ಕರ್ನಾಟಕ ಸರ್ಕಾರವು ವೃತ್ತಿಪರ ತೆರಿಗೆಯನ್ನು ಮಾಸಿಕ ₹200 ರಿಂದ ₹300 ಗೆ ಹೆಚ್ಚಿಸುವ ನಿರ್ಧಾರವನ್ನು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಮಾಡಲಾಗಿದೆ. ‘ಕರ್ನಾಟಕ ವೃತ್ತಿ, ಕಸುಬು, ಆಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ ತಿದ್ದುಪಡಿ ವಿಧೇಯಕ-2025’ ಅಡಿಯಲ್ಲಿ ಈ ಹೆಚ್ಚಳವನ್ನು ಜಾರಿಗೊಳಿಸಲಾಗುತ್ತದೆ.
ಇದುವರೆಗೆ ಮಾಸಿಕ ₹15,000 ಕ್ಕಿಂತ ಹೆಚ್ಚು ಸಂಪಾದಿಸುವ ಉದ್ಯೋಗಿಗಳು, ವ್ಯಾಪಾರಿಗಳು ಮತ್ತು ವೃತ್ತಿಪರರು ವಾರ್ಷಿಕವಾಗಿ ₹2,500 (11 ತಿಂಗಳು ₹200 + 1 ತಿಂಗಳು ₹300) ತೆರಿಗೆ ಪಾವತಿಸಬೇಕಾಗಿತ್ತು. ಹೊಸ ತಿದ್ದುಪಡಿಯೊಂದಿಗೆ ಪ್ರತಿ ತಿಂಗಳು ₹300 ತೆರಿಗೆ ವಸೂಲಿ ಮಾಡಲಾಗುತ್ತದೆ. ಇದು ಸರ್ಕಾರದ ಆದಾಯವನ್ನು ಹೆಚ್ಚಿಸಲು ಮತ್ತು ಸಾರ್ವಜನಿಕ ಸೇವೆಗಳಿಗೆ ಹೆಚ್ಚು ನಿಧಿಯನ್ನು ನಿಗದಿಪಡಿಸುವ ಉದ್ದೇಶವನ್ನು ಹೊಂದಿದೆ.
ಅಕ್ರಮ ಪಶು ಆಹಾರ ಉತ್ಪಾದನೆಗೆ 3 ವರ್ಷದ ಜೈಲು ಶಿಕ್ಷೆ
ಪ್ರಾಣಿಗಳ ಆರೋಗ್ಯ ಮತ್ತು ಸುರಕ್ಷಿತ ಆಹಾರವನ್ನು ಖಚಿತಪಡಿಸುವುದಕ್ಕಾಗಿ ರಾಜ್ಯ ಸರ್ಕಾರವು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತಂದಿದೆ. ಪರವಾನಗಿ ಇಲ್ಲದೆ ಪಶು ಆಹಾರ ಉತ್ಪಾದಿಸುವ, ಮಾರಾಟ ಮಾಡುವ ಅಥವಾ ಪೂರೈಕೆ ಮಾಡುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಲು ಹೊಸ ಕಾಯ್ದೆ ರೂಪುಗೊಂಡಿದೆ. ಅಕ್ರಮ ಚಟುವಟಿಕೆಗಳಿಗೆ ಗರಿಷ್ಠ 3 ವರ್ಷದ ಜೈಲು ಶಿಕ್ಷೆ ಮತ್ತು ₹5 ಲಕ್ಷ ದಂಡ ವಿಧಿಸಲು ಕೂಡ ಅವಕಾಶ ಕಲ್ಪಿಸಲಾಗಿದೆ. ಪಶುಸಂಗೋಪನಾ ಇಲಾಖೆಯು ಪರವಾನಗಿ ಪ್ರಕ್ರಿಯೆ ಮತ್ತು ನಿಯಂತ್ರಣಕ್ಕಾಗಿ ತಜ್ಞರ ಸಮಿತಿಯನ್ನು ರಚಿಸಲಿದೆ. ಈ ನಿರ್ಧಾರವು ದುರ್ಗುಣಕಾರಿ ಪಶು ಆಹಾರದಿಂದ ಉಂಟಾಗುವ ಆರೋಗ್ಯ ಅಪಾಯಗಳನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ.
ಗ್ರಾಮೀಣ ವಿಶ್ವವಿದ್ಯಾಲಯಕ್ಕೆ ಗಾಂಧೀಜಿ ಹೆಸರಿನ ನಾಮಕರಣ
ಕರ್ನಾಟಕ ರಾಜ್ಯ ಗ್ರಾಮೀಣಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ (ತಿದ್ದುಪಡಿ)ವಿಧೇಯಕ-2025ಕ್ಕೆ ಅನುಮೋದನೆ ನೀಡಿದ್ದು, ತನ್ಮೂಲಕ ವಿಶ್ವವಿದ್ಯಾಲಯಕ್ಕೆ ಮಹಾತ್ಮ ಗಾಂಧೀಕಿ ಹೆಸರು ನಾಮಕರಣ ಮಾಲು ತೀರ್ಮಾನಿಸಲಾಗಿದೆ.