ನೀರಿನ ಬವಣೆಯಿಂದ ಬಳಲುತ್ತಿರುವ ರಾಜ್ಯಕ್ಕೆ, ಈಗ ಅದೇ ನೀರಿನಿಂದ ಕಂಟಕ ಎದುರಾಗಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾಲರಾ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ರಾಜ್ಯದಲ್ಲಿ ಒಟ್ಟು10 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಬೆಂಗಳೂರಿನಲ್ಲೇ 6 ಪ್ರಕರಣಗಳು ಪತ್ತೆಯಾಗಿವೆ. ಕಾಲರಾ ಹರಡಲು ಪ್ರಮುಖ ಕಾರಣಗಳು ನೋಡೋದಾದರೆ, ಕುಡಿಯುವ ನೀರಿನ ಮೂಲಗಳು ಕಲುಷಿತಗೊಂಡಾಗ ಕಾಲರಾ, ಬ್ಯಾಕ್ಟೀರಿಯಾದ ಕಾಯಿಲೆ ಹರಡುತ್ತದೆ. ಇದರ ರೋಗಲಕ್ಷಣಗಳು ತೀವ್ರವಾದ ಅತಿಸಾರ ಭೇದಿ, ವಾಂತಿ, ಜ್ವರ ಮತ್ತು ಆಯಾಸ. ಇನ್ನು ಕಾಲರಾದಿಂದ ಪಾರಾಗಲು ವೈದ್ಯರು ಒಂದಷ್ಟು ಸಲಹೆಗಳನ್ನ ನೀಡಿದ್ದು,
ವಹಿಸಬೇಕಾದ ಕ್ರಮಗಳು
ಸುರಕ್ಷಿತ ಹಾಗೂ ಕಾಯಿಸಿದ ನೀರನ್ನು ಕುಡಿಯಿರಿ
ಕಚ್ಚಾ ಹಾಗೂ ಮಾಂಸ ಸೇವನೆ ಕಡಿಮೆ ಮಾಡುವುದು
ದೇಹದಲ್ಲಿ ನೀರಿನ ಅಂಶ ಕಡಿಮೆ ಆದರೆ ವೈದ್ಯರನ್ನ ಸಂಪರ್ಕಿಸಿ
ಆದಷ್ಟು ಶುಚಿತ್ವವನ್ನ ಕಾಪಾಡಿಕೊಳ್ಳುವುದು ಉತ್ತಮ