ಭಾರತದ ನಂ.2 ಶ್ರೀಮಂತ, ಆಗಾಗ್ಗೆ ನಂ.1 ಪಟ್ಟಕ್ಕೂ ಬಂದು ಹೋಗಿರೋ, ಗೌತಮ್ ಅದಾನಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಅದಾನಿ ಬಿಸಿನೆಸ್ಸುಗಳಲ್ಲಿ ಎಷ್ಟು ಸುದ್ದಿ ಮಾಡ್ತಾರೋ.. ರಾಜಕೀಯವಾಗಿಯೂ ಅಷ್ಟೇ ಸುದ್ದಿ ಮಾಡ್ತಾರೆ. ಕಾಂಗ್ರೆಸ್ ನಾಯಕರು, ಅದರಲ್ಲೂ ರಾಹುಲ್ ಗಾಂಧಿ ಎಲ್ಲೇ ಭಾಷಣ ಮಾಡಲಿ, ಯಾವ್ದೇ ಸಮಾವೇಶ ಇರಲಿ, ಅದಾನಿಯನ್ನ ಟೀಕೆ ಮಾಡ್ದೇ ಭಾಷಣ ಮುಗಿಸೋದೇ ಇಲ್ಲ. ಯಾಕಂದ್ರೆ, ಈ ಅದಾನಿ ಮೋದಿ ಫ್ರೆಂಡ್. ಅರೆಸ್ಟ್ ಆಗ್ತಾರಾ ಅನ್ನೋದು.
ಈ ಗೌತಮ್ ಅದಾನಿ, ಅಮೆರಿಕದಲ್ಲಿ ಸೋಲಾರ್ ಅಗ್ರಿಮೆಂಟಿಗೆ ಸಂಬಂಧಪಟ್ಟಂತೆ ನೂರಾರು ಕೋಟಿ ಡಾಲರ್ ವಂಚನೆ ಮಾಡಿದ್ದಾರಂತೆ. ಇದಕ್ಕೆ ಸಂಬಂಧಪಟ್ಟಂತೆ ಅಮೆರಿಕದ ನ್ಯೂಯಾರ್ಕ್ ಕೋರ್ಟ್, ಅದಾನಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.ಒಂದು ಕಾಲದಲ್ಲಿ ವಿಶ್ವದ ಟಾಪ್ 10 ಶ್ರೀಮಂತರಲ್ಲಿ ಒಬ್ಬರಾಗಿದ್ದ ಅದಾನಿ, ಈಗ ಅರೆಸ್ಟ್ ಆಗೋ ಭಯದಲ್ಲಿದ್ದಾರೆ. ಇದು ಇಂಟರ್ ನ್ಯಾಷನಲ್ ಬಿಸಿನೆಸ್ ಮಾರ್ಕೆಟ್ಟಿನಲ್ಲಿ ಒಂದು ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ರಾಜಕೀಯದಲ್ಲಿ ಇನ್ನೂ ಜಾಸ್ತಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ಇಷ್ಟಕ್ಕೂ ಈ ಅದಾನಿ ವಿರುದ್ಧ ಇರೋ ಆರೋಪ ಏನಪ್ಪಾಂದ್ರೆ,
ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ, ಮುಂದಿನ 20 ವರ್ಷಗಳಲ್ಲಿ 2 ಶತಕೋಟಿ ಡಾಲರ್ ಲಾಭದ ನಿರೀಕ್ಷೆ ಇಟ್ಟುಕೊಂಡು ಸೋಲಾರ್ ಪ್ಲಾಂಟ್ ಮಾಡೋಕೆ ಮುಂದಾಗಿದ್ರು. ಆದರೆ ಆ ಸೋಲಾರ್ ಪ್ಲಾಂಟ್ ಮಾಡೋದಕ್ಕೆ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್ ಲಂಚ ಕೊಟ್ಟಿದ್ರಂತೆ. ಅಂದ್ರೆ ಹೆಚ್ಚೂ ಕಡಿಮೆ 2350 ಕೋಟಿ ಲಂಚ. ಈ ಕೇಸಿನ ಮೇಲೆ ನ್ಯೂಯಾರ್ಕ್ ಕೋರ್ಟ್ ಈಗ ಅರೆಸ್ಟ್ ವಾರೆಂಟ್ ಕೊಟ್ಟಿದೆ.
ಅದಾನಿ ಅವ್ರಿಗೆ ಅರೆಸ್ಟ್ ವಾರೆಂಟ್ ಕೊಟ್ಟಿರೋದ್ರ ಹಿಂದೆ ಒಂದು ಹಿಸ್ಟರಿ ಕೂಡಾ ಇದೆ. 2023ರಲ್ಲಿ ಹಿಂಡೆನ್ ಬರ್ಗ್ ರಿಸರ್ಚ್ ಗ್ರೂಪ್, ಅದಾನಿ ಕಂಪೆನಿ ಮೇಲೆ ವಿದೇಶಿ ಹೂಡಿಕೆದಾರರಿಗೆಲ್ಲ ತಪ್ಪು ತಪ್ಪು ಮಾಹಿತಿ ಕೊಟ್ಟಿದ್ದಾರೆ. ದಾರಿ ತಪ್ಪಿಸಿದ್ದಾರೆ. ಸುಮ್ ಸುಮ್ನೆ ಇಲ್ಲದ ಲಾಭ ತೋರಿಸಿ, ಷೇರುಗಳ ಬೆಲೆ ಹೆಚ್ಚಿಸಿಕೊಂಡಿದ್ದಾರೆ ಅಂತೆಲ್ಲ ಹೇಳಿತ್ತು. ಅಂತಾ ಸುಳ್ಳು ರಿಪೋರ್ಟುಗಳನ್ನೆಲ್ಲ ಲಂಚ ಕೊಟ್ಟೇ ಮಾಡಿಸ್ಕೊಂಡಿದ್ದಾರೆ. ಸುಳ್ ಸುಳ್ಳೇ ಲೆಕ್ಕ ಸೃಷ್ಟಿ ಮಾಡಿ, ಕೋಟಿ ಕೋಟಿ ಆದಾಯ ಮಾಡ್ಕೊಂಡಿದ್ದಾರೆ ಅಂತೆಲ್ಲ ಹೇಳಿತ್ತು. ಈ ರಿಪೋರ್ಟ್ ಎಫೆಕ್ಟ್ ನ್ಯೂಯಾರ್ಕ್ ಕೋರ್ಟಿನಲ್ಲಿ ಕೇಸ್ ಕೂಡಾ ರಿಜಿಸ್ಟರ್ ಆಗಿತ್ತು.
ಆ ಕೇಸಿಗೆ ಸಂಬಂಧಪಟ್ಟಂತೆ ಚಾರ್ಜ್ಶೀಟ್ ಫೈಲ್ ಆಗಿದೆ. ಚಾರ್ಜ್ಶೀಟ್ ಪ್ರಕಾರ ಗೌತಮ್ ಅದಾನಿ ಅವರನ್ನ ನ್ಯೂಮೆರೋ ಯುನೋ ಅಂಡ್ ದಿ ಬಿಗ್ ಮ್ಯಾನ್ ಅನ್ನೋ ಕೋಡ್ ವರ್ಡುಗಳಲ್ಲಿ ಕರೀತಿದ್ದರಂತೆ ಗೌತಮ್ ಅದಾನಿ, ಸಾಗರ್ ಅದಾನಿ, ಅದಾನಿ ಗ್ರೂಪ್ ಎನರ್ಜಿಯ ಸೀನಿಯರ್ ಆಫೀಸರ್ ವಿನೀತ್ ಜೈನ್ ಅನ್ನೋವ್ರು ಸೇರಿದಂತೆ 7 ಜನರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಆಗಿದೆ. ಈ 7 ಜನರ ಟೀಂ, ಅದಾಗ್ಲೇ 300 ಕೋಟಿ ಡಾಲರ್ ವ್ಯಾಲ್ಯೂ ಇರೋ ಬಾಂಡ್, ಸಾಲ ಕಲೆಕ್ಟ್ ಮಾಡಿತ್ತಂತೆ. ಈಗ ಅದಾನಿ ಮೇಲಿರೋದು ಅಮೆರಿಕದ ಕಾನೂನಿನ ಪ್ರಕಾರ ಲಂಚ ಕೊಟ್ಟ ಆರೋಪ ಮತ್ತು ವಿದೇಶಿ ಭ್ರಷ್ಟಾಚಾರ ಕಾಯ್ದೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಕೇಸು ದಾಖಲಾಗಿದೆ. ಚಾರ್ಜ್ಶೀಟೂ ಆಗಿದೆ. ಇನ್ನು ವಿಚಾರಣೆ ನಡೀಬೇಕಷ್ಟೆ.
ಅದಾನಿ ಗ್ರೂಪ್ ನವರು ಇಂಡಿಯನ್ ಗೌರ್ನಮೆಂಟ್ ಜೊತೆ 12 ಗಿಗಾವ್ಯಾಟ್ ಸೋಲಾರ್ ವಿದ್ಯುತ್ ಕೊಡೋಕೆ ಒಪ್ಪಂದ ಮಾಡ್ಕೊಳ್ತಾರೆ. ಆ ಒಪ್ಪಂದ ಮಾಡ್ಕೊಂಡ್ ಮೇಲೆ ಕಂಪೆನಿಗೆ ಬಂಡವಾಳ ಹಾಕೋವರನ್ನ ಹುಡುಕುತ್ತಾರೆ. ಅಷ್ಟರಲ್ಲಿ ಅದಾನಿ ಗ್ರೂಪ್ ಆಫ್ ಕಂಪೆನಿ, ಇಂಡಿಯನ್ ಗೌರ್ನಮೆಂಟಿಗೆ ಒಪ್ಪಂದ ಮಾಡ್ಕೊಂಡಿದೆ ಅಂತಾ ಗೊತ್ತಾದ ಕೂಡಲೇ, ಅದಾನಿ ಗ್ರೂಪ್ಸ್ ಶೇರುಗಳು 20 ಪರ್ಸೆಂಟ್ ಏರಿಕೆ ಕಾಣುತ್ತವೇ ಅದಾನಿ ಗ್ರೂಪ್ಸ್ ವ್ಯಾಲ್ಯೂ ಎರಡೂವರೆ ಲಕ್ಷ ಕೋಟಿ ಜಾಸ್ತಿ ಆಗುತ್ತೆ. ಅಲ್ಲದೆ ಅಮೆರಿಕದ ಕಂಪೆನಿ ಹೂಡಿಕೆನೂ ಮಾಡುತ್ತೆ. ಬಿಸಿನೆಸ್ ಜಗತ್ತಿನಲ್ಲಿ ಇದೆಲ್ಲ ಕಾಮನ್ ಆನ್ನಬಹುದಾದ್ರೂ ಆಮೇಲೆ ನಡೆಯೋ ಕಥೆ ಬೇರೆ.
ಆದರೆ ಕಂಪೆನಿ ವಿದ್ಯುತ್ ಮಾರೋದಕ್ಕೆ ಹೊರಟಾಗ ಖರೀದಿಗೆ ಯಾರೂ ಮುಂದೆ ಬರಲಿಲ್ಲ. ಆಗ ಲಾಸ್ ಆಗೋ ಭಯದಲ್ಲಿ ಅದಾನಿ ಗ್ರೂಪ್ಸ್ ಲಂಚ ಕೊಡೋಕೆ ಮುಂದಾಗುತ್ತೆ. ಈ ಡೆವಲಪ್ ಮೆಂಟ್ ಮಧ್ಯೆ ಅಮೆರಿಕದಲ್ಲಿ ಹೂಡಿಕೆ ಮಾಡಿದ್ದ ಕಂಪೆನಿಯ ಮ್ಯಾನೇಜ್ಮೆಂಟ್ ಚೇಂಜ್ ಆಗುತ್ತೆ. ಆಗ ಲಂಚ ಕೊಡೋಕೆ ಏನೇನೆಲ್ಲ ಸರ್ಕಸ್ ಮಾಡಿದ್ರು ಅನ್ನೋ ಡೀಟೈಲ್ಸ್ ಈಚೆ ಬಂದಿದೆ ಅನ್ನೋದು ಚಾರ್ಜ್ಶೀಟ್ ಪ್ರಕಾರ ಪ್ರಾಸಿಕ್ಯೂಟರ್ ವಾದ.
ಈಗ ಅದಾನಿ ಮೇಲೆ, ನ್ಯೂಯಾರ್ಕ್ ಕೋರ್ಟ್ ಅರೆಸ್ಟ್ ವಾರೆಂಟ್ ಕೊಟ್ಟಿದೆ. ಉದ್ಯಮಿಗಳ ಲೋಕದಲ್ಲಷ್ಟೇ ಅಲ್ಲ, ರಾಷ್ಟ್ರ ರಾಜಕೀಯದಲ್ಲೂ ಬೆಂಕಿ ಹೊತ್ಕೊಂಡಿದೆ. ಈ ಹಿಂದೆ ಅದಾನಿ ವಿರುದ್ಧ ಆರೋಪ ಬಂದಿತ್ತಲ್ಲ, ಆಗ ಪಾತಾಳಕ್ಕೆ ಬಿದ್ದಿದ್ದ ಅದಾನಿ ಗ್ರೂಪ್ಸ್ ಷೇರ್ ವ್ಯಾಲ್ಯೂ ಜಾಸ್ತಿ ಆಗಿದ್ದೆ ಅಮೆರಿಕದ ಕಂಪೆನಿ ಹೂಡಿಕೆ ಮಾಡಿದರಿಂದ. ಈಗ ಅದೇ ಕಂಪೆನಿ ದಿವಾಳಿ ಆಗಿದೆ ಅನ್ನೋ ಆರೋಪ ಕೇಳಿ ಬರುತ್ತಾ ಇದೆ.
ಇಷ್ಟಕ್ಕೂ ಈ ಅದಾನಿ, ಮೋದಿಯವರ ಮಿತ್ರ, ಗುಜರಾತಿನವರು ಅನ್ನೋ ಕಾರಣಕ್ಕೇ ಇಷ್ಟೆಲ್ಲ ಆಗ್ತಿದೆ. ಅದಾನಿ ಗ್ರೂಪ್ ಆಫ್ ಕಂಪೆನಿ, ನ್ಯೂಯಾರ್ಕ್ ಕೊಟ್ಟಿರೋ ಅರೆಸ್ಟ್ ವಾರೆಂಟ್, ತಮ್ಮ ಕಂಪೆನಿ ಮೇಲಿರೋ ಆರೋಪಗಳನ್ನೆಲ್ಲ ಬೇಸ್ ಲೆಸ್ ಅಂಥಾ ತಳ್ಳಿ ಹಾಕಿದೆ. ಈಗ ಬಿಜೆಪಿಯವರು, ಮೋದಿ ಮತ್ತು ಅವರ ಮಿತ್ರರ ಮೇಲೆ ಕಾಂಗ್ರೆಸ್ಸ್ನವರು ಅಟ್ಯಾಕ್ ಮಾಡೋದು, ಇಮೇಜ್ ಡ್ಯಾಮೇಜ್ ಮಾಡೋದು ಹೊಸದಲ್ಲ, 2002ರಿಂದಾನೂ ನಡೀತಿದೆ ಅಂತ ಹೇಳ್ತಿದೆ. ಅತ್ತ ಕಾಂಗ್ರೆಸ್, ಅದರಲ್ಲೂ ರಾಹುಲ ಗಾಂಧಿ, ಈ ಅದಾನಿ ಬರೀ ಭಾರತದ ಕಾನೂನಿಗಷ್ಟೇ ಅಲ್ಲ, ಅಮೆರಿಕನ್ ಕಾನೂನಿಗೂ ದ್ರೋಹ ಮಾಡಿದ್ದಾರೆ ಅಂತಾ ಟೀಕೆ ಮಾಡಿದ್ದಾರೆ.ಒಟ್ಟಿನಲ್ಲಿ ಅಮೆರಿಕದಲ್ಲಿ, ಇಂಡಿಯಾದಲ್ಲಿ ಎರಡೂ ಕಡೆ ಅದಾನಿ ನಿರ್ಧಾರ ಧಗಧಗ ಅಂತಾ ಉರೀತಿದೆ.