ಬೆಳಗಾವಿ : ಪ್ರಚಾರದ ವೇಳೆ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ ನಾಲಿಗೆ ಹರಿಬಿಟ್ಟಿದ್ದಾರೆ. ಕಾಗವಾಡ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ಮಾತನಾಡಿದ ರಾಜು ಕಾಗೆ, ನರೇಂದ್ರ ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗುವುದಿಲ್ಲವೇ? ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ತೀರಿಕೊಂಡರೆ ಪ್ರಧಾನಿ ಅಭ್ಯರ್ಥಿ ಇಲ್ಲವೇ? 140 ಕೋಟಿ ಜನಸಂಖ್ಯೆಯಲ್ಲಿ ಪ್ರಧಾನಿ ಅಭ್ಯರ್ಥಿ ಇಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. ಈಗಿನ ಯುವಕರು ಮೋದಿ ಮೋದಿ ಎಂದು ಹೇಳುತ್ತಾರೆ. ನೀವೇನು ಮೋದಿಯವರನ್ನು ತೆಗೆದುಕೊಂಡು ನೆಕ್ಕುತ್ತೀರಾ? ಇಲ್ಲಿ ಯಾವುದೇ ಸಮಸ್ಯೆ ಆದರೂ ಪ್ರಧಾನಿ ಮೋದಿ ಬರಲ್ಲ, ಇಲ್ಲಿ ನಾವೇ ನಿಮ್ಮ ಸಮಸ್ಯೆ ಆಲಿಸಬೇಕು. ಮೋದಿಗೆ 3 ಸಾವಿರ ಕೋಟಿ ವಿಮಾನ ಇದೆ. 4 ಲಕ್ಷ ಸೂಟ್ ಹಾಕಿಕೊಳ್ಳುತ್ತಾರೆ ಎಂದರು.