ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣದಿಂದ ಪಕ್ಷಕ್ಕೆ ಮುಜುಗರ ಆಗಿದೆ. ಜೆಡಿಎಸ್ ಪಕ್ಷಕ್ಕೆ ಕಳಂಕ ತಂದ ಪ್ರಜ್ವಲ್ ರೇವಣ್ಣರನ್ನ ಪಕ್ಷದಿಂದ ಅಮಾನತುಗೊಳಿಸಬೇಕು ಎಂದು ಗುರುಮಿಠಕಲ್ ಶಾಸಕ ಶರಣುಗೌಡ ಕಂದಕೂರ್ ಆಗ್ರಹಿಸಿದ್ದಾರೆ. ಈ ಬಗ್ಗೆ ಹೆಚ್.ಡಿ.ದೇವೇಗೌಡರಿಗೆ ಪತ್ರ ಬರೆದಿರುವ ಶರಣುಗೌಡ, ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ದೂರುಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತನಿಖೆಗಾಗಿ ಒಂದು ವಿಶೇಷ ತನಿಖಾ ತಂಡವನ್ನು ರಚಿಸಿದೆ.
ಅದು ಗೊತ್ತಾಗುತ್ತಿದ್ದಂತೆ ಪ್ರಜ್ವಲ್ ರಾತ್ರೋರಾತ್ರಿ ಜರ್ಮನಿಗೆ ಹೋಗಿದ್ದಾರೆಂದು ತಿಳಿದುಬಂದಿದೆ. ತಮ್ಮ ಪತ್ರದಲ್ಲಿ ಕಂದ್ಕೂರ್, ಪ್ರಜ್ವಲ್ ನಿಂದ ಪಕ್ಷದ ವರ್ಚಸ್ಸಿಗೆ ಕಳಂಕವುಂಟಾಗಿದೆ ಎಂದಿದ್ದಾರೆ.