Jr. Ntr:ದಾನ-ಧರ್ಮ ಮಾಡೋದರಲ್ಲಿ ಯಂಗ್ ಟೈಗರ್ ಜೂನಿಯರ್ ಎನ್ಟಿಆರ್ ಎತ್ತಿದ ಕೈ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ, ದಾನ ಕೊಟ್ಟಿದ್ದನ್ನ, ಸಹಾಯ ಹಸ್ತ ಚಾಚಿದ್ದನ್ನ ಯಾವತ್ತೂ ಕೂಡ ತಾರಕ್ ಹೇಳಿಕೊಂಡು ಪಬ್ಲಿಸಿಟಿ ಗಿಟ್ಟಿಸಿಕೊಳ್ಳುವ ಹೋಗೋದಿಲ್ಲ. ಅದಾಗ್ಯೂ ಕೊಮರಮ್ ಭೀಮ್ ಕರ್ಣನಾದ ಕಥೆಗಳು ಹೊರಬೀಳುತ್ತಿವೆ ಇದೀಗ ಆಂಧ್ರಪ್ರದೇಶದ ಶ್ರೀ ಭದ್ರಕಾಳಿ ಸಮೇತ ವೀರಭದ್ರಸ್ವಾಮಿ ಸನ್ನಿಧಿಗೆ 12.5 ಲಕ್ಷ ದಾನ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಕಳೆದ ವರ್ಷ ಪ್ರವಾಹ ಸಂತ್ರಸ್ತರಿಗೆ ನೆರವಿಗೆ ಧಾವಿಸಿದ್ದರು. ಸುಮಾರು 25 ಲಕ್ಷ ಹಣವನ್ನ ಚೀಫ್ ಮಿನಿಸ್ಟರ್ ರಿಲೀಫ್ ಫಂಡ್ಗೆ ಡೋನೆಟ್ ಮಾಡಿದ್ದರು. ಹೀಗಾಗಿಯೇ ತಾರಕ್ ಫ್ಯಾನ್ಸ್ ಇವ್ರನ್ನ ಮನುಷ್ಯ ರೂಪದಲ್ಲಿರೋ ದೇವರು ಅಂತಾರೆ. ಅಭಿಮಾನಿಗಳ ರೂಪದಲ್ಲಿ ಕೋಟ್ಯಾಂತರ ಭಕ್ತರು ಕೊಮರಮ್ ಭೀಮ್ನ ಆರಾಧಿಸ್ತಾರೆ. ಸದ್ಯ ತಾರಕ್ ಅಭಿಮಾನಿಗಳು ʻದೇವರʼ ಸಿನ್ಮಾಗಾಗಿ ಎದುರುನೋಡ್ತಿದ್ದಾರೆ. ದೇವರ ಹೈವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಸಿನ್ಮಾವಾಗಿದ್ದು ತಾರಕ್ ಭಕ್ತರು ಮಾತ್ರವಲ್ಲ ಇಡೀ ಚಿತ್ರಜಗತ್ತೇ ಚಾತಕ ಪಕ್ಷಿಯಂತೆ ಕಣ್ಣರಳಿಸಿ ಕೂತಿದೆ. ಇದೇ ಮೇ 20ರಂದು ಯಂಗ್ ಟೈಗರ್ ಜೂನಿಯರ್ ಎನ್ಟಿಆರ್ ಹುಟ್ಟುಹಬ್ಬವಿದ್ದು, ಬರ್ತ್ಡೇಗೂ ಒಂದು ದಿನ ಮೊದಲೇ ದೇವರ ಟೀಮ್ ಫಸ್ಟ್ ಸಾಂಗ್ ರಿಲೀಸ್ ಮಾಡ್ತಿದೆ. ಸೌತ್ ಸಿನ್ಮಾ ಇಂಡಸ್ಟ್ರಿಯ ಸೆನ್ಸೇಷನಲ್ ಮ್ಯೂಸಿಕ್ ಕಂಪೋಸರ್ ಅನಿರುದ್ ರವಿಚಂದರ್ ಸಂಗೀತ ಸಂಯೋಜಿಸಿದ್ದು, ಜೈಲರ್ ಚಿತ್ರದ ಹುಕುಂ ಸಾಂಗ್ನ ಮೀರಿಸಲಿದೆ ʻದೇವರʼ ಚಿತ್ರದ ಫಿಯರ್ ಸಾಂಗ್ ಎನ್ನುವ ಮಾತುಗಳು ಈಗಾಗಲೇ ಕೇಳಿಬರ್ತಿದೆ. ಯುವಸುಧಾ ಆರ್ಟ್ಸ್, ಎನ್ಟಿಆರ್ ಆರ್ಟ್ಸ್ ಜಂಟಿಯಾಗಿ ಈ ಸಿನಿಮಾ ನಿರ್ಮಿಸಿದೆ. ಯಂಗ್ ಟೈಗರ್ ಜೊತೆಗೆ ಬಿಟೌನ್ ಬ್ಯೂಟಿ ಜಾಹ್ನವಿ ಕಪೂರ್, ಸೈಫ್ ಅಲಿಖಾನ್, ಪ್ರಕಾಶ್ ರಾಜ್, ಶ್ರೀಕಾಂತ್, ಮುರುಳಿ ಶರ್ಮಾ ಸೇರಿದಂತೆ ಅತೀ ದೊಡ್ಡ ತಾರಾಬಳಗ ಈ ಸಿನಿಮಾದಲ್ಲಿದೆ. ಭರ್ತಿ 300 ಕೋಟಿ ವೆಚ್ಚದಲ್ಲಿ ಎರಡು ಭಾಗದಲ್ಲಿ ತಯಾರಾಗಿರೋ ದೇವರ ಚಿತ್ರದ ಮೊದಲ ಭಾಗ, ಇದೇ ಅಕ್ಟೋಬರ್ 10 ರಂದು ವರ್ಲ್ಡ್ವೈಡ್ ರಿಲೀಸ್ ಆಗ್ತಿದೆ.