IPL 2024 RCB vs CSK: ಐಪಿಎಲ್ RCB ಮತ್ತು CSK ತಂಡಗಳು ಈವರೆಗೆ 32 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್ಸಿಬಿ ತಂಡ 10 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಸಿಎಸ್ಕೆ 21 ಮ್ಯಾಚ್ ಗಳನ್ನು ಗೆದ್ದುಕೊಂಡಿದೆ. ಇದರಲ್ಲಿ ಒಂದು ಪಂದ್ಯ ಮಾತ್ರ ರದ್ದಾಗಿತ್ತು.
ಪ್ರಸ್ತುತ IPL 2024 ರಲ್ಲಿ 68ನೇ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದೆ. ಮೇ 18 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ವರುಣ ಅಡಚಣೆಯನ್ನುಂಟು ಮಾಡುವ ಸಾಧ್ಯತೆಯಿದೆ.
ಕಾರಣ AccuWeather.com ಪ್ರಕಾರ ಮೇ 18 ರಂದು ಬೆಂಗಳೂರಿನಲ್ಲಿ ಮಧ್ಯಾಹ್ನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಸಂಜೆ, ತಾಪಮಾನವು ಸುಮಾರು 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಶೇ.100 ರಷ್ಟು ಮೋಡ ಆವರಿಸಲಿದ್ದು, ಈ ವೇಳೆ 47 ಪರ್ಸೆಂಟ್ ಮಳೆಯಾಗುವು ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೆ ರಾತ್ರಿ ವೇಳೆಯೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳು ಶೇಕಡಾ 60 ಕ್ಕಿಂತ ಹೆಚ್ಚಿದೆ. ಅಂದರೆ ಆರ್ಸಿಬಿ-ಸಿಎಸ್ಕೆ ನಡುವಣ ಪಂದ್ಯಕ್ಕೆ ಮಳೆ ಅಡಚಣೆಯನ್ನು ಉಂಟು ಮಾಡುವುದು ಬಹುತೇಕ ಖಚಿತ ಎನ್ನಬಹುದು.
ಹಾಗಾದರೆ ಯಾವ ತಂಡ ಪ್ಲೇಆಫ್ ಪ್ರವೇಶಿಸಲಿದೆ..?
ಇದರ ಬೆನ್ನಲ್ಲೇ, ಭಾರೀ ಮಳೆಯಿಂದಾಗಿ ಪಂದ್ಯ ರದ್ದಾದರೆ. ಹಂಡ್ರೆಡ್ ಪರ್ಸೆಂಟ್ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ಪ್ರವೇಶಿಸಲಿದೆ. ಯಾಕಂದರೆ CSK ತಂಡವು ಒಟ್ಟು 14 ಅಂಕಗಳೊಂದಿಗೆ ಪ್ರಸ್ತುತ ಅಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
ಶನಿವಾರ ಮಳೆಯಿಂದಾಗಿ ಪಂದ್ಯ ರದ್ದಾದರೆ ಆರ್ಸಿಬಿ ಮತ್ತು ಸಿಎಸ್ಕೆ ತಲಾ ಒಂದೊಂದು ಪಾಯಿಂಟ್ ಹಂಚಿಕೊಳ್ಳಲಿದೆ. ಇದರಿಂದ ಸಿಎಸ್ಕೆ ತಂಡದ ಒಟ್ಟು ಪಾಯಿಂಟ್ಸ್ 15 ಆಗಲಿದ್ದು, ಇದೇ ವೇಳೆ ಆರ್ಸಿಬಿ ತಂಡದ ಅಂಕ 13 ರಲ್ಲೇ ಉಳಿಯಲಿದೆ. ಅತ್ತ 15 ಅಂಕಗಳನ್ನು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ 3ನೇ ಅಥವಾ 4ನೇ ಸ್ಥಾನದೊಂದಿಗೆ ಪ್ಲೇಆಫ್ಗೆ ಎಂಟ್ರಿ ಕೊಡಲಿದೆ. ಹೀಗಾಗಿ ಬೆಂಗಳೂರಿನಲ್ಲಿ ಶನಿವಾರ ನಡೆಯಲಿರುವ ಪಂದ್ಯವು ಮಳೆಗೆ ಅಹುತಿಯಾಗದಿರಲಿ ಎಂಬುದೇ ಆರ್ಸಿಬಿ ಅಭಿಮಾನಿಗಳ ಆಸೆ ಹಾಗೂ ಪ್ರಾರ್ಥನೆಯಾಗಿದೆ.