- ಬೆಂಗಳೂರಿನಲ್ಲಿ ಕಲ್ಕಿಗೆ ಬಿಗ್ ವೆಲ್ ಕಮ್
- ಸ್ಟಾರ್ ನಟರ ಕಂಡು ಫ್ಯಾನ್ಸ್ ಫುಲ್ ಖುಷ್
- ಇಂದು ಬೆಳಗ್ಗೆ 5 ಘಂಟೆಯಿಂದಲೇ ಕಲ್ಕಿ ಪ್ರದರ್ಶನ
ಪ್ರಭಾಸ್ ಸೇರಿದಂತೆ ಚಿತ್ರರಂಗದ ದಿಗ್ಗಜರು ಅಭಿನಯಿಸಿರುವ ಕಲ್ಕಿ 2898 AD ಮೂವಿ ಗ್ರಾಂಡ್ ಆಗಿ ವಿಶ್ವದ್ಯಾಂತ ಬೆಳ್ಳಿತೆರೆಗೆ ಅಪ್ಪಳಿಸಿದೆ. ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಮೂವಿ ಇದಾಗಿದ್ದು, ಅಭಿಮಾನಿಗಳು ಕಾತುರದಿಂದ ಇದ್ದರು. ಬೆಂಗಳೂರಿನಲ್ಲಿ ಕಲ್ಕಿಗೆ ಬಿಗ್ ವೆಲ್ ಕಮ್ ಮಾಡಲಾಗಿದೆ. ಇಂದು ಬೆಳಗ್ಗೆ 6 ಗಂಟೆಯಿಂದಲೇ ಶೋ ಪ್ರದರ್ಶಿಸಲಾಗಿದ್ದು, ಡಾರ್ಲಿಂಗ್ ಫ್ಯಾನ್ಸ್ ಫುಲ್ ಜೋಶ್ನಲ್ಲಿದ್ದಾರೆ.
ಕನ್ನಡ, ತೆಲುಗು, ಮಲಯಾಳಂ, ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ ಕಲ್ಕಿ 2898 AD ಸಿನಿಮಾ ರಿಲೀಸ್ ಆಗಿದೆ. 2D, 3D ವರ್ಸನ್ನಲ್ಲಿ ತೆರೆಗೆ ಅಪ್ಪಳಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಊರ್ವಶಿ ಚಿತ್ರಮಂದಿರದಲ್ಲಿ ಇಂದು ಬೆಳಗ್ಗೆ 6 ಗಂಟೆಗೆ ಮೊದಲ ಶೋವನ್ನು ಪ್ರದರ್ಶನ ಮಾಡಲಾಗಿದೆ. ಇನ್ನು ಕೆಲ ಚಿತ್ರಮಂದಿರಗಳಲ್ಲಿ ಇಂದು ಬೆಳಗ್ಗೆ 5 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಮಾಡಲಾಗಿದ್ದು, ಮೂವಿ ನೋಡಿದ ಪ್ರಭಾಸ್ ಫ್ಯಾನ್ಸ್ ಸಖತ್ ಖುಷ್ ಆಗಿದ್ದಾರೆ.
ಕಲ್ಕಿ 2898 ಎಡಿ ಸಿನಿಮಾದ 3 ಗಂಟೆ 59 ನಿಮಿಷ ಇದ್ದು, ಅತಿ ದೊಡ್ಡ ಸಿನಿಮಾವಾಗಿದೆ. ಅಂದರೆ 1 ನಿಮಿಷ ಕಡಿಮೆ 4 ಗಂಟೆ ಈ ಸಿನಿಮಾ ಥಿಯೇಟರ್ನಲ್ಲಿ ನೀವು ನೋಡಬಹುದು. ಸಿನಿಮಾದ ಟ್ರೈಲರ್ನಲ್ಲಿ ಭೂಮಿ ಮೇಲೆ ಎಲ್ಲ ನಾಶ ಆದರು.. ಕಾಶಿ ಮಾತ್ರ ಉಳಿದುಕೊಳ್ಳುತ್ತದೆ ಎಂಬ ಎಳೆ ಇದೆ.
ಸಿನಿಮಾವನ್ನು ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಕಮಲ್ ಹಾಸನ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ, ದುಲ್ಕರ್ ಸಲ್ಮಾನ್ ಮತ್ತು ವಿಜಯ್ ದೇವರಕೊಂಡ ಇದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್ ಅಡಿ ಈ ಅದ್ಭುತ ಚಿತ್ರ ಮೂಡಿ ಬಂದಿದೆ.