಹತ್ಯೆಗೈದಿದ್ದರು.