2025ರ ಐಪಿಎಲ್ ಭಾಗವಾಗಿ ನಡೆದ ಮೆಗಾ ಹರಾಜಿನಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಜಿ ನಾಯಕ ಕೆ.ಎಲ್ ರಾಹುಲ್ 14 ಕೋಟಿ ರೂ.ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ.
ಇದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಆದ್ರೆ ರಾಹುಲ್ ಅವರನ್ನು ಹೊರದಬ್ಬಿದ ಲಕ್ನೋ 27 ಕೋಟಿ ರೂ. ದಾಖಲೆ ಬೆಲೆ ರಿಷಬ್ ಪಂತ್ ಅವರನ್ನು ಆರ್ಟಿಎಂ ಕಾರ್ಡ್ ಅಡಿ ಖರೀದಿಸಿದೆ.