ಈ ಬಾರಿಯ ಲೋಕಸಭಾ ಚುನಾವಣೆಯ ಅಖಾಡದಲ್ಲಿ ಸ್ವಾಮೀಜಿಗಳ ಪ್ರಸ್ತಾಪವೂ ಹೆಚ್ಚಾಗಿದೆ. ಪಂಚಮಸಾಲಿ ವಿಚಾರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸಹಾಯಕ್ಕೆ ಧಾವಿಸಿದ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಬಿಜೆಪಿ ನಾಯಕ ಮುರುಗೇಶ್ ನಿರಾಣಿ ಕಿಡಿಕಾರಿದ್ದಾರೆ. ಬಸವಜಯಮೃತ್ಯುಂಜಯ ಸ್ವಾಮೀಜಿ ಆಗಮಿಸಿ ಹೆಬ್ಬಾಳ್ಕರ್ ಪರ ನಿಂತಿದ್ದಾರೆ. ‘ಲಕ್ಷ್ಮೀ ಹೆಬ್ಬಾಳ್ಕರ್ ಪಂಚಮಸಾಲಿ ಸಮುದಾಯದವರು, ಯಾರೊ ಒಬ್ಬರು ಏನೂ ಹೇಳಿದರೆ ಪ್ರತಿಕ್ರಿಯೆ ಕೊಡಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ. ಸ್ವಾಮೀಜಿಗಳ ಮಾತಿನಿಂದ ಕೆರಳಿ ಕೆಂಡವಾಗಿರೋ ಮುರುಗೇಶ್ ನಿರಾಣಿ,
‘ಯಾರೊ ಒಬ್ಬರು ಅಲ್ಲ, ನಾನೇ ಹೇಳಿದ್ದೇನೆ. ಬಾಗಲಕೋಟೆಯಲ್ಲಿ ಮಾತನಾಡಿದ ನಿರಾಣಿ, ಸ್ವಾಮೀಜಿಯವರೇ ‘ನನ್ನ ವೈಯಕ್ತಿಕವಾಗಿ ಇನ್ಮುಂದೆ ಮಾತಾಡಿದರೆ, ನಿಮ್ಮವು ನೂರಾರು ವಿಷಯಗಳು ನನ್ನ ಕಡೆ ಇವೆ. ನಮ್ಮ ಸಮಾಜದವರು ಅಂತ ಗೌರವ ಕೊಟ್ಟು ಸುಮ್ಮನಿದ್ದೇವೆ. ಅದು ನಮ್ಮ ದೌರ್ಬಲ್ಯವಲ್ಲ, ಮಾತಾಡೋದಕ್ಕೆ ಸಾಕಷ್ಟು ಪಾಯಿಂಟ್ ಗಳಿವೆ. ಪಕ್ಷದ ಪರ ಪ್ರಚಾರ ಮಾಡೋದನ್ನು ಬಿಡಿ ಎಂದು ಜಯಮೃತ್ಯುಂಜ ಸ್ವಾಮೀಜಿಗೆ ತಿರುಗೇಟು ನೀಡಿದ್ದಾರೆ.