ಬೆಂಗಳೂರು – ಮೈಸೂರು; ಎಕ್ಸ್ ಪ್ರೆಸ್ ವೇ, ಇದು ಸೌತ್ ಇಂಡಿಯಾದ ಮೊದಲ ಎಕ್ಸ್ ಪ್ರೆಸ್ ವೇ ಆಗಿದ್ದು. ಇದನ್ನು ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಲಾಗಿತ್ತು. ಅನೇಕ ಆಕ್ಸಿಡೆಂಟ್ ಗಳಿಗೆ ದಾರಿಯಾಗಿತ್ತು. ಹೀಗಾಗಿ ಇದನ್ನು ತಡೆಗಟ್ಟುವ ಸಲುವಾಗಿ ಕ್ಯಾಮೆರಾಗಳ್ಳನ ಅಳವಡಿಸಲಾಗಿದೆ.
ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇ ಯಲ್ಲಿ ಕೊನೆಗೂ ಅಟೋಮ್ಯಾಟಿಕ್ ನಂಬರ್ ಪ್ಲೇಟ್ ರಿಕಗ್ನಿಸೇಷಾನ್ ( ANPR ) ಕ್ಯಾಮೆರಾಗಳನ್ನ ಅಳವಡಿಸಲಾಗಿದೆ.
119 km ಉದ್ದದ ರಸ್ತೆಯಾಗಿದ್ದು, ಬೆಂಗಳೂರು ಕಡೆಗೆ 5 ಕ್ಯಾಮೆರಾ ಹಾಗೂ ಮೈಸೂರು ಕಡೆಗೆ 5 ಕ್ಯಾಮೆರಾ ವನ್ನು ಅಳವಡಿಸಲಾಗಿದೆ. ಓವರ್ ಸ್ಪೀಡಿಂಗ್ ನಲ್ಲಿ ಚಲಿಸುವವರಿಗೆ ಈ ಕ್ಯಾಮೆರಗಳು ಟ್ರಾಫಿಕ್ ಫೈನ್ ಗಳನ್ನ ಮನೆ ಬಾಗಿಲಿಗೆ ತಲುಪಿಸುತ್ತವೆ. .
ಈ ಕ್ಯಾಮೆರಾಗಳು ಆಕ್ಸಿಡೆಂಟ್ ಗಳನ್ನ ತಪ್ಪಿಸಲು ಅಡವಳಿಸಲಾಗಿದೆ. 100kmph ಸ್ಪೀಡ್ ಗಿಂತ ಜಾಸ್ತಿ ಸ್ಪೀಡ್ ನಲ್ಲಿ ಚಲಿಸಿದರೆ ದಂಡ ವಿಧಿಸಲಾಗುತ್ತೆ. ಈ ಕ್ಯಾಮೆರಾಗಳು ಎಕ್ಸ್ ಪ್ರೆಸ್ ವೇಯಲ್ಲಿ ಎರಡ ಸ್ಥಳಗಳ ನಡುವೆ ಚಲಿಸುವ ಸಮಯದ ಆದರದ ಮೇಲೆ ಟ್ರಾಫಿಕ್ ಚಲ್ಲನ್ ನೀಡಲಾಗುತ್ತೆ. ADGP ಅಲೋಕ್ ಕುಮಾರ್ ನೇತೃತ್ವದಲ್ಲಿ ಹೆದ್ದಾರಿ ಕ್ಯಾಮೆರಾ ಅಡವಳಿಕೆ ಕಾಮಗಾರಿ ಪರಿಶೀಲನೆ ನಡೆಸಿದ್ದು, ಇನ್ನು 1 ತಿಂಗಳೊಳಗೆ ಇಡಿ ಕಾಮಗಾರಿ ಪೂರ್ಣಗೊಳ್ಳಲಿದೆ.