ʻಬ್ಯಾಂಕ್ ಆಫ್ ಬರೋಡಾʼದಲ್ಲಿ ಉದ್ಯೋಗಾವಕಾಶ!

Whatsapp image 2024 12 28 at 5.05.39 pm

ಬ್ಯಾಂಕ್ ಆಫ್ ಬರೋಡಾದಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ . ಬೇರೆ ಬೇರೆ ಬ್ರ್ಯಾಂಚ್​ಗಳಿಗೆ ಈ ಉದ್ಯೋಗಗಳನ್ನು ತುಂಬಲಾಗುತ್ತದೆ. ಸಾವಿರಕ್ಕೂ ಅಧಿಕ ಖಾಲಿ ಉದ್ಯೋಗಗಳು ಇದ್ದು ಪುರುಷ, ಮಹಿಳೆಯರು ಇಬ್ಬರಿಗೂ ಅವಕಾಶ ಇರುತ್ತದೆ. ಅಲ್ಲದೇ ಇಂದಿನಿಂದ ಅರ್ಜಿ ಆರಂಭವಾಗಿದ್ದರಿಂದ ಅಭ್ಯರ್ಥಿಗಳು ಈ ಕೆಲಸಗಳಿಗೆ ಅಪ್ಲೇ ಮಾಡಬಹುದು. ಡಿಸೆಂಬರ್ 27 ರಂದು ಅಧಿಸೂಚನೆಯನ್ನು ಬ್ಯಾಂಕ್ ರಿಲೀಸ್ ಮಾಡಿದೆ. ಇಂದಿನಿಂದ ದೇಶದ್ಯಾಂತ ಅರ್ಜಿಗಳು ಆರಂಭವಾಗಿವೆ. ಹೀಗಾಗಿ ಅರ್ಹ ಅಭ್ಯರ್ಥಿಗಳು ಕೆಲಸಗಳಿಗೆ ಆನ್‌ಲೈನ್‌ ಮೂಲಕ ಅಪ್ಲೇ ಮಾಡಬಹುದು. ಅಭ್ಯರ್ಥಿಗಳ ಅರ್ಹತಾ ಮಾನದಂಡಗಳು, ಅರ್ಜಿ ಶುಲ್ಕ, ವೇತನ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಯಾವ್ಯಾವ ಹುದ್ದೆಗಳು ಇವೆ?
ಅಗ್ರಿಕಲ್ಚರಲ್ ಮಾರ್ಕೆಟಿಂಗ್ ಮ್ಯಾನೇಜರ್, ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಕ್ರೆಡಿಟ್ ಅನಾಲಿಸ್ಟ್‌, ಸೆಕ್ಯೂರಿಟಿ ಅನಾಲಿಸ್ಟ್‌, ಟೆಕ್ನಿಕಲ್ ಮ್ಯಾನೇಜರ್, ಟೆಕ್ನಿಕಲ್ ಸೀನಿಯರ್ ಮ್ಯಾನೇಜರ್, ಚೀಫ್ ಮ್ಯಾನೇಜರ್ ಸೇರಿ ವಿವಿಧ ಹುದ್ದೆಗಳು ಬ್ಯಾಂಕ್​ನಲ್ಲಿ ಖಾಲಿ ಇವೆ.

ADVERTISEMENT
ADVERTISEMENT

ಒಟ್ಟು ಉದ್ಯೋಗಗಳು– 1,267
ಆಯ್ಕೆ ಪ್ರಕ್ರಿಯೆ-

ಆನ್​ಲೈನ್ ಪರೀಕ್ಷೆ
ಸೈಕೋಮೆಟ್ರಿಕ್ ಪರೀಕ್ಷೆ (Psychometric test)
ಗುಂಪು ಚರ್ಚೆ ಅಥವಾ ಸಂದರ್ಶನ (ಎರಡರಲ್ಲಿ ಒಂದು)

ಮಾಸಿಕ ವೇತನ-
48,480 ದಿಂದ 1,35,020 ರೂಪಾಯಿಗಳು
ಆಯಾಯ ಉದ್ಯೋಗಗಳಿಗೆ ತಕ್ಕಂತೆ ನೀಡಲಾಗುತ್ತೆ

ಅರ್ಜಿ ಶುಲ್ಕ ಎಷ್ಟು ಇದೆ?

ವಿದ್ಯಾರ್ಹತೆ
ಪದವಿ, ಬಿಇ, ಎಂಬಿಎ, ಸಿಎ, ಸಿಎಫ್​ಎ, ಬಿಟೆಕ್, ಎಂಸಿಎ, ಎಂ.ಎಸ್.​​ಸಿ ಇನ್ ಐಟಿ, ರೂರಲ್ ಮ್ಯಾನೇಜ್​ಮೆಂಟ್, ಕಂಪ್ಯೂಟರ್ ಸೈನ್ಸ್​, ಸಿವಿಲ್ ಇಂಜಿನಿಯರಿಂಗ್, ಎಂಸಿಎ ಇನ್ ಕಂಪ್ಯೂಟರ್ ಸೈನ್ಸ್,

ಜನರಲ್, ಇಡಬ್ಲುಎಸ್, ಒಬಿಸಿ- 600 ರೂಪಾಯಿ
ಎಸ್​ಸಿ, ಎಸ್​ಟಿ, ವಿಶೇಷ ಚೇತನರು- 100 ರೂಪಾಯಿ

ವಯೋಮಿತಿ–
22 ವರ್ಷದಿಂದ 42 ವರ್ಷಗಳು
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ:
https://whatsapp.com/channel/0029VafyCqRFnSzHn1JWKi1B

ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc

Exit mobile version