ಜಾರ್ಖಂಡ್ನಲ್ಲಿ ನಡೆದ ಚುನಾವಣೆಯ ಫಲಿತಾಂಶ ಹೊರಬೀಳುವುದು ನವೆಂಬರ್ 23ಕ್ಕೆ. ಮತದಾನ ಮುಕ್ತಾಯವಾಗಿದ್ದು, ಎಕ್ಸಿಟ್ ಪೋಲ್ ಹೊರಬಿದ್ದಿವೆ. ಇಲ್ಲಿ ಇರುವುದು ಒಟ್ಟು 81 ಸ್ಥಾನ. ಬಹುಮತಕ್ಕೆ 41 ಸ್ಥಾನ ಬೇಕು. ಹಲವು ಸಮೀಕ್ಷೆಗಳ ಲೆಕ್ಕಾಚಾರ ನೋಡಿದರೆ ಬಿಜೆಪಿ ಒಕ್ಕೂ ಟ ಮೇಲುಗೈ ಸಾಧಿಸಿದೆ. ಆಡಳಿತಾರೂಢ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ. ಬಹುತೇಕ ಸಮೀಕ್ಷೆಗಳು ಎನ್ಡಿಎ ಪರ ಇದ್ದರೂ ಕೆಲವು ಸಮೀಕ್ಷೆಗಳು ಕಾಂಗ್ರೆಸ್ಗೆ ಪ್ರಚಂಡ ಬಹುಮತ ನೀಡಿವೆ. ಆದರೆ ಸಮೀಕ್ಷೆಗಳ ಸಮೀಕ್ಷೆಯ ಸರಾಸರಿ ನೋಡಿದರೆ, ಪೋಲ್ ಆಫ್ ಪೋಲ್ ಲೆಕ್ಕಾಚಾರ ಗಮನಿಸಿದರೆ ಎನ್ಡಿಎ ಒಕ್ಕೂಟ ಬಹುಮತಕ್ಕೆ ಅಗತ್ಯವಾದ 41 ಸ್ಥಾನ ಗಳಿಸುತ್ತಿದೆ. ಕಾಂಗ್ರೆಸ್ ಒಕ್ಕೂಟ 36 ಸ್ಥಾನಗಳಿಸಲಿದೆ ಎನ್ನಲಾಗುತ್ತಿದೆ. ವಿಶೇಷ ಅಂದ್ರೆ ಬಹುಮತಕ್ಕೆ ಅಗತ್ಯವಾಗಿರುವ 41ರ ಮ್ಯಾಜಿಕ್ ನಂಬರ್ಅನ್ನು ಎನ್ಡಿಎ ಒಕ್ಕೂಟ ದಾಟಿಲ್ಲ.
ಸಮೀಕ್ಷಾ ಸಂಸ್ಥೆ | NDA | INDIA | OTH |
ಮ್ಯಾಟ್ರಿಜ್ | 40-44 | 30-40 | 01 |
ಜೆವಿಸಿ-ಎಸ್ | 40-44 | 30-40 | 01 |
ಪೀಪಲ್ ಪಲ್ಸ್ | 44-53 | 25-37 | 05-09 |
ಚಾಣಕ್ಯ ಸ್ಟ್ರಾಟಜೀಸ್ | 45-50 | 35-38 | 03-05 |
ಆಕ್ಸಿಸ್ ಮೈ ಇಂಡಿಯಾ | 25 | 53 | 03 |
POLL OF POLLS | 41 | 36 | 4 |