ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ದಾಖಲೆ ನಿರ್ಮಿಸಿದೆ. ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತ ಕಲೆ ಹಾಕಿದ ತಂಡ ಎಂಬ ಹೊಸ ದಾಖಲೆ ನಿರ್ಮಿಸಿದೆ. ಈ ಮೂಲಕ ಆರ್ ಸಿಬಿ ತಂಡದ ಹೆಸರಲ್ಲಿದ್ದ ದಾಖಲೆಯನ್ನು ಎಸ್ ಆರ್ ಎಚ್ ತಂಡವು ಪುಡಿಗಟ್ಟಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ನಡೆಸಿದ ಎಸ್ ಆರ್ ಎಚ್ ಬೊಂಬಾಟ್ ಆಟವಾಡಿತು. ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಹಾಗೂ ಹೆನ್ರಿಚ್ ಕ್ಲಾಸೆನ್ ಆಫ್ ಸೆಂಚುರಿ ನೆರವಿಂದ ಕೇವಲ 3 ವಿಕೆಟ್ ಕಳೆದುಕೊಂಡು 277 ರನ್ ಸಿಡಿಸಿತು. ಇದೇ ಐಪಿಎಲ್ ಇತಿಹಾಸದಲ್ಲೇ ತಂಡವೊಂದರ ದೊಡ್ಡ ಮೊತ್ತವಾಗಿದೆ.
IPL ಇನ್ನಿಂಗ್ಸ್ನಲ್ಲಿ ದಾಖಲಾದ ಬಿಗ್ ಸ್ಕೋರ್ ಗಳು.!
277/3 – ಎಸ್ಆರ್ಎಚ್ (ಮುಂಬೈ ಇಂಡಿಯನ್ಸ್ ವಿರುದ್ಧ) ಹೈದರಾಬಾದ್, 2024
263/5 – ಆರ್ಸಿಬಿ (ಪುಣೆ ವಾರಿಯರ್ಸ್ ವಿರುದ್ಧ) ಬೆಂಗಳೂರು, 2013
257/5 – ಎಲ್ಎಸ್ಜಿ (ಪಂಜಾಬ್ ಕಿಂಗ್ಸ್ ವಿರುದ್ಧ) ಮೊಹಾಲಿ, 2023
248/3 – ಆರ್ಸಿಬಿ (ಗುಜರಾತ್ ಲಯನ್ಸ್ ವಿರುದ್ಧ) ಬೆಂಗಳೂರು, 2016
246/5 – ಸಿಎಸ್ಕೆ (ರಾಜಸ್ಥಾನ್ ರಾಯಲ್ಸ್ ವಿರುದ್ಧ) ಚೆನ್ನೈ, 2010